ಹಾಸನ: ಪ್ರತಿ ಶಾಲೆಯಲ್ಲೂ ಮಕ್ಕಳಿಗೆ ತಪ್ಪದೆ ಬ್ಯಾಂಡ್‍ಸೆಟ್ ಕಲಿಸಬೇಕೆಂದು ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಾಂತರಾಜ್ ಕರೆ ನೀಡಿದ್ದಾರೆ.
ನಗರದ ನಗರದ ಮಹಾರಾಜ ಉದ್ಯಾನವನದಲ್ಲಿ ಭಾರತ ಸೇವಾದಳ ಜಿಲ್ಲಾ ಘಟಕದಿಂದ ಬ್ಯಾಂಡ್‍ಸೆಟ್ 5 ದಿವಸದ ತರಬೇತಿ ಮುಕ್ತಾಯ ಶಿಬಿರದಲ್ಲಿ ಮಾತನಾಡಿ, ಇಲ್ಲಿ ಕಲಿತಂತ ವಿಧ್ಯೆಯನ್ನು ಶಾಲಾ ಮಕ್ಕಳಿಗೆ ಕಲಿಸಿಕೊಡಬೇಕು. ಪ್ರತಿ ಮಕ್ಕಳಲ್ಲೂ ದೇಶಾಭಿಮಾನ ಬರುವಲ್ಲಿ ಬ್ಯಾಂಡ್‍ಸೆಟ್ ಕೂಡ ಮಹತ್ವವಾಗಿದೆ. ಅದಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ನಮ್ಮೆಲಾರ ಕರ್ತವ್ಯ ಎಂದು ಕಿವಿಮಾತು ಹೇಳಿದರು. ಎಲ್ಲಾ ಶಾಲೆಯಲ್ಲೂ ಬ್ಯಾಂಡ್‍ಸೆಟ್ ಹಾಗೂ ಭಾರತ ಸೇವಾದಳ ಘಟಕ ಇರಬೇಕು ಎಂದರು. ಶಿಕ್ಷಕರಿಗೆ ಇಂತಹ ಶಿಬಿರದಲ್ಲಿ ತರಬೇತಿ ನೀಡಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಇದೆ ವೇಳೆ ಶ್ಲಾಘಿನೆ ವ್ಯಕ್ತಪಡಿಸಿದರು.
ಬ್ಯಾಂಡ್‍ಸೆಟ್ 5 ದಿವಸದ ತರಬೇತಿ ಮುಕ್ತಾಯ ಶಿಬಿರದಲ್ಲಿ Éೀವಾದಳ ರಾಜ್ಯ ಘಟಕದ ಕಾರ್ಯದರ್ಶಿ ಕಮಲ್‍ಕುಮಾರ್, ತಹಸೀಲ್ದಾರ್ ಮಂಜುನಾಥ್, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ. ಶಿವಣ್ಣ, ಭಾರತ ಸೇವಾಧಳ ಜಿಲ್ಲಾ ಸಂಘಟಕರು ರಾಣಿ ಇತರರು ಪಾಲ್ಗೊಂಡಿದ್ದರು.

No comments:
Post a Comment