BHEEMA VIJAYA KARKAN25113/13/7/2015-TC HASSAN

ಪತ್ರಿಕಾ ವಿತರಕ ನಿಧನ: ದೇಹದಾನ



ಸಕಲೇಶಪುರ: ಪಟ್ಟಣದ ಹಿರಿಯ ಪತ್ರಿಕಾ ವಿತರಕ ಬಿ.ಎಲ್.ಮಂಜುನಾಥ ಶ್ರೇಷ್ಟಿ ಅವರು ಶನಿವಾರ ನಿಧನ ಹೊಂದಿದ್ದು, ತಮ್ಮ ದೇಹದಾನ ಮಾಡಿ ಮಾದರಿಯಾಗಿದ್ದಾರೆ.
ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೊಳೆಬೀದಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಕಳೆದ ಹಲವು ದಶಕಗಳಿಂದ ವಿವಿಧ ಪತ್ರಿಕೆಗಳ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮೃತರ ಇಚ್ಛೆಯಂತೆ ತಾಔಉ ದೇಹದಾನ ಮಾಡುವುದಾಗಿ ನೊಂದಾಯಿಸಿಕೊಂಡಿದ್ದರಿಂದ ಹಾಸನದ ಮಂಜುನಾಥೇಶ್ವರ ಆಯುರ್ವೆದ ಕಾಲೇಜಿಗೆ ದೇಹವನ್ನು ಕೊಂಡೊಯ್ಯಲಾಯಿತು.
ಮಂಜುನಾಥ ಶ್ರೇಷ್ಟಿ ಅವರ ಸುದೀರ್ಘ ಪತ್ರಿಕಾ ಸೇವೆ ಪರಿಗಣಿಸಿ ಕಳೆದ ಜುಲೈ ತಿಂಗಳಲ್ಲಿ ನಡೆದ ತಾಲೂಕು ಪತ್ರಕರ್ತರ ದಿನಾಚರಣೆಯಲ್ಲಿ ಸನ್ಮಾನಿಸಲಾಗಿತ್ತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಂಜುನಾಥ ಶ್ರೇಷ್ಟಿ ಅವರ ಸ್ಮರಣಾರ್ಥ ಸಂತಾಪ ಸಭೆ ನಡೆಸಿ ಮೌನಾಚರಣೆ ಮಾಡಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ದವಿಕುಮಾರ್, ಕಾರ್ಯದರ್ಶಿ ಜೈಕುಮಾರ್ ಮಲ್ನಾಡ್ ಹಾಗೂ ಎಲ್ಲಾ ಸದಸ್ಯರು ಹಾಜರಿದ್ದರು.
ಫೊಟೋ(2sಞಠಿಠಿ1)- ಸಕಲೇಶಪುರದ ಪತ್ರಿಕಾ ವಿತರಕ ಮಂಜುನಾಥ ಶ್ರೇಷ್ಟಿ

No comments:

Post a Comment