ಹಾಸನ: ಜಿ ಪಂ, ತಾ ಪಂ ಚುನಾವಣೆಯ ಬಂಡಾಯದ ಬಿಸಿಗೆ ಸರ್ವ ಪಕ್ಷಗಳ ಮುಖಂಡರು ಬೆವರು ವರಿಸಿಕೊಂಡರು, ಇಲ್ಲೊಂದು ಪ್ರಮುಖ ಘನ ಗಂಬೀರ ವಿಷಯವೆನಂದರೆ `ಬಂಡಾಯಗಾರರ ಶ್ರಮದಾನದ ಲಾಭ’ ಪಡೆದ ಪಕ್ಷಯಾವುದು ಎನ್ನುವುದು.
ಮೊದಲಿಗೆ ಕಾಂಗ್ರೆಸ್ ಪಕ್ಷದ ವಿರುದ್ದ ತಿರುಗಿ ಬಿದ್ದಿದ್ದು ಜಿಲ್ಲೆಯ ವೀರಶೈವರು. ತಮ್ಮ ಕೋಮಿಗೆ ರಾಜಕೀಯವಾಗಿ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದೆ ತಡ. ಬಿಜೆಪಿ ಸ್ವಚ್ಚಭಾರತದ ಅಭಿಯಾನದ ತರಹ ವೀರಶೈವರ ಮತಳನ್ನು ಬಾಚಲು ಮುಂದಾಯಿತು.
ಹೆಚ್ಚು ಕಡಿಮೆ ಕಾಂಗ್ರೇಸ್ ವಿರುದ್ದ `ವೀರಶೈವ ವಿರೋದಿ ಗಾಳಿ’ ಎದ್ದಿದ್ದನ್ನು ಯಾರೂ ತಳ್ಳಿ ಹಾಕುವಂತಿಲ್ಲ. ವೀರಶೈವರ ಹೆಚ್ಚು ಮತಗಳು ಬಿಜೆಪಿ ಎತ್ತಾಕಿಕೊಂಡೆರೆ ಜೆಡಿಎಸ್ ಸುಮ್ಮನೆ ಕೂರದೆ. ವೀರಶೈವರ ಹೆಗಲ ಮೇಲೆ ಕೈಹಾಕಿ ಅದಷ್ಟು ಮತಗಳನ್ನು ಬಾಚಿಕೊಂಡೆದೆ.
ಸಕಲೇಶಪುರ ಮತ್ತು ಅರಸಿಕೆರೆಯಲ್ಲಿ ಈ ಬಾರಿ ವೀರಶೈವರ ಮತಗಳು ಕಾಂಗ್ರೇಸ್‍ಗೆ ಸಾಕಷ್ಟು ನಷ್ಟಮಾಡಿವೆ ಇಲ್ಲಿಯ ವೀರಶೈವ ಮುಖಂಡರು ಚುನಾವಣೆಯ ಅಕಾಡದಲ್ಲಿ ಮುಖ ತೋರಿಸಿದ್ದು ಬಿಟ್ಟರೆ. ಕೆಲಸದಲ್ಲಿ ಚುರುಕುತನ ಕಾಣಲಿಲ್ಲ.
ಕಾಂಗ್ರೆಸ್ ಹೆಚ್ಚು ಬಂಡಾಯಗಾರರ ಪಕ್ಷವಾಗಿ ಈ ಚುನಾವಣೆಯಲ್ಲಿ ಕಂಡು ಬಂದಿದ್ದು, ಬೇಲೂರು ತಾಲ್ಲೂಕಿನ `ಕೈ ಕಾರ್ಯಕರ್ತರು ಕೈ ಗೆ ಹೆಚ್ಚು ಕೈ’ ಕೋಟ್ಟಿದ್ದರಿಂದ `ಜೆಡಿಎಸ್ ಮತ್ತು ಬಿಜೆಪಿಗೆ’ ಹೆಚ್ಚು ಲಾಭವಾಯಿತು. ಹಾಸನದಲ್ಲೂ ಕೈ ಕಾರ್ಯಕರ್ತರು ಪಕ್ಷದ ಪ್ರಮುಖ ನಾಯಕರೊಂದಿಗೆ ಕೈ ಮಿಲಾಯಿಸುವ ಹಂತಕ್ಕೆ ಹೊಗಿದ್ದ ಪರಿಣಾಮ ಹೆಚ್ಚು ಲಾಭ ಪಡೆದಿರುವುದು ಜೆಡಿಎಸ್.
ಇನ್ನು ಜೆಡಿಎಸ್ ಬಂಡಾಯವು ಕಾಂಗ್ರೇಸ್ ಪಕ್ಷಕ್ಕೆ ಹೆಚ್ಚು ಲಾಭದಾಯಕ ವಾಗಿತ್ತು. ಜಾತ್ಯಾತೀತ ಮನೋಭಾವದ ಪಕ್ಷದ ಕಾರ್ಯಕರ್ತರು ಒಳ ಮತ್ತು ಹೊರಗಿನಿಂದ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಿದರು. ಜೆಡಿಎಸ್ ಬಂಡಾಯದ ಬಿಸಿ ಕಾಂಗ್ರೆಸ್‍ಗೆ ಅನುಕೂಲಕರವಾಗಿತ್ತು.
ಬಿಜೆಪಿಯ ಬಂಡಾಯ ಆರಕ್ಕೆ ಎಳಲಿಲ್ಲ ಮೂರಕ್ಕೆ ಇಳಿಯಲಿಲ್ಲ. ಮುನಿಸಿ ಕೊಂಡಿದ್ದ ಕೆಲ ಮುಖಂಡರು ಕೆಲವು ಕ್ಷೇತ್ರದಲ್ಲಿ ಮುಖತೊರಿಸಿ ಮನೆಯಲ್ಲಿ ಮಲಗಿದ್ದರಿಂದ ಲಾಭ-ನಷ್ಟ ನಿಂತ ನೀರಾಯಿತು.
ಕಾಂಗ್ರೇಸ್ ಪಕ್ಷದಲ್ಲಿನ ದಲಿತ-ಹಿಂದುಳಿದ-ಅಲ್ಪಸಂಖ್ಯಾತ ಮುಖಂಡರು ಹೆಚ್ಚಾಗಿ ನಗರ ಪ್ರದೇಶದಲ್ಲಿ ಕಂಡುಬರುವುದರಿಂದ ಇವರುಗಳನ್ನು ಯಾರೂ ಹೆಚ್ಚಾಗಿ ಬಳಸಿಕೊಳ್ಳಲಿಲ್ಲ. ಹೀಗಾಗಿ ಈ ಚುನಾವಣೆಯಲ್ಲಿ ಈ ವರ್ಗದ ಮುಖಂಡರು ನಿರುದ್ಯೋಗಿಗಳಾಗಿದ್ದರು. ಈ ಲಾಭವು ಜೆಡಿಸ್ ಬುಟ್ಟಿಯಲ್ಲಿ ಬಿದ್ದಿದೆ.
No comments:
Post a Comment