BHEEMA VIJAYA KARKAN25113/13/7/2015-TC HASSAN

ಮಾರ್ಚ್ ತಿಂಗಳಲ್ಲಿ ಅದ್ದೂರಿ ಅಂಬೇಡ್ಕರ್ ಜಯಂತಿ: ಡಿ.ಸಿ ಸಣ್ಣಸ್ವಾಮಿ


ಸಕಲೇಶಪುರ: ಸ್ಥಳಿಯ ಸಂಸ್ಕøತಿ, ಸಾಹಿತ್ಯ, ಕಲೆ ಬಿಂಬಿಸುವ ಕಾರ್ಯಕ್ರಮಗಳ ಮೂಲಕ ಮಾರ್ಚ್ ತಿಂಗಳಲ್ಲಿ ಕೊನೆವಾರದಲ್ಲಿ ಅದ್ದೂರಿ ಡಾ| ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಉದ್ದೇಶಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಿ.ಸಿ ಸಣ್ಣಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ಟಿಂಕಲ್ ಟವರ್‍ನಲ್ಲಿ ನಡೆದ ವಿವಿದ ಸಂಘಸಂಸ್ಥೆಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಜಯಂತಿ ಅಂಗವಾಗಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ನಿಟ್ಟನಲ್ಲಿ ವಿವಿದ ಸಂಘ ಸಂಸ್ಥೆಗಳ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸರಳ ಸಾಮೂಹಿಕ ವಿವಾಹ, ಹಿರಿಯರಿಗೆ ಹಾಗು ಪ್ರತಿಭಾವಂತರಿಗೆ ಸನ್ಮಾನ ಗೌರವ ಸಮರ್ಪಣೆ, ಸಾಹಿತ್ಯ ಚಟುವಟಿಕೆಗಳು, ವಿವಿದ ಕಲೆಗಳ ಪ್ರದರ್ಶನಗಳು ನಡೆಯಲಿದೆ. ವಿಧ್ಯಾರ್ಥಿಗಳಿಗೂ ಅನೇಕ ಸ್ಪರ್ದೆಗಳಿರುತ್ತವೆ ಎಂದು ಹೇಳಿದರು.
ಬೃಹತ್ ಮೆರವಣಿಗೆಯನ್ನು ನಡೆಸಲು ಉದ್ದೇಶಿಸಲಾಗಿದ್ದು ತಾಲೂಕಿನ ಇತಿಹಾಸ ಸಾರುವ ಸ್ತಭ್ದ ಚಿತ್ರಗಳು, ಕಲಾ ತಂಡಗಳು ಸರ್ವಧರ್ಮಗಳ ಮುಖಂಡರು ಸಮಾಜ ಸೇವಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ದಲಿತ ಮುಖಂಡರಾದ ಬೆಳಗೋಡು ಬಸವರಾಜ್, ಚಲವಾದಿ ಮಹಾಸಬಾ ಯುವ ಮುಖಂಡ ಹಾಗೂ ತಾ.ಪಂ ಸದಸ್ಯ ಮಂಜುನಾಥ್, ನಾಗರೀಕ ಸಂರಕ್ಷಣಾ ಸಮೀತಿ ಅಧ್ಯಕ್ಷ ರವಿಕುಮಾರ್ ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಲ್ನಾಡ್ ಮಹಬೂಬ್, ನಿಸರ್ಗ ಟ್ರಸ್ಟ್ ಕಾರ್ಯದರ್ಶಿ ಜಾನೆಕೆರೆ ಲೋಕೇಶ್, ಹೆನ್ನಲಿ ವೆಂಕಟೇಶ್, ರಮೇಶ್ ನಾಗರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


No comments:

Post a Comment