BHEEMA VIJAYA KARKAN25113/13/7/2015-TC HASSAN

ಲೋಕಾಯುಕ್ತ ಸಂಸ್ಥೆಗೆ ಕನ್ನಡಿಗರನ್ನು ನೇಮಿಸಲು ಆಗ್ರಹಿಸಿ ಕರವೇಯಿಂದ ಪ್ರತಿಭಟನೆ


ಹಾಸನ: ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆ ಹುದ್ದೆಗೆ ಕನ್ನಡಿಗರನ್ನು ನೇಮಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ ನಡೆಸಿದರು.

       ನಗರದ ಹೇಮಾವತಿ ಪ್ರತಿಮೆ ಬಳಿ ಘೋಷಣೆ ಕೂಗಿದ ಅವರು, ಕರ್ನಾಟಕ ಲೋಕಾಯುಕ್ತ ಸಂಸ್ಥೆ ಒಂದು ತನಿಖಾ ಸಂಸ್ಥೆಯಾಗಿದ್ದು, ಭ್ರಷ್ಟ ರಾಜಕಾರಣಿಗಳಿಗೆ ಹಾಗೂ ಭ್ರಷ್ಟಾ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದೆ. ಭ್ರಷ್ಟಾಚಾರದಿಂದ ಬಳಲಿರುವ ಜನಸಾಮಾನ್ಯರ ಪಾಲಿಗೆ ಒಂದು ಆಶಾಕಿರಣವಾಗಿದೆ ಎಂದರು. ಭ್ರಷ್ಟಚಾರ ಇಂತಹ ಸಂಸ್ಥೆಯಲ್ಲೆ ನಡೆದು ಲೋಕಾಯುಕ್ತ ಸಂಸ್ಥೆಗೆ ದಕ್ಕೆ ಉಂಟಾಗಿ ಆರೋಪಕ್ಕೆ ಸಿಲುಕಿದೆ. ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರೆ ನಡೆಸಿದ ಭ್ರಷ್ಟಚಾರದ ವಿರುದ್ಧ ಕನ್ನಡಿಗರ ನಿರಂತರ ಪ್ರತಿಭಟನೆ ನಡೆದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದರು. ಆದರೇ ರಾಜೀನಾಮೆ ಕೊಡಿಸುವ ಕೆಲಸ ವಿರೋಧ ಪಕ್ಷಗಳು ಧ್ವನಿ ಎತ್ತಿದ ಬಳಲಿಕ ನಡೆದಿದೆ. ಈಗ ಖಾಲಿ ಇರುವ ಲೋಕಾಯುಕ್ತ ಹುದ್ದೆಗೆ ಯೋಗ್ಯರು, ಪ್ರಾಮಾಣಿಕರು ಮತ್ತು ಕನ್ನಡ ನಾಡಿನ ಜನರ ಕಷ್ಟವನ್ನು ತಿಳಿದಂತ ವ್ಯಕ್ತಿ ನೇಮಿಸುವುದು ಸರ್ಕಾರದ ಮೇಲಿದೆ ಎಂದರು.

       ರಾಜ್ಯದ ಘನತೆ ಗೌರವ ಉಳಿಸುವ ಕೆಲಸ ಕನ್ನಡಿಗರು ಮಾಡುತ್ತಾರೆ. ಇಲ್ಲಿನ ಸ್ಥಳಿಯ ಜನ ಸಾಮಾನ್ಯರ ಸಮಸ್ಯೆಯನ್ನು ಅರ್ಥ ಮಾಡಿಕೊಂಡವರನ್ನು ಲೋಕಾಯುಕ್ತ ಸಂಸ್ಥೆ ಹುದ್ದೆಗೆ ಕನ್ನಡಿಗರನ್ನು ನೇಮಿಸುವ ಮೂಲಕ ವರ್ಚಸ್ಸು ಮತ್ತು ಘನತೆಯನ್ನು ಮತ್ತೆ ಪಡೆಯಲು ಮುಂದಾಗಬೇಕು ಎಂದು ಸರ್ಕಾರವನ್ನು ಇದೆ ವೇಳೆ ಒತ್ತಾಯಿಸಿ ಮನವಿ ಮಾಡಿದರು.

      ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್, ಯುವ ಘಟಕದ ಅಧ್ಯಕ್ಷ ಪ್ರೀತಮ್, ವಕ್ತಾರರು ಸೀತರಾಮು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಮೀರ್ ಅಹಮದ್, ನಗರಾಧ್ಯಕ್ಷ ಶಿವು, ಮಹಿಳಾ ಘಟಕದ ಅಧ್ಯಕ್ಷೆ ಸರೋಜಮ್ಮ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಭಿಗೌಡ, ರಾಘುಗೌಡ ಇತರರು ಇದ್ದರು.
   



No comments:

Post a Comment