ಸಕಲೇಶಪುರ: ಹಲ್ಲೆ ಮತ್ತು ಕೊಲೆಯತ್ನ ಪ್ರಕರಣಕ್ಕೆ ಸಂಬಂದಿಸಿದಂತೆ ಕಾಂಗ್ರೇಸ್ ಪಕ್ಷದ ಪುರಸಭೆಯ ನಾಮನಿರ್ದೇಶಿತ ಸದಸ್ಯೆ ಹಾಗೂ ವಾರಪತ್ರಿಕೆಯ ವರದಿಗಾರ ಎಸ್ ಕೆ ಪ್ರದೀಪ್ ಹಾಗೂ ಇಬ್ಬರ ವಿರುದ್ದ ಪಟ್ಟಣ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಪಟ್ಟಣದ ಚಂಪಕನಗರದ ನಿವಾಸಿ ಸಂದೇಶ್(24) ಮತ್ತು ಜಗದೀಶ್(35) ಎಂಬುವರ ಮೇಲೆ ಭಾನುವಾರ ರಾತ್ರಿ ಬಿಯರ್ ಬಾಟಲಿಯಿಂದ ಹಲ್ಲೆನಡೆಸಿದ್ದು ಪ್ರಕರಣಕ್ಕೆ ಸಂಬಂದಿಸಿದಂತೆ ಎಸ್ ಕೆ ಪ್ರದೀಪ್, ಮೋಹನ್ ಅಲಿಯಾಸ್ ಮೋನಕಿ ಮತ್ತು ವಾಸು ಇವರುಗಳ ವಿರುದ್ದ ಐಪಿಸಿ ಸಕ್ಷನ್ 341,324 ಮತ್ತು 506 ಕಲಂ ಮೊಕದ್ದಮೆ ದಾಖಲಾಗಿದೆ.
ಪ್ರಕರಣದ ಹಿನ್ನಲೆ: ಸಂದೇಶ್(24) ತನ್ನ ವ್ಯವಹಾರ ಮಗಿಸಿ ರಾತ್ರಿ 9 ಗಂಟೆಯ ಸಮಯದಲ್ಲಿ ಪಟ್ಟಣದ ಚಂಪಕನಗರದ ವೃತ್ತದ ಬಳಿ ಕಾರಿನಲ್ಲಿ ಬರುತ್ತಿದ್ದಾಗ ಬೈಕಿನಲ್ಲಿ ಅಡ್ಡಗಟ್ಟಿ ಹಲ್ಲೆನಡೆಸಿದ್ದಾರೆ ಎಂದು ದೂರುನೀಡಲಾಗಿದೆ
ಮೋಹನ್ ಎಂಬಾತ ಬಿಯರ್ ಬಾಟಲಿಯನ್ನು ರಸ್ತೆಗೆ ಒಡೆದು ನಂತರ ಅರ್ದ ಬಾಟಲಿಯಿಂದ ಸಂದೇಶ್ ಹೊಟ್ಟೆಗೆ ಬಿಯರ್ ಬಾಟಲಿ ಚುಚ್ಚಲು ಯತ್ನಿಸಿದಾಗ ಸಂದೇಶ್ ರಕ್ಷಣೆಗೆ ದಾವಿಸಿದ ಜಗದೀಶ್ ಕೈಗೆ ಬಾಟಲಿ ಚುಚ್ಚಿ ಗಾಯಗೊಂಡಿದೆ.
ಸಂದೇಶ್(24) ಮತ್ತು ಜಗದೀಶ್(35) ಪಟ್ಟಣದ ಕ್ರಾರ್ಫಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದು ಪೋಲಿಸರಿಗೆ ದೂರು ನೀಡಿದ್ದಾರೆ.
ಮೋಹನ್ ಅಲಿಯಾಸ್ ಮೋನಕಿ 8 ವರುಶಗಳ ಹಿಂದೆ ಸಂದೇಶ್ ಸಹೋದರನ ಹರೀಶ್‍ನನ್ನು ಕೊಲೆಮಾಡಿದ ಪ್ರಕರಣದ ಆರೋಪಿಯಾಗಿದ್ದು ಪ್ರಕರಣ ಇನ್ನು ನ್ಯಾಯಲಯದಲ್ಲಿ ವಿಚಾರಣೆಯಲ್ಲಿದೆ. ಭಾನುವಾರ ಹಲ್ಲೆನಡೆಸಿದ ಸಂದರ್ಭದಲ್ಲಿ ಸಂದೇಶ್‍ನನ್ನು ಕೊಲೆಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆ ಮತ್ತು ಕೊಲೆಯತ್ನ ನಡೆಸಿರುವ ಎಸ್ ಕೆ ಪ್ರದೀಪ್ ಕಾಂಗ್ರೇಸ್ ಪಕ್ಷದ ಪುರಸಭೆಯ ನಾಮನಿರ್ದೇಶಿತ ಸದಸ್ಯೆ ನಾಗಿದ್ದು ಕನ್ನಡ ಕಾವಲು ಪಡೆಯ ಅಧ್ಯಕ್ಷನಾಗಿದ್ದಾನೆ ಹಾಗೂ ಭ್ರಷ್ಟರ ಬೇಟೆ ವಾರಪತ್ರಿಕೆಯ ವರದಿಗಾರ ನಾಗಿದ್ದಾನೆ.

No comments:
Post a Comment