BHEEMA VIJAYA KARKAN25113/13/7/2015-TC HASSAN

ಎಂ. ಕೃಷ್ಣ ಅಂಧ ಮಕ್ಕಳ ಶಾಲೆಯಲ್ಲಿ ದಲಿತ ಲೋಕದ ವೀರರ ಹಬ್ಬ ಆಚರಣೆ



ಹಾಸನ: ನಗರದ ಸಾಲಗಾಮೆ ರಸ್ತೆ ಬಳಿ ಇರುವ ಎಂ. ಕೃಷ್ಣ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಅಂಬೇಡ್ಕರ್ ಯುವ ಸೇನೆ ಹಾಗೂ ಮಾನವ ಬಂಧುತ್ವ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನವರಿ 1ನ್ನು ದಲಿತ ಲೋಕದ ವೀರರ ಹಬ್ಬ ಆಚರಿಸಲಾಯಿತು.
   
 ಮೊದಲು ಕೇಕನ್ನು ಕತ್ತರಿಸಿ ಮಕ್ಕಳೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಇತಿಹಾಸದಲ್ಲಿ ಹೂತು ಹೋಗಿದ್ದ ಸ್ವಾಭಿಮಾನವನ್ನು ಸಾರುವ, ದಲಿತರ ಶೌರ್ಯವನ್ನು ತಿಳಿಸುವ, ಜಾತಿವ್ಯವಸ್ಥೆ ಮತ್ತು ಅಸ್ಪಶ್ಯತೆಯ ಕರಾಳ ಮುಖವನ್ನು ಪರಿಚಯಿಸುವ ಹಾಗೂ ಮನುವಾದವ್ನನು ಇತರರ ಮೇಲೆ ಹೇರಿ ಕ್ರೌರ್ಯ ಮೆರೆದಿದ್ದ ಬ್ರಾಹಣಶಾಹಿಗಳ ಸೊಂಟ ಮುರಿದಿದ್ದ ಯುದ್ದವೇ ಕೊರೇಗಾವ್ ಯುದ್ದವಾಗಿದೆ. ಅದರ ಸವಿ ನೆನಪಿಗಾಗಿ ಎಂ. ಕೃಷ್ಣ ಅಂಧ ಮಕ್ಕಳ ಶಾಲೆಯಲ್ಲಿ ವಿಜಯೋತ್ಸವ ಸಂಭ್ರಮಾಚರಣೆ ಆಚರಿಸಲಾಯಿತು.

ಡಾ|| ನಾಗರಾಜ್ :
     ಎಂ. ಕೃಷ್ಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷರಾದ ನಾಗರಾಜ್ ಮಾತನಾಡಿ, ವಿಜಯೋತ್ಸವ ಸಂಭ್ರಮಾಚರಣೆ ಜೊತೆಗೆ ಹೊಸ ವರ್ಷದ ಸಂತೋಷವನ್ನು ಅಂಧ ಮಕ್ಕಳ ಜೊತೆ ಹಂಚಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಇಂತಹ ಕಾರ್ಯಕ್ರಮವನ್ನು ನಿಮ್ಮ ಸಂಘಟನೆಯಿಂದ ಇನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಲಿ ಎಂದ ಅವರು ಎಲ್ಲಾರಿಗೂ ಇದೆ ವೇಳೆ ಶುಭ ಹಾರೈಸಿದರು.

ಜಿ.ಓ. ಮಹಾಂತಪ್ಪ :
      ವಾಲ್ಮೀಕಿ ಸಮಾಜ ಹಾಗೂ ಮಾನವ ಬಂಧುತ್ವ ವೇದಿಕೆ ಅಧ್ಯಕ್ಷರಾದ ಜಿ.ಓ. ಮಹಾಂತಪ್ಪ ಮಾತನಾಡುತ್ತಾ, ಕೊರೇಗಾವ್ ಯುದ್ದದ ಸವಿ ನೆನಪಿಗಾಗಿ ಹಾಗೂ ಹೊಸ ವರ್ಷಚಾರಣೆಯನ್ನು ಮಕ್ಕಳೊಂದಿಗೆ ಹಂಚಿಕೊಂಡು ಹರ್ಷ ಪಡುತ್ತಿದ್ದೇವೆ ಎಂದು ಹೇಳಿದರು. ಸರ್ವರಿಗು ಇದೆ ವೇಳೆ ಶುಭ ಹಾರೈಸಿದರು.
      ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವ ಸೇನೆ ರಾಜ್ಯ ಕಾರ್ಯಾಧ್ಯಕ್ಷ ನಾಗರಾಜ್ ಹೆತ್ತೂರ್, ಜಿಲ್ಲಾಧ್ಯಕ್ಷ ಕೆ. ಪ್ರಕಾಶ್, ಗೌರವಾಧ್ಯಕ್ಷ ದೇವರಾಜೇಗೌಡ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ನವೀನ್ ಸಾಲಗಾಮೆ, ಜಿಲ್ಲಾ ಸಂಚಾಲಕ ಹರೀಶ್, ಪ್ರಮೋದ್ ಬೆಳಗೋಡ್ ಇತರರು ಇದ್ದರು.

No comments:

Post a Comment