ಹಾಸ£: ಕಾರ್ಮಿಕರ ಚಳುವಳಿಗೆ ದೊಡ್ಡ ಕೊಡುಗೆ ನೀಡಿ ದುಡಿಯುವವರ್ಗದ ವಿಮೋಚನೆಗಾಗಿ ದುಡಿದ ಸಂಗಾತಿ ಎಸ್.ಪ್ರಸನ್ನಕುಮಾರ್ ಅಗಲಿಕೆ ದುಡಿಯುವವರ್ಗಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಶ್ ಹೇಳಿದರು.
ಅವರು ಇಂದು ಹಾಸನದ ಆರ್.ಸಿ.ರಸ್ತೆಯಲ್ಲಿರುವ ಸಿಐಟಿಯು ಕಛೇರಿ ಶ್ರಮದಲ್ಲಿ ಹಾಸನ ತಾಲ್ಲುಕು ಸಮಿತಿ ಆಯೋಜಿಸಿದ್ದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಪ್ರಸನ್ನಕುಮಾರ್‍ರವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದರು. ಪಸನ್ನರವರು ವಿದ್ಯಾರ್ಥಿ, ಯುವಜನ ಚಳುವಳಿಯ ಮೂಲಕ ಕಾರ್ಮಿಕ ಸಂಘಟನೆಗೆ ಸೇರಿ ಅಸಂಘಟಿತ ಕಾರ್ಮೀಕರಿಂದ ಹಿಡಿದು ಸಂಘಟಿತ ವಲಯದ ಕಾರ್ಖಾನೆ ಕಾರ್ಮಿಕರು ಮತ್ತು ನೌಕರರವರೆಗೆ ಎಲ್ಲರನ್ನೂ ಸಂಘಟಿಸಿ ಅವರ ಹಕ್ಕುಗಳಿಗಾಗಿ ಸಮರಧೀರ ಹೋರಾಟಗಳನ್ನು ರೂಪಿಸುತ್ತಿದ್ದ ಸಂಗಾತಿ ಪ್ರಸನ್ನರವರ ನಿಧನ ಚಳುವಳಿಯನ್ನು ಮುನ್ನಡೆಸಲು ನಮ್ಮೆಲ್ಲರಿಗೂ ಹೆಚ್ಚಿನ ಜವಾಬ್ದಾರಿಯನ್ನು ಹೊರಿಸಿದೆ ಎಂದರು.
ಸಭೆಯು ಒಂದು ನಿಮಿಷಗಳ ಕಾಲ ಮೌನಾಚರಿಸುವ ಮೂಲಕ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು ನಂತರ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಎಚ್.ಆರ್.ನವಿನ್‍ಕುಮಾರ್ ಪ್ರಸ್ತುತ ಸಂದರ್ಭದಲ್ಲಿ ಆಳುವವರ್ಗ ಕಾರ್ಮಿಕ ವರ್ಗದ ಮೇಲೆ ನಡೆಸುತ್ತಿರುವ ವ್ಯವಸ್ಥಿತ ಧಾಳಿಗಳನ್ನು ಎದುರಿಸಲು ಪ್ರಸನ್ನಕುಮಾರ್‍ರಂತಹ ಕಾರ್ಮಿಕ ನಾಯಕರ ಸೇವೆ ಹೆಚ್ಚು ಅವಶ್ಯಕತೆ ಇರುವ ಸಂದರ್ಭದಲ್ಲಿ ಅವರ ಸಾವು ತುಂಬಲಾರದ ನಷ್ಟವನ್ನು ಉಂಟುಮಾಡಿದೆ ಎಂದರು
ಶ್ರಧ್ಧಾಂಜಲಿ ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಹಾಸನ ತಾಲ್ಲೂಕು ಅಧ್ಯಕ್ಷರಾದ ಮಂಜಮ್ಮ ವಹಿಸಿದ್ದರು, ನಿರೂಪಣೆಯನ್ನು ಕಾರ್ಯದರ್ಶಿಗಳಾದ ಜಿ.ಪಿ.ಸತ್ಯನಾರಾಯಣ, ವಂದನಾರ್ಪಣೆಯನ್ನು ಅರವಿಂದ ಮಾಡಿದರು ಸಭೆಯಲ್ಲಿ ಪೌರಕಾರ್ಮಿಕರ ಸಂಘದ ಪ್ರಕಾಶ್ ಮತ್ತು ಬಿಸಿಯೂಟ ನೌಕರರ ಸಂಘದ ಪುಷ್ಪ ಮಾತನಾಡಿದರು.

No comments:
Post a Comment