ಹಾಸನ: ಇಂದಿನ ಜನಪ್ರತಿನಿಧಿಗಳಿಗೆ ಚರಿತ್ರೆಯೇ ತಿಳಿದಿಲ್ಲ ಎಂದು ನೆಹರು ಸ್ಮರಣೆ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಮ್. ಶಿವಣ್ಣ ಆತಂಕವ್ಯಕ್ತಪಡಿಸಿದ್ದಾರೆ.
ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ನೆಹರು ಜಯಂತಿ ಕುರಿತು ಸ್ಮರಣೆ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ಸಮಾರಂಭವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸವನ್ನು ಏತಕ್ಕಾಗಿ ಓದಬೇಕು, ಅದರಿಂದ ಏನು ಪ್ರಯೋಜನ ಎಂಬುದು ಅರ್ಥ ಮಾಡಿಕೊಳ್ಳಬೇಕಾಗಿದೆ. ಆದರೇ ಇಂದಿನ ಜನಪ್ರತಿನಿಧಿಗಳು ಯಾವ ಚರಿತ್ರೆಯನ್ನು ತಿಳಿಯದೆ ಇರುವುದು ಸಮಾಜದ ಬೆಳವಣಿಗೆಗೆ ಮಾರಕ ಎಂದರು.
ನಿರ್ಜಿವ ವಸ್ತುಗಳೇ ಬೆಳಕು ನೀಡುವಾಗ ಜೀವ ಇರುವ ನಾವುಗಳು ಸಮಾಜಕ್ಕೆ ಯಾವ ಕೊಡುಗೆ ನೀಡಿದ್ದೇವೆ ಎಂಬುದನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕು. ಜನಪ್ರತಿನಿಧಿಗಳು ತಮ್ಮ ಸೌಲಭ್ಯದ ಬಗ್ಗೆ ಯೋಚಿಸಿದರೇ ಸರ್ಕಾರಿ ನೌಕರರ ಸಂಬಳ ಹೆಚ್ಚಿಸಲು ಒಂದು ಆಯೋಗವನ್ನೆ ತರಲಾಗಿದೆ. ಪಾರ್ಲಿಮೆಂಟ್ ಸದಸ್ಯರಿಗೆ ಲಕ್ಷಾಂತರ ರೂಗಳು ಬರುತ್ತಿದ್ದರೂ ಮತತೆ ಹೆಚ್ಚಳ ಮಾಡಲಾಗುತ್ತಿದೆ. ಆದರೇ ಇವರಿಂದ ಸಾಮಾಜಿಕ ನ್ಯಾಯದ ಕೊಡುಗೆ ಏನು ಎಂದು ಹೇಳಿದರು. ಆದರೇ ನೆಹರು ಕೊಟ್ಟ ಕೊಡುಗೆ ಅಪಾರವಾಗಿದೆ. ಪ್ರಸ್ತುತ ರಾಜಕಾರಣಿಗಳು ಇತಿಹಾಸವನು ಅರ್ಥ ಮಾಡಿಕೊಂಡರೇ ಯಾವ ಅಹಿತಕರ ಘಟನೆ ನಡೆಯಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದರು.
ಹುಟ್ಟು ಮೊದಲಲ್ಲ, ಆಗೇ ಸಾವು ಕೊನೆಯಲ್ಲ, ಇದರ ನಡುವೇ ಕೊಂಡಿ ಸವೆದು ಹೋಗುವ ಮೊದಲೇ ಸಾರ್ಥಕ ಬದುಕು ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಶಿಕ್ಷಕರು ಎಂದರೇ ವಿದ್ಯಾರ್ಥಿಗಳಿಗೆ ಹೊಸ ಹೊಸ ವಿಚಾರವನ್ನು ಬಿತ್ತಿ ಮುಂದೆ ಒಳ್ಳೆಯ ಪ್ರಜೆಗಳಾಗಲು ಹಾಗೂ ಉತ್ತಮ ಬವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು. ಇತಿಹಾಸ ಎಂಬುದು ತುಂಬ ದೊಡ್ಡದು ತಿಳಿದುಕೊಳ್ಳುವಂತಹ ಕೆಲಸ ಆಗಬೇಕಾಗಿದೆ ಎಂದರು. ಸ್ವಾತಂತ್ರ್ಯ ಎನ್ನುವುದು ಸುಮ್ಮನೆ ಬಂದಿರುವುದಿಲ್ಲ. ಸಹಸ್ರಾರು ಜನ ಪ್ರಾಣ ನೀಡಿದ್ದಾರೆ. ಅದೇ ರೀತಿ ಸರ್ವಾವನ್ನು ಕಳೆದುಕೊಂಡಿದ್ದಾರೆ. ಎಲ್ಲಾ ವಿಚಾರ ತಿಳಿಯಬೇಕಾದರೇ ಮೊದಲು ಚರಿತ್ರೆ ಓದಿ ಇತಿಹಾಸ ತಿಳಿದುಕೊಳ್ಳುವಂತೆ ಕರೆ ನೀಡಿದರು.
ವಿನೋದ್ ಚಂದ್ರ :
ವಾರ್ತಾಧಿಕಾರಿ ವಿನೋದ್ ಚಂದ್ರ ಪ್ರಾಸ್ತವಿಕ ನುಡಿಯಲ್ಲಿ ಮಾತನಾಡಿ, ಜವಾಹರ್ ನೆಹರು ಅವರ 125ನೇ ವರ್ಷದ ಜಯಂತಿ ಅಂಗವಾಗಿ ಚಿತ್ರ ಪ್ರದರ್ಶನ ಮಾಡಲಾಗಿದೆ. ಮಕ್ಕಳಲ್ಲಿ ನೆಹರು ಪರಿಕಲ್ಪನೆ ಇರುವ ಬಗ್ಗೆ ತಿಳಿಯುವ ಒಂದು ಪ್ರಯತ್ನವಾಗಿದೆ ಎಂದರು. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಪ್ರದರ್ಶನ ಮಾಡುವ ಕೆಲಸ ಮಾಡಲಾಗುವುದು ಎಂದರು. ಇಲ್ಲೊಂದು ಚಿತ್ರಕಲಾ ಗ್ಯಾಲರಿ ಮಾಡುವ ಬಗ್ಗೆ ಮನವರಿಕೆ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಇದೆ ವೇಳೆ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಪ್ರಭಾಕರ್, ಹಿರಿಯ ಪತ್ರಕರ್ತ ಉದಯಕುಮಾರ್, ಚಿತ್ಕಲಾ ಪೌಢೇಶನ್ ಹಾಗೂ ಹಿರಿಯ ಚಿತ್ರಕಲಾವಿದ ದೇಸಾಯಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕುಮಾರ್ ಇತರರು ಪಾಲ್ಗೊಂಡಿದ್ದರು. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರವಿ ಸ್ವಾಗತಿಸಿದರು. ರಾಣಿ ಪ್ರಾರ್ಥಿಸಿದರು.

No comments:
Post a Comment