ಸಕಲೇಶಪುರ: ರಾಜ್ಯ ಮಟ್ಟದಲ್ಲಿ ಮನ್ನಣೆ ಹೊಂದಿರುವ ತಮ್ಮ ಸಂಸ್ಥೆಯಿಂದ ಕಾನೂನು ಬಾಹಿರವಾಗಿ ಯಾವುದೆ ಜೂಜಾಟ ನಡೆಸುತ್ತಿಲ್ಲ ಎಂದು ಹಾನುಬಾಳು ಪ್ಲಾಂಟರ್ಸ್ ಕ್ಲಬ್ ಸ್ಪಷ್ಟನೆ ನೀಡಿದೆ.
ಪಟ್ಟಣದಲ್ಲಿ ಈ ಕ್ಲಬ್ ಅಧ್ಯಕ್ಷ ರಾಜೀವ್ ಅವರು ಶನಿವಾರ ಪತ್ರಿಕಾಗೋಷ್ಟಿ ನಡೆಸಿ, ಕ್ಲಬ್‍ನ 25ನೆ ವಾರ್ಷಿಕೋತ್ಸವದ ಅಂಗವಾಗಿ ಜನವರಿ 10 ರಂದು ಭಾನುವಾರ ನಡೆಸಲು ಉದ್ದೇಶಿಸಿರುವುದು ರಮ್ಮಿ ಮೇಳವೆ ಹೊರತು ಜೂಜಾಟವಲ್ಲ. ಈ ಪಂದ್ಯದಿಂದ ಜಾಣ್ಮೆ ಪರೀಕ್ಷೆಯಾಘುವ ಜೊತೆಗೆ ಬಹುಮಾನ ಪಡೆಯುವ ಸಂಭ್ರಮಾಚರಣೆಯಾಗಿದೆ. ಆದರೆ ಕಾಫಿ ಬೆಳೆಗಾರರ ಬಗ್ಗೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವ ಕೆಲಸ ಆಗುವುದಿಲ್ಲ ಎಂದರು.
ಈ ಪಂದ್ಯದಲ್ಲಿ ಕೇವಲ 500 ಮಂದಿಗೆ ಮಾತ್ರ ಪ್ರವೇಶವಿದ್ದು ಕ್ಲಬ್‍ನ ಒಡನಾಟ ಹೊಂದಿದ ಹಾಗೂ ಆಟದ ಬಗ್ಗೆ ಗಂಧಗಾಳಿ ಇರುವವರು ಮಾತ್ರ ಭಾಗವಹಿಸುತ್ತಾರೆ. ಅಲ್ಲದೆ ಸ್ಪರ್ಧೆ ವೀಕ್ಷಿಸಲು ಬರುವವರಿಗೆ ಉಚಿತ ಪ್ರವೇಶ ನೀಡಿದರೆ ಅನಗತ್ಯ ದೊಂಬಿ, ಗೊಂದಲ ಸೃಷ್ಟಿಯಾಗುತ್ತದೆ ಎಂಬ ಕಾರಣಕ್ಕೆ 3 ಸಾವಿರ ರೂ.ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಇದು ಮನರಂಜನೆಯೆ ಹೊರತು ಬಲವಂತವಾಗಿ ಕರೆತಂದು ಹಣ ಸುಲಿಗೆ ಮಾಡುವ ಉದ್ದೇಶವಿಲ್ಲ ಎಂದರು.
ಕ್ಲಬ್ ಒಳಾಂಗಣದಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ವ್ಯಾಟ್‍ಮಿಂಟನ್ ಕೋರ್ಟ್ ಸ್ಥಾಪಿಸಲು ನಿಧಿ ಸಂಗ್ರಹ ಮಾಡುವ ಉದ್ದೇಶದಿಂದ ಈ ಪಂದ್ಯ ಏರ್ಪಾಡು ಮಾಡಲಾಗಿದೆ. ಎಲ್ಲವೂ ಕಾನೂನಿನ ಚೌಕಟ್ಟಿನಲ್ಲಿಯೆ ನಡೆಯುತ್ತದೆ. ಈ ಹಿಂದೆ ಅಗನಿ ಸ್ವಾಭಾವಿಕ ಜಲಧಾರೆ ಯೋಜನೆ ಒಳಗೊಂಡಂತೆ ಅನಾಥಾಶ್ರಮ, ಅಂಗವಿಕಲ ಮಕ್ಕಳ ಶಾಲೆ ಒಳಗೊಂಡಂತೆ ಧನ ಸಹಾಯ, ದಆನ ನೀಡಿರುವ ಬಗ್ಗೆ ದಾಖಲೆಗಳಿವೆ. ತಮ್ಮ ಕ್ಲಬ್ ಬಗ್ಗೆ ಅಪಪ್ರಚಾರ ಮಾಡುವುದು ಬೇಡ. ಜೂಜಾಟ ನಡೆಸಿ ಬಡವರು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವ ಯಾವುದೆ ದುರುದ್ದೇಶ ಕ್ಲಬ್‍ಗೆ ಇಲ್ಲ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಹಾಣುಬಾಳು ಪ್ಲಾಂಟರ್ಸ್ ಕ್ಲಬ್‍ನ ಮೋಹನ್, ಪ್ರಶಾಂತ್ ಇದ್ದರು.
ಫೊಟೋ(2sಞಠಿಠಿ2)- ಸಕಲೇಶಪುರದಲ್ಲಿ ಶನಿವಾರ ಹಾನುಬಾಳು ಪ್ಲಾಂಟರ್ಸ್ ಕ್ಲಬ್ ಪದಾಧಿಕಾರಿಗಳು ಪತ್ರಿಕಾಗೋಷ್ಟಿ ನಡೆಸಿದರು.

No comments:
Post a Comment