BHEEMA VIJAYA KARKAN25113/13/7/2015-TC HASSAN

67ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಎ. ಮಂಜು




ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 67ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ನಡೆಸಿಕೊಟ್ಟರು.
     

ಜೀಪ್ ಮೂಲಕ ತೆರಳಿದ ಸಚಿವರು ಭಾಗವಹಿಸಿದ್ದ ತಂಡಗಳಿಂದ ವಂಧನೆ ಸ್ವೀಕರಿಸಿದರು. ನಗರದ ವಿವಿಧ ಶಾಲೆ ಮತ್ತು ಪೊಲೀಸ್ ಸಿಬ್ಬಂದಿ, ಸೇವಾದಳ, ಎನ್.ಸಿ.ಸಿ. ಸ್ಕೌಟ್ ಅಂಡ್ ಗೈಡ್ಸ್ ಸೇರಿದಂತೆ 43 ನಾನಾ ತಂಡಗಳು ಸಚಿವರ ಮುಂದೆ ತೆರಳಿ ಗೌರವ ಸಲ್ಲಿಸಿದರು. ರಾಷ್ಟ್ರಗೀತೆ, ನಾಡಗೀತೆಯನ್ನು ವಿಭಜಿತ ಶಾಲೆ ಮಕ್ಕಳು ಹಾಡಿದರು. ಈ ವೇಳೆ ಎಲ್ಲಾ ಎದ್ದು ನಿಂತು ಗೌರವ ಸೂಚಿಸಿದರು.
     

ನಂತರ ಉದ್ದೇಶಿಸಿ ಮಾತನಾಡಿದ ಸಚಿವರು, ಪ್ರಜಾಪ್ರಭುತ್ವದ ವಾಸ್ತವಿಕ ಅರ್ಥದ ಮೂಲ ಆಶಯಗಳನ್ನು ಒಳಗೊಂಡ ಭಾರತದ ಸಂವಿಧಾನ 1950ರ ಜನವರಿ 26 ರಂದು ಜಾರಿಯಾಯಿತು ಎಂದರು. ಗಣತಂತ್ರ ವ್ಯವಸ್ಥೆಯ ಸಿದ್ಧಾಂತಗಳಿಗೆ ಮಾನ್ಯತೆ ಲಭ್ಯವಾಗಿ, ಭಾರತದ ಎಲ್ಲಾ ರಾಜ್ಯಗಳ ಒಗ್ಗಟ್ಟನ್ನು ಜಗತ್ತಿಗೆ ಸಾರುವ ಸದೃಡ ರಾಷ್ಟ್ರದ ಜನನದ ಶುಭ ದಿನವೇ ಗಣರಾಜ್ಯೋತ್ಸವ ಎಂದು ಶುಭ ಹಾರೈಸಿದರು.

ಮಾನವ ಹಕ್ಕುಗಳ ಮಹಾನ್ ಪ್ರತಿಪಾದಕ, ಸಾಮಾಜಿಕ ನ್ಯಾಯದ ಹರಿಕಾರ, ಜಾತ್ಯಾತೀತ ನವಭಾರತ ನಿರ್ಮಾಣ ಮಾಡಿದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್. ಇವರು ಬರೆದ ಬಹು ಭಾಷವುಳ್ಳರಾಗಿದ್ದ ಜಗತ್ತಿನ ಐದು ಜನ ವಿದ್ವಾಂಶರಲ್ಲಿ ಒಬ್ಬರಾಗಿದ್ದರು. ಭಾರತದಲ್ಲಿ ನೂರಾರು ವರ್ಷಗಳಿಂದ ನೆಲೆಸಿದ್ದ ಜಾತಿ ವ್ಯವಸ್ಥೆ, ಗುಲಾಮಗಿರಿ, ಅಪಮಾನ, ಶೋಷಣೆ ಹಾಗೂ ಎಲ್ಲಾ ರೀತಿಯ ಅನ್ಯಾಯಗಳನ್ನು ಸ್ವತಃ ಅನುಭವಿಸಿದ ಅವರು, ಭಾರತದಲ್ಲಿ ಬೇರು ಬಿಟ್ಟಿದ್ದ ಎಲ್ಲಾ ಅಸಮಾನತೆಗಳಿಗೆ ಮಂಗಳ ಹಾಡಿದರು. ಈ ದೇಶದ ಕಾನೂನು ಗೌರವಿಸುವ-ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ನಾವೆಲ್ಲಾ ಒಂದೆ ಎಂಬ ಭಾವನೆಯನ್ನು ಬೆಸೆಯುವ ಈ ದೇಶದ ಪ್ರಗತಿಗೆ ಕೈ ಜೋಡಿಸುವ ಸಮಪಾಲು ಸಮಬಾಳು ಎಂಬ ತತ್ವ ಸಿದ್ದಾಂತಗಳಿಗೆ ಮಾನ್ಯತೆ ನೀಡುವ ದೃಢ ಸಂಕಲ್ಪ ನಮ್ಮದಾಗಬೇಕು ಎಂದು ಕರೆ ನೀಡಿದರು.
   

 ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಇದೆ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು. ಸ್ವಾತಂತ್ರ್ಯ ಹೋರಾಟಗಾರರು ಅರಸೀಕೆರೆಯ ಕೆ.ಆರ್.ಗೋಪಾಲ್, ಹುತಾತ್ಮ ಸೈನಿಕ ಕುಟುಂಬದ ಸದಸ್ಯರು ದಿವಂಗತ ಬಿಹೆಚ್.ಎಂ(ಓಪಿಆರ್) ಸಿ. ಯೋಗಾನಂದ, ಸಮಾಜ ಸೇವಕ ರಾಜೀವ್ ಆಸ್ಪತ್ರೆಯ ಡಾ. ರಾಜೀವ್, ಅರಕಲಗೂಡು ತಾಲ್ಲೂಕು ಕೈಗಾರಿಕಾ ಕಸುಬುದಾರರ ವಿವಿದೋದ್ದೇಶ ಸಹಕಾರ ಸಂಘ ನಿ. ಕೃಷ್ಣೇಗೌಡ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಬಿ.ಸಿ.ನರಸೇಗೌಡ, ಪತ್ರಿಕಾ ಕ್ಷೇತ್ರದಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ವಿಭಾಗದ ಆರ್.ಮೋಹನ್ ಕೃಷ್ಣ, ಪೋಲೀಸ್ ವಿಭಾಗದಲ್ಲಿ ಸಹಾಯಕ ರಿಸರ್ವ್ ಸಬ್-ಇನ್ಸ್‍ಪೆಕ್ಟರ್,ಜಿಲ್ಲಾ ಸಶಸ್ತ್ರ ಪಡೆಯ ಸಿ.ಎಲ್. ರಂಗಸ್ವಾಮಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವಾಹನ ಚಾಲಕರು ಬಿ.ಎನ್.ನಾಗರಾಜು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿಗಳು ಮುತ್ತೇಗೌಡ, ಸರ್ಕಾರಿ ಕಲಾ ಕಾಲೇಜು ಎನ್.ಸಿ.ಸಿ ಕ್ಯಾಡೆಟ್ ಎಸ್.ಎಸ್. ಪ್ರಜ್ವಲ್, ಪೌರ ಕಾರ್ಮಿಕರು ಗೋಪಾಲ್, ರಂಗೇಗೌಡ, ಅತ್ಯುತಮ ಮತ್ತು ಪ್ರಾಮಾಣಿಕ ಆಟೋ ಚಾಲಕರು ದಾಸಶೆಟ್ಟಿ ಇವರನ್ನು ಸನ್ಮಾನಿಸಿ ಗೌರವಿಸಿದರು.
   


ಆಲೂರು ತಾಲ್ಲೂಕಿನ ಕಣತೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಬಿ.ಎಂ.ಜಗದೀಶ್, ಬೇಲೂರು ತಾಲ್ಲೂಕು ತಹಸೀಲ್ದಾರ್ ಬಿ.ಎ.ಜಗದೀಶ್ ಮತ್ತು ಹಾಸನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಗ್ರಂಥಪಾಲಕರಾದ ಎಂ.ಸಿ.ರಾಧ ಇವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರಶಸ್ತಿ ಪ್ರಧಾನ ಮಾಡಿದರು.
 

    ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭಗೊಂಡ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮವಾದ ಸ್ವಾತಂತ್ರ್ಯ ನಂತರದ ಭಾರತದ ಸಮಸ್ಯೆಗಳು ಹಾಗೂ ಒಕ್ಕೂಟ ರಾಜ್ಯ ಸ್ಥಾಪನೆ ಬಗ್ಗೆ ಮಕ್ಕಳು ರೂಪಕ ಮೂಲಕ ನೃತ್ಯ ಮಾಡಿ ಗಮನಸೆಳೆದರು. ಮಕ್ಕಳಿಂದ ಯೋಗಾಸನ ಕೂಡ ಪ್ರದರ್ಶಿಸಲಾಯಿತು.
   

ಇದೆ ವೇಳೆ ಕ್ಷೇತ್ರದ ಶಾಸಕರಾದ ಹೆಚ್.ಎಸ್. ಪ್ರಕಾಶ್, ಜಿಲ್ಲಾಧಿಕಾರಿ ಉಮೇಶ್ ಹೆಚ್. ಕುಸುಗಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಅಹಾರ ನಿಗಮ ಮಂಡಳಿ ಅಧ್ಯಕ್ಷರಾದ ಎಸ್.ಎಮ್. ಆನಂದ್, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್. ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ತಹಸೀಲ್ದಾರ್ ವಿ. ಮಂಜುನಾಥ್, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್, ಆಯುಕ್ತರಾದ ನಾಗಭೂಷಣ್, ಉಪವಿಭಾಗಧಿಕಾರಿ ವಿಜಯ, ಡಾ. ಹೆಚ್. ನಾಗರಾಜ್, ಜಿಪಂ ಕೆಡಿಪಿ ಸದಸ್ಯ ಜಿ. ದೇವರಾಜೇಗೌಡ, ಇತರರು ಭಾಗವಹಿಸಿದ್ದರು.

No comments:

Post a Comment