ಹಾಸನ: ಸ್ವಚ್ಛ ಹಾಸನ ಆಂದೋಲನಾದಡಿ ಪ್ರಗತಿಪರ ಚಿಂತಕರು ಹಾಗೂ ನಾಗರೀಕರು ಸ್ವಚ್ಛ ವಿದ್ಯಾನಗರ ಮಾಡುವ ಮೂಲಕ ನಿವಾಸಿಗಳಿಗೆ ಅರಿವು ಮೂಡಿಸಿ, ರಸ್ತೆ ಹಾಗೂ ಚರಂಡಿಗೆ ಕಸ-ಪ್ಲಾಸ್ಟಿಕ್ ಎಸೆಯದಂತೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಕ್ರೀಡಾಂಗಣ ಹಿಂಬಾಗ ನಗರದ ಎಂ.ಜಿ. ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ವಿದ್ಯಾನಗರದ ನಿವಾಸಿಗಳು ಬಾಯಿಗೆ ಬಟ್ಟೆ ಕಟ್ಟಿಕೊಂಡು, ಕೈಯಲ್ಲಿ ಪೊರಕೆ ಹಿಡಿದು ಸ್ವಯಂಪ್ರೇರಿತ ಸ್ವಚ್ಛತೆಗೆ ಮುಂದಾದರು. ಈ ವೇಳೆ ರಸ್ತೆ ಬದಿ ಅಲ್ಲಲ್ಲಿ ಕಸದ ಗುಡ್ಡೆ, ಪ್ಲಾಸ್ಟಿಕ್ ಮತ್ತು ಕೋಳಿ ಹಾಗೂ ಮೀನು ಕ್ಲೀನ್ ಮಾಡಿದ ಗಲೀಜುಗಳು ಚರಂಡಿ ಸೇರಿದಂತೆ ಅಲ್ಲಲ್ಲಿ ಬಿಸಾಡಿದ್ದನ್ನು ಕಸ ಸಾಗಿಸುವ ಅಪೆ ವಾಹನದಲ್ಲಿ ತುಂಬಿ ತೆರವುಗೊಳಿಸಲಾಯಿತು. ಶಿವಣ್ಣ ಕಬಾಬ್ ಮುಂಬಾಗದ ಗೌರಿಕೊಪ್ಪಲು ರಸ್ತೆಯ ದೊಡ್ಡ ಚರಂಡಿಯಲ್ಲಿ ಪ್ಲಾಸ್ಟಿಕ್ ಬಿಸಾಡಿದ ರಾಶಿ ಕಂಡು ಬಂದಿತು. ಇದನ್ನು ಕಂಡ ನಾಗರೀಕರು ಆಕ್ರೋಶವ್ಯಕ್ತಪಡಿಸಿದರು. ಇಲ್ಲಿನ ಸುತ್ತ ಮುತ್ತಲ ಅಂಗಡಿ ಮುಗ್ಗಟ್ಟುಗಳು, ಹೋಟೇಲ್, ಕಬಾಬ್ ಸೆಂಟರ್ ಹಾಗೂ ಕೋಳಿ ಫಾರಂ ಹಾಗೂ ರಸ್ತೆ ಬದಿ ಅಂಗಡಿ ಮಾಲೀಕರಿಗೆ ಅರಿವು ಮೂಡಿಸಿದ ಅವರು ಇದೆ ರೀತಿ ಮುಂದುವರೆದರೇ ನೋಟಿಸ್ ಕೊಡುವುದಾಗಿ ಎಚ್ಚರಿಕೆ ನೀಡಿದರು. ಮೀನು ಮಾರಾಟ ಮಾಡುವವರು ಅದರ ತ್ಯಾಜ್ಯವನ್ನು ಚರಂಡಿಗೆ ಎಸೆದಿರುವುದು ತಿಳಿದು ತಕ್ಷಣ ತೆರವುಗೊಳಿಸಲು ಸೂಚಿಸಿದರು.
ಸತ್ಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ವಿದ್ಯಾನಗರದಲ್ಲಿ ದಿನೆ ದಿನೆ ಕಸಗಳ ರಾಶಿ ಹೆಚ್ಚಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆಯಿಂದ ಕಸದೊಳಗೆ ಸೇರಿ ಧನ-ಕರು ಸೇರಿದಂತೆ ಮೂಕ ಪ್ರಾಣಿಗಳು ಸೇವಿಸಿ ಸಾವಿಗೀಡಾಗುತ್ತಿರುವುದರ ಬಗ್ಗೆ ಆತಂಕವ್ಯಕ್ತಪಡಿಸಿದರು. ನಾಗರೀಕರು ಎಲ್ಲೆಂದರಲ್ಲಿ ಕಸವನ್ನು ಬೀದಿಗೆ ಎಸೆಯುವ ಮೂಲಕ ಸೊಳ್ಳೆಗಳು ಹೆಚ್ಚಾಗಿ ನಾನಾ ಖಾಯಿಲೆಗಳು ಹರಡಿ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ. ಇದನ್ನು ತಡೆ ಗಟ್ಟಲು ಮೊದಲು ನಿವಾಸಿಗಳ ಪ್ರತಿ ಮನೆ ಮನೆಗೂ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ನಾಗರೀಕರಲ್ಲಿ ಅರಿವು ಬಂದರೇ ಸ್ವಚ್ಛತೆ ಕಾಪಾಡುವುದರಲ್ಲಿ ಯಾವ ಸಂಶಯವಿಲ್ಲ ಎಂದರು. ಪ್ಲಾಸ್ಟಿಕ್ ಬಳಕೆ ಇದೆ ರೀತಿ ಮುಂದುವರೆದರೇ ಮುಂದಿನ ದಿವಸಗಳಲ್ಲಿ ಕಷ್ಟದಪರಿಸ್ಥಿತಿ ಎದುರಿಸಬೇಕಾಗುತ್ತದೆ. ಪರ್ಯಾಯವಾಗಿ ಬಟ್ಟೆ ಹಾಗೂ ಪೇಪರ್‍ನಿಂದ ತಯಾರಿಸಲ್ಪಟ್ಟ ವಸ್ತುಗಳನ್ನು ಬಳಕೆ ಮಾಡುವುದರ ಮೂಲಕ ಮುಂದಿನ ಜನಾಂಗಕ್ಕೆ ಉತ್ತಮ ಪರಿಸರ ನೀಡಲು ಭಾಗವಹಿಸಿದ್ದ ಪ್ರಗತಿ ಪರ ಚಿಂತಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮುಂದಿನ ದಿವಸಗಳಲ್ಲಿ ವಿದ್ಯಾನಗರ ನಂತರ ನಗರದ ಎಲ್ಲಾ ಭಾಗಗಳಲ್ಲೂ ಅಲ್ಲಲ್ಲಿ ನಾಗರೀಕರು ಪ್ರತ್ಯೇಕ ಸಂಘಟನೆ ರಚಿಸಿಕೊಂಡು ಸ್ವಚ್ಛತೆಗೆ ಮುಮದಾಗುವ ಮೂಲಕ ನಿವಾಸಿಗಳಲ್ಲಿ ಅರಿವು ಮೂಡಿಸಲಾಗುವುದು. ಮನೆಯಿಂದಲೇ ಸ್ವಚ್ಛತೆ ಮಾಡುವ ಮನಸ್ಸು ಬಂದರೇ ಮುಂದಿನ ಜನಾಂಗಕ್ಕೆ ಒಳ್ಳೆಯ ವಾತವರಣ ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ನಗರಸಭೆಯಿಂದ ಕಸ ತಳ್ಳುವ ಟ್ರಾಕ್ಟರ್ ನೀಡಲಾಗಿತ್ತು. ಕಾಂತರಾಜ್ ಎಂಬುವರು ಜೆಸಿಬಿ ನೀಡಿದ್ದರು.
ಸ್ವಚ್ಛ ಹಾಸನ ಆಂದೋಲನಾದಡಿ ಸ್ವಚ್ಛ ವಿದ್ಯಾನಗರದ ನಿವಾಸಿಗಳಾದ ಪ್ರಗತಿಪರ ಚಿಂತಕರು ಆರ್.ಪಿ. ವೆಂಕಟೇಶ್‍ಮೂರ್ತಿ , ಸತ್ಯಮಂಗಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕಿರಣ್, ಸದಸ್ಯರು ಮಂಜು, ಪ್ರೇಮಮ್ಮ, ಸಾವಿತ್ರಮ್ಮ, ಸಮಾಜಸೇವಕರಾದ ಮಂಜುನಾಥ್ ಮೊರೆ, ಶೇಷಪ್ಪ, ರಾಜೀವ್‍ಗೌಡ, ವೈದ್ಯರಾದ ಲಕ್ಷ್ಮೀಕಾಂತ್, ಕೇಶವ್, ಸರ್ಜನ್ ರಮೇಶ್, ಗಂಗಾಧರ್, ಜಿ.ಎಲ್. ಮುದ್ದೇಗೌಡ, ಸುರೇಶ್ ಗುರೂಜಿ, ಭೈರೇಗೌಡ ಇತರರು ಇದ್ದರು.

No comments:
Post a Comment