BHEEMA VIJAYA KARKAN25113/13/7/2015-TC HASSAN

ಕನ್ನಡ ನಾಡಿನಲ್ಲಿ ಕನ್ನಡಿಗನೆ ಸಾರ್ವಭೌಮವಾಗಲಿ ಸಿ.ಡಿ. ಮನುಕುಮಾರ್


ಹಾಸನ: ಕನ್ನಡ ನಾಡಿನಲ್ಲಿ ಕನ್ನಡಿಗನೆ ಸಾರ್ವಭೌಮವಾಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸುತ್ತಿದೆ ಎಂದು ಸಂಘಟನೆ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಕರೆ ನೀಡಿದ್ದಾರೆ.
     
ತಾಲ್ಲೂಕಿನ ಸಾಲಗಾಮೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕದಿಂದ ಇತ್ತಿಚಿಗೆ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ನಂತರ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ತಮಿಳರು ಹಾಗೂ ತೆಲುಗರ ಹಾವಳಿ ಹೆಚ್ಚಾದಗ ಕನ್ನಡಿಗರ ರಕ್ಷಣೆಗಾಗಿ ಕರವೇ ಮುಂದಾಗಿತ್ತು.

 ರಾಜಕೀಯದಲ್ಲಿ ಹಣಕ್ಕಾಗಿ ಎಂಎಲ್‍ಸಿಗಳನ್ನು ಬೇರೆ ಬೇರೆ ರಾಜ್ಯದಲ್ಲಿ ಮಾಡುತ್ತಿದ್ದು, ಆದರೇ ನಾಡಿನ ವಿಚಾರವಾಗಿ ಯಾವ ರಾಜಕೀಯ ಪಕ್ಷಗಳು ಧ್ವನಿ ಎತ್ತಲು ಮುಂದಾಗದಿರುವುದು ಆತಂಕದ ವಿಷಯ ಎಂದರು. ಬೆಳಗಾಂನಲ್ಲಿ ಗಡಿ ವಿಚಾರ ಇರಬಹುದು ಅದರಂತೆ ಜಲಾ ವಿಚಾರ ಇರಬಹುದು ಯಾವುದನ್ನು ಒಮ್ಮತದ ತೀರ್ಮಾನ ಮಾಡದಿರುವುದು ದುರದೃಷ್ಠಕರವಾಗಿದೆ ಎಂದು ಕಿಡಿಕಾರಿದರು. ನಾಡು ನುಡಿಗೆ ದಕ್ಕೆ ಬಂದ ಸಂದರ್ಭದಲ್ಲಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿರುವುದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ರೈಲ್ವೆ ಪರೀಕ್ಷೆಯಲ್ಲಿ ಬಿಹಾರದವರನ್ನೆ ತುಂಬುತ್ತಿದ್ದನ್ನು ಖಂಡಿಸಿ, ಕರವೇ ಕಾರ್ಯಕರ್ತರು ಆ ವೇಳೆ ಹೋರಾಟ ಮಾಡಿದಲ್ಲದೆ ಪರೀಕ್ಷಾ ಕೇಂದ್ರವನ್ನು ಧ್ವಂಶಗೊಳಿಸಿ ಬಂದ್ ಮಾಡುವ ಮೂಲಕ ಗಮನ ಸೆಳೆಯಲಾಯಿತು. ಈ ವೇಳೆ 3 ಸಾವಿರ ಜನ ಕನ್ನಡಿಗರಿಗೆ ಉದ್ಯೋಗ ದೊರಕಿಸಿ ಕೊಟ್ಟ ಏಕೈಕ ಸಂಘಟನೆಯಾಗಿದೆ. ಇದೇ ರೀತಿ ಹಳ್ಳಿಗಳಲ್ಲಿ ಮೂಲಭೂತ ಸಮಸ್ಯೆ ಇರಬಹುದು ಅದಕ್ಕೆ ಹೋರಾಟ ಮಾಡಿ ಪರಿಹಾರ ಕಂಡುಕೊಳ್ಳುವಂತ ಕೆಲಸ ಮಾಡಲಾಗುತ್ತಿದೆ. ಅದೆ ರೀತಿ ನಾನಾ ಜನಪರ ಹೊರಾಟವನ್ನು ಹಮ್ಮಿಕೊಂಡಿದೆ. ಈಗಾಗಲೇ ನಮ್ಮ ಸಂಘಟನೆ ಎಲ್ಲಾ ಜಿಲ್ಲಾ ತಾಲ್ಲೂಕ್ ಹಾಗು ಹೋಬಳಿ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಘಟನೆ ಬೆಳೆಯುತ್ತಿದೆ. ಅದರಲ್ಲೂ ಹಾಸನದಲ್ಲಿ ಬೃಹತಕಾರವಾಗಿ ಈ ಸಂಘಟನೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ಸಹಕರಿಸುವಂತೆ ಮನವಿ ಮಾಡಿದರು. ನಂತರ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು.
       ಕಾರ್ಯಕ್ರಮದಲ್ಲಿ ಕರವೇ ತಾಲ್ಲೂಕ್ ಅಧ್ಯಕ್ಷ ಜಗನ್ನಾಥ್, ಸಾಲಗಾಮೆ ಹೋಬಳಿ ಅಧ್ಯಕ್ಷ ಸತೀಶ್ ಕಡಗ, ಪ್ರಧಾನ ಕಾರ್ಯದರ್ಶಿ ಸಿ. ಹರೀಶ್ ಕುಮಾರ್, ತಾಲ್ಲೂಕ್ ಉಪಾಧ್ಯಕ್ಷ ರಘು ಕುಮಾರ್, ರಂಗಸ್ವಾಮಿ, ಎ. ಗಿರೀಶ್ ಮತ್ತು ಎಸ್. ಜಯಚಂದ್ರ, ರಮೇಶ್, ಸಂತೋಷ್ ಹಾಗೂ ಛಲವಾಧಿ ಮಹಾಸಭಾ ಅಧ್ಯಕ್ಷ ಪುಟ್ಟರಾಜ್ ಇತರರು ಪಾಲ್ಗೊಂಡಿದ್ದರು.

No comments:

Post a Comment