BHEEMA VIJAYA KARKAN25113/13/7/2015-TC HASSAN

ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನಕ್ಕೆ ಎ. ಮಂಜು ಚಾಲನೆ



ಹಾಸನ: ನಗರದ ಸಿಲ್ವರ್ ಜ್ಯೂಬಿಲಿ ಆರ್ಚರ್ಡ್ ಪಾರ್ಕ್‍ನಲ್ಲಿ ತೋಟಗಾರಿಕೆ ಇಲಾಖೆ, ಹಾಸನ ಜಿಲ್ಲಾ ಪಂಚಾಯತ್, ಹೇಮಾವತಿ ತೋಟಗಾರಿಕೆ ಸಂಘ ಹಾಗೂ ಆತ್ಮ ಯೋಜನೆ ಕೃಷಿ ಇಲಾಖೆ, ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿರುವ ತೋಟಗಾರಿಕೆ ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಟೇಪ್ ಕತ್ತರಿಸಿ ಹಾಗೂ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು.
 
ನಂತರ ಫಲಪುಷ್ಪ ಪ್ರದರ್ಶನದಲ್ಲಿ ಹೂವಿನಿಂದ ನಿರ್ಮಿಸಲಾಗಿರುವ ನಂದಿ, ಬಿಳಿ ಬಣ್ಣದ ಗುಲಾಬಿ ಹೂ ಹಾಗೂ ಸೇವಂತಿಗೆ ಹೂಗಳಿಂದ ನಿರ್ಮಾಣ ಮಾಡಲಾಗುತ್ತಿದೆ. ಇದರ ಜೊತೆಗೆ ಎರೆಡು ನಿಜಗಾತ್ರದ ಜಿರಾಫೇ, ಫೋಟೋಫ್ರೇಮ್, ಅಣಬೆ ಮತ್ತು ಹಣ್ಣುಗಳನ್ನು ವಿವಿಧ ಹೂಗಳಿಂದ ನಿರ್ಮಿಸಲಾಗಿದೆ. ಬಾಳೆಕಂಬಗಳಿಂದ ತಾಜ್‍ಮಹಲ್ ಕಲಾಕೃತಿ, ವಿವಿಧ ತರಕಾರಿಗಳಿಂದ ಕಲಾಕೃತಿಗಳ ಕೆತ್ತನೆ ಹಾಗೂ ಊಟಿ ಹೂಗಳ ಜೋಡಣೆಯನ್ನು ಸಚಿವರು ವೀಕ್ಷಣೆ ಮಾಡಿ ಶ್ಲಾಘನೆವ್ಯಕ್ತಪಡಿಸಿದರು.

ಇದೆ ವೇಳೆ ಕ್ಷೇತ್ರದ ಶಾಸಕರಾದ ಹೆಚ್.ಎಸ್. ಪ್ರಕಾಶ್, ಜಿಲ್ಲಾಧಿಕಾರಿ ಉಮೇಶ್ ಹೆಚ್. ಕುಸುಗಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್. ವೆಂಕಟೇಶ್, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಸುಮ ಹಾಗೂ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಕೆ.ಮಂಗಳ ಇತರರು ಪಾಲ್ಗೊಂಡಿದ್ದರು.

No comments:

Post a Comment