BHEEMA VIJAYA KARKAN25113/13/7/2015-TC HASSAN

ಕಸಾಪ ಚುನಾವಣೆ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ: ಸಂಗಮೇಶ್ ಬಾದವಾಡಗಿ


ಹಾಸನ: ಮುಂದೆ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಸ್ಪರ್ದೆ ಮಾಡುತ್ತಿರುವುದಾಗಿ ಕೇಂದ್ರ ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಸಂಗಮೇಶ್ ಬಾದವಾಡಗಿ ತಿಳಿಸಿದ್ದಾರೆ.
        ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಶತಮಾನೋತ್ಸವ ಸಂಭ್ರಮದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ನಾಡು ನುಡಿಗೆ ತನ್ನದೆಯಾದ ಕಾಣಿಕೆ ನೀಡುತ್ತಾ ಈಗ 6 ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ ಎಂದರು. ಗ್ರಾಮೀಣ ಪರಿಸರದಿಂದ ಬಂದ ನಾನು ಜಾತಿ ಮತಗಳಿಂದ ದೂರ ಇದ್ದೇನೆ. ಸಮಾಜಿಕ ಮತ್ತು ಸಂಸ್ಕøತಿಯ ಕಳಕಳಿ, ಕ್ರೀಯಾಶೀಲತೆ ಹಾಗೂ ಪ್ರಾಮಾಣಿಕತೆಗೆ ಕೇಂದ್ರ ಪರಿಷತ್‍ಗೆ ಗೌರವ ಸ್ಥಾನಕ್ಕೆ ಅರ್ಹನಾಗಿದ್ದೆ. ಡಾ|| ನಲ್ಲೂರ್ ಪ್ರಸಾದ್ ಹಾಗೂ ಪುಂಡಲೀಕ ಹಾಲಂಬಿ ಇವರ ಅಧ್ಯಕ್ಷತೆ ಅವಧಿಯಲ್ಲಿ ಚತುರತೆಯಿಂದ ಬೆಳೆದಿದ್ದೇನೆ. ಅವರ ಮಾರ್ಗದರ್ಶನದಂತೆ ನಾಲ್ಕು ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಜಿಲ್ಲಾ ತಾಲ್ಲೂಕ್ ಸಾಹಿತ್ಯ ಸಮ್ಮೇಳನಾ, ಹಳೆಗನ್ನಡ, ದಾಸ ಸಾಹಿತ್ಯ, ವಚನ ಸಾಹಿತ್ಯ, ರಾಷ್ಟ್ರಕವಿಗಳ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಕುರಿತು ವಿಚಾರ ಸಂಕಿರಣ ಸೇರಿದಂತೆ ಹಲವು ಯಶಸ್ವಿ ಕಾರ್ಯಕ್ರಮ ನಡೆಸಿರುವುದಾಗಿ ಹೇಳಿದರು. ಕವನ ಸಂಕಲನ, ಕಥಾ ಸಂಕಲನ, ಪ್ರಬಂಧ, ಪರಿಚಯಗ್ರಂಥ, ಪ್ರವಾಸ, ಸಾಃಇತ್ಯ, ಸಂಪಾದನೆ ಹೀಗೆ ವಿವಿಧ ಪ್ರಕಾರಗಳ 13 ಕೃತಿಗಳನ್ನು ಲೋಕಾರ್ಪಣೆ ಮಾಡಿದ ಕಿರಿಮೆ ನನ್ನದು ಎಂದು ಹೇಳಿದರು.
       ಚುನಾವಣೆಯಲ್ಲಿ ಸ್ಪರ್ದೆ ಮಾಡುತ್ತಿರುವ ನಾನು ಪ್ರಣಾಳಿಕೆಯನ್ನು ನಿರೂಪಿಸಿದ್ದು, ಅವುಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಿದ್ದೇನೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಪುರೋಭಿವೃದ್ಧಿಗೆ ಪೂರಕವಾಗಿ ಅನುಷ್ಠಾನಗೊಳ್ಳುವ ಅನೇಕ ಕಾರ್ಯಗಳು ನೆನಗುದಿಗೆ ಬಿದ್ದಿರುವುದನ್ನು ಅಭಿವೃದ್ಧಿಗೊಳಿಸಲಾಗುವುದು. ಸರ್ಕಾರ ಶತಮಾನೋತ್ಸವ ಭವನ ನಿರ್ಮಿಸಲು ಅನುಧಾನ ನೀಡಿದ್ದು, ಪರಿಷತ್ ಆವರಣದಲ್ಲಿಯೇ ಭವನ ನಿರ್ಮಾಣ ಮಾಡಲಾಗುವುದು. ಕಸಾಪ ವಿಸ್ತರಿತ ಕಾರ್ಯಾವ್ಯಾಪ್ತಿಗೆ ಅನುಕೂಲವಾಗಲು ವಿಶ್ವೇಶ್ವರ ಲೇ ಔಟ್‍ನಲ್ಲಿ ಮುಕ್ಕಾಲು ಎಕರೆ ನಿವೇಶನ ಮಂಜೂರು ಮಾಡಿದೆ. ಆದರೇ ಪರಿಷತ್ ಇಲ್ಲಿವರೆಗೂ ಪಡೆದುಕೊಂಡಿರುವುದಿಲ್ಲ. ತಕ್ಷಣ ಪರಿಷತ್ತಿಗೆ ದೊರಕಿಸಿ, ಭವನ ನಿರ್ಮಾಣ ಮಾಡುವುದಾಗಿ ಹೇಳಿದರು. ಯುವ ಬರಹಗಾರರಿಗೆ ಪ್ರೋತ್ಸಹಿಸಲು ತರಬೇತಿ ಕಮ್ಮಟ, ಸಮಾವೇಶ ನಡೆಸಲು ಘಟಕ ಸ್ಥಾಪಿಸಲಾಗುವುದು. ಇಂತಹ 12 ವಿಷಯವನ್ನು ಇಟ್ಟುಕೊಂಡು ಕಸಾಪವನ್ನು ಅಭಿವೃದ್ಧಿ ಪಡಿಸುವುದಲ್ಲದೆ ಸೌಜನ್ಯಯುತ ನಡತೆಯುಳ್ಳ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಬೇಕೆಂಬುದು ನನ್ನ ಬಯಕೆ ಎಂದು ಇದೆ ವೇಳೆ ತಿಳಿಸಿದರು.
       ಪತ್ರಿಕಾಗೋಷ್ಠಿಯಲ್ಲಿ ಅರಸೀಕೆರೆ ಕಸಾಪ ಮಾಜಿ ಕೋಶಾಧ್ಯಕ್ಷ ಶಿವಮೂರ್ತಿ, ಕೆ.ಆರ್. ಕಂದಗಲ್ ಹಾಗೂ ಅಜಿತ್ ಶೆಟ್ಟಿ ಉಪಸ್ಥಿತರಿದ್ದರು.
     


   

No comments:

Post a Comment