ಸಕಲೇಶಪುರ: ಪುರಸಭೆಯ ನೂತನ ಅಧ್ಯಕ್ಷರಾಗಿ ಪುಷ್ಪವತಿ ಉಪಾಧ್ಯಕ್ಷರಾಗಿ ತಾಜುನ್ನಿಸಾ ಆಯ್ಕೆಯಾದರು.
ಪುರಸಬೆಯ ಸಭಾಂಗಣದಲ್ಲಿ ಚುನಾವಣೆ ಅಧಿಕಾರಿ ತಹಶೀಲ್ದಾರ್ ನಾಗೇಶ್ ಸಮ್ಮುಕದಲ್ಲಿ ನಡೆದ ಚುನಾವಣೆಯಲ್ಲಿ ಪುಷ್ಪವತಿ ಹಾಗೂ ತಾಜುನ್ನಿಸಾ ಅವಿರೋದವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್ ಕೆ ಕುಮಾರ ಸ್ವಾಮಿ, ಪುರಸಬೆಯ ಸಮಸ್ಯೆಗಳ ಪರಿಹಾರಕ್ಕೆ ಜೆಡಿಎಸ್ ಸದಸ್ಯರು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಪುರಸಭೆಯಲ್ಲಿ ಸೇವಮನೂಭಾವದ ಅನೇಕ ಸದಸ್ಯರಿದ್ದಾರೆ. ಇಲ್ಲಿಯವರೆಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮುಖೆಶ್ ಶೆಟ್ಟಿ ರವರ ಆಡಳಿತದ ಬಗ್ಗೆ ಶ್ಲಾಗಿಸಿದ ಶಾಸಕರು ಇವರು ಅಧ್ಯಕ್ಷರಾಗಲು ಅರ್ಹರು ಎಂದರು.
ನೂತನ ಅಧ್ಯಕ್ಷೆ ಪುಷ್ಪವತಿ ಹಾಗೂ ಉಪಾಧ್ಯಕ್ಷರಾಗಿ ತಾಜುನ್ನಿಸಾ ಸಾರ್ವಜನಿಕರಿಗೆ ಹಾಗೂ ಪಕ್ಷದ ಮುಖಂಡರಿಗೆ ಕೃತಜ್ಞೆತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸೋಮಶೇಕರ್, ಜುವಾಧ್ಯಕ್ಷ ಸಾ ಭ ಬಾಸ್ಕರ್, ಪುರಸಭೆಯ ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಯಾದ್ ಗಾರ್, ಸಂತೋಶ್ ಕುಮಾರ್, ಎಸ್ ಡಿ ಆದರ್ಶ, ಸದಸ್ಯರಾದ ಗಿರೀಶ್, ಸೂರ್ಯ, ಸಮೀರ್, ಲಲಿತಮ್ಮ, ಪಕ್ಷದ ಮುಕಂಡರಾದ ಜಾತಹಳ್ಳಿ ಪುಟ್ಟಸ್ವಾಮಿ ಮುಂತಾದವರಿದ್ದರು.

No comments:
Post a Comment