BHEEMA VIJAYA KARKAN25113/13/7/2015-TC HASSAN

ಎದ್ದು ನಿಲ್ಲವುದೇ ಬಿಜೆಪಿ ? ಶೂನ್ಯ ಸಾದನೆಯಲ್ಲಿ ಬಿಎಸ್ಪಿ-ಕಮ್ಯೂನಿಷ್ಟ್ ಪಕ್ಷಗಳು


ಹಾಸನ:ಜಿಲ್ಲೆಯ ಬಿಜೆಪಿ ಖಾತೆ ತೆರೆಯುವುದೇ? ಎಂಬ ಪ್ರಶ್ನೆ ಪಕ್ಷದ ಕಾರ್ಯಕರ್ತರಲ್ಲಿ ಕಾಡುತ್ತಿದೆ. ಬಿಎಸ್ಪಿ-ಕಮ್ಯೂನಿಷ್ಟ್ ಪಕ್ಷಗಳು ಶೂನ್ಯ ಸಾದನೆಯಲ್ಲಿವೆ.
ಕಳೆದ ಸಾಲಿನಲ್ಲಿ 5 ಸ್ಥಾನವನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಅತಂಹ ಸಾದನೆ ಕಂಡು ಬರುತ್ತಿಲ್ಲ.ಬೇಲೂರಿನ ಅಡಗೂರು, ಅರಸಿಕೆರೆಯ ಬಾಣವಾರ.ಅರಕಲಗೂಡು ಹೊನ್ನವಳ್ಳಿಯಲ್ಲಿ ಮಾತ್ರ ಬಿಜೆಪಿ ಫೈಟ್‍ನಲ್ಲಿ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಬಿಜೆಪಿಗೆ ರಾಜಕಾರಣ ಮಾಡಲು ಅನೇಕ ಅವಕಾಶಗಳಿದ್ದರೂ ಸಮರ್ಪಕವಾಗಿ ಬೆಳೆಸಿಕೊಳ್ಳಲಿಲ್ಲ.
ಶಾಂತಿಗೆ ಹೆಸರಾಗಿರುವ ಹಾಸನ ಜಿಲ್ಲೆಯಲ್ಲಿ ಬಿಜೆಪಿಗೆ ಅವಕಾಶ ನೀಡಿದರೆ ‘ಶಾಂತಿಗೆ ಮಾರಕವಾಗ ಬಲ್ಲದೇ ಎಂಬ ಲೆಕ್ಕಾಚಾರವು ಬಿಜೆಪಿ ಹಿನ್ನಡೆಗೆ ಕಾರಣವಾಗಿದೆ.ಟಿಪ್ಪು ಸುಲ್ತಾನ್ ಜನ್ಮ ದಿನಾಚಾರಣೆ ಸಮಯದಲ್ಲಿ ಬಿಜೆಪಿಯ ಕಾರ್ಯಕರ್ತರ ವರ್ತನೆಯು ಪಕ್ಷದ  ಹಿನ್ನಡೆಗೆ ಕಾರಣವಾಗಿದೆ ಎನ್ನ ಬಹುದು.
ಬಿಎಸ್ಪಿ: ಜಿಲ್ಲೆಯ 9 ಜಿ ಪಂ  ಕ್ಷೇತ್ರಗಳಲ್ಲಿ ಕಣಕ್ಕಿಳಿಸಿರುವ ಬಿಎಸ್ಪಿ ನಿರಿಕ್ಷಿತ ಮಟ್ಟದಲ್ಲಿ ಸಾದನೆ ಮಾಡುಲು ಸಾದ್ಯವಾಗಿಲ್ಲ.  ಸಕಲೇಶಪುರ ಹಾನುಬಾಳ್, ಬೇಲೂರಿನ ಬೇಲೂರಿನ ಹೆಬ್ಬಾಳ್, ಚನ್ನರಾಯ ಪಟ್ಟಣದಲ್ಲಿ ನುಗ್ಗೆಹಳ್ಳಿ, ಬಂದಿಗನ ಹಳ್ಳಿ, ಹಾಸನದ ಸಾಲಿಗ್ರಾಮ, ಹೋಳೆನರಸಿಪುರದಲ್ಲಿ ಹಳ್ಳಿ ಮೈಸೂರು, ಹಳೆ ಕೋಟೆ, ನಿರೂಡಿ ಹಾಗೂ ಜಿಲ್ಲೆಯ ಅನೇಕ ತಾ ಪಂ ಕ್ಷೇತ್ರದಲ್ಲೂ ಅಭ್ಯಾರ್ಥಿಗಳಿದ್ದಾರೆ ಆದರೆ ಪಲಿತಾಶ ಎಲ್ಲೂ ನಿರಿಕ್ಷಿತವಾಗಿಲ್ಲ.
ಕಮ್ಯೂನಿಷ್ಟ್: ಹೋರಾಟದ ಮೂಲಕ ಜಿಲ್ಲೆಯಲ್ಲಿ ಸಕ್ರಿಯವಾಗಿರುವ  ಕಮ್ಯೂನಿಷ್ಟ್ ಪಕ್ಷ  ಜಿ ಪಂ ಚುನಾವಣೆಯಿಂದ ದೂರ ಸರಿದು ನಿಂತಿದೆ.
 ಸಕಲೇಶಪುರದ ಹಾನೂ ಬಾಳ್ ಕ್ಷೇತ್ರದಲ್ಲಿ ಮಾತ್ರ ಕಮ್ಯೂನಿಷ್ಟ್ ಪಕ್ಷದ(ಸಿ ಪಿ ಐ) ಅಭ್ಯರ್ಥಿ ಸ್ಪರ್ದಿಸಿದ್ದಾರೆ. ಈ ಕ್ಷೇತ್ರದಲ್ಲಿ ಅಂತಹ ಸಾದನೆ ಮತಗಳನ್ನು ಪಕ್ಷ ಪಡೆದಿಲ್ಲ.

No comments:

Post a Comment