ಹಾಸನ: ಪೋಲಿಸ್ ಇಲಾಖೆಯ ಅಧಿಕಾರಿಗಳ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಅಶ್ಲಿಲವಾಗಿ ಸಕಲೇಶಪುರದ ಬಹಿರಂಗಸಭೆಗಳ:ಲ್ಲಿ ಹಿಯ್ಯಾಳಿಸಿರುವ ಹಾಗೂ ಮಾನಸಿಕವಾಗಿ ಮಹಿಳಾ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವ ಬಜರಂಗದಳದ ಕಾರ್ಯಕರ್ತರ ವಿರುದ್ದ ಉಗ್ರಕ್ರಮ ಕೈಗೊಳ್ಳುವಂತೆ ಅಂಬೇಡ್ಕರ್ ಯುವ ಸೇನೆ (ರಾಜ್ಯ ಸಮಿತಿ) ಕಾರ್ಯದ್ಯಕ್ಷ ನಾಗರಾಜ್ ಹೆತ್ತೂರ್ ಒತ್ತಾಯಿಸಿದ್ದಾರೆ.
ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಸಕಲೇಶಪುರ ನಗರ ಸಬ್‍ಇನ್ಸ್‍ಪೆಕ್ಟರ್ ಮಧು ಕಳೆದ ಒಂದೂವರೆ ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದು ವಿವರ ಬಗ್ಗೆ ಬಜರಂಗದಳದ ಕಾರ್ಯಕರ್ತರು ಮಾಹಿತಿ ಹಕ್ಕಿನಡಿ ಕೇಳಿರುವ ದಾಖಲೆಗಳು ನಿಜಕ್ಕೂ ಹೇಳಲು ನಾಚಿಕೆಯಾಗುತ್ತದೆ ಎಂದರು.
ಸಬ್‍ಇನ್ಸ್‍ಪೆಕ್ಟರ್ ದೇಹದ ಅಂಗಾಂಗಳ ಅಳತೆಯ ಬಗ್ಗೆ (ದೈಹಿಕ ಸಾಮಥ್ರ್ಯ ದೃಢೀಕರಣ ಪತ್ರ) ಮಾಹಿತಿ ಕೇಳಲಾಗಿದೆ. ಮತ್ತು (ನಡತೆ ಪ್ರಮಾಣ ಪತ್ರ) ಒಂದು ಹೆಣ್ಣಿನ ಅಂಗಗಳ ಮಾಹಿತಿಯನ್ನು ‘ಮಾಹಿತಿ’ಹಕ್ಕಿನಲ್ಲಿ ಕೇಳುವ ಕಾರಣ ಬಜರಂಗದಳ ಇಳಿದಿರುವುದು ಸಮಾಜದ ದುರಂತ ಎಂದರು.
ಹಿಂದೂ ಧರ್ಮದ ಹೆಸರು ಹೇಳಿಕೊಂಡು ಹೆಣ್ಣನ್ನು ಉನ್ನತವಾಗಿ ಕಾಣುವ ಈ ದೇಶದಲ್ಲಿ ಭಜರಂಗದಳದ ಈ ಮುಖಂಡರು ಹೀಗೆ ಕೇಳಿರುವುದು ಎಷ್ಟು ಸರಿ...? ಈ ದೇಶದ ಧರ್ಮದ, ಮಹಿಳೆಯ ಬಗ್ಗೆ ಮಾತನಾಡುವ ನೈತಿಕತೆ ಏನಿದೆ..? ಮಹಿಳೆಯೊಬ್ಬಳನ್ನು ಅವಮಾನಿಸಿರುವ ಇಂತಹ ಮುಖಂಡರ ಮೇಲೆ ತಕ್ಷಣವೇ ಕ್ರಮ ಕೈಗೊಂಡು ಜೈಲಿಗಟ್ಟಬೇಕೆಂದು ಅಂಬೇಡ್ಕರ್ ಯುವ ಸೇನೆ ಒತ್ತಾಯಿಸುತ್ತದೆ ಎಂದರು
ಖುದ್ದು ಮಹಿಳಾ ಅಧಿಕಾರಿಯನ್ನೇ ಕೇಳಿರುವುದರಿಂದ ತೀವ್ರ ಮುಜುಗರಕ್ಕೆ ಒಳಗಾದ ಅಧಿಕಾರಿಯನ್ನು ಮಾನಸಿಕವಾಗಿ ಕುಗ್ಗಿಸುವ ಇಂತಹ ಮುಖಂಡರ ಸಮಾಜಕ್ಕೆ ಮಾರಕವಾಗಿದ್ದಾರೆ. ಜೊತೆಗೆ ಕಳೆದ 6 ತಿಂಗಳಲ್ಲಿ ಇದೇ ಮಧು ಅವರ ಕುರಿತಂತೆ ಧರ್ಮೇಶ್ ಎಂಬ ಮಹಾನುಭವ ಸರ್ವೀಸ್ ರೆಕಾರ್ಡ್ ಬುಕ್, ಅವರು ಬಂದಾಗಿನಿಂದ ಇಲ್ಲಿಯವರೆಗೆ ಎಷ್ಟು ಎಫ್ ಐ ಆರ್ ಮಾಡಿದ್ದಾರೆಂಬ ವಿವರ, ಅದರಲ್ಲೂ ಮುಖ್ಯವಾಗಿ ದಿನಚರಿ ಪ್ರವಾಸ, ಪಾಸ್ ಪೋರ್ಟ್ ಬಗ್ಗೆಯೂ ಕೇಳಿ ಮಹಿಳೆಯೊಬ್ಬರಿಗೆ ಅವಮಾನ ಮಾಡಿದ್ದಾರೆ. ಮಹಿಳೆಯ ಬಗ್ಗೆ ಗೌರವ ಇಟ್ಟುಕೊಂಡ ಸಂಘಟನೆ ಮುಖಂಡರು ಮಾಡುವ ಘನ ಕೆಲಸಗಳು ಇವೆಯೇ..? ಇಷ್ಟಕ್ಕೂ ಇವರ ಕೆಲಸ ಏನು..? ದಯಮಾಡಿ ಭಜರಂಗದಳದ ಮುಖಂಡರು ಸ್ಪಷ್ಟಪಡಿಸಬೇಕು ಬಜರಂಗದಳ ಕಾರ್ಯಕರ್ತರು ಸಹೋದರಿ ಸಬ್‍ಇನ್ಸ್‍ಪೆಕ್ಟರ್ ಮದುರವರ ದೇಹದ ಅಂಗಗಳ ಅಳತೆಯನ್ನು ಮಾಹಿತಿ ಹಕ್ಕಿನಲ್ಲಿ ಕೇಳಿದ್ದಾರೆ. ಈ ಮೂಲಕ ಸಬ್‍ಇನ್ಸ್‍ಪೆಕ್ಟರ್‍ರವರನ್ನು ಮನೋಭಾವನ್ನು ಅಡುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಕಳೆದ 5 ರಂದು ಬಜರಂಗದಳ ನಡೆಸಿದ ಪ್ರತಿಭಟನೆಯಲ್ಲಿ ಹಾಲಿ ಸರ್ಕಲ್ ಇನ್ಸ್‍ಪೆಕ್ಟರ್ ಮಂಜಯ್ಯರವರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇವರ ಮಾತಿನ ದಾಟಿ ಹೇಗಿತ್ತೆಂದರೆ ಮಂಜಯ್ಯನವರ ಮನೆಯ ಹೆಣ್ಣುಮಕ್ಕಳನ್ನು ಮುಸ್ಲಿಮರು ಓಡಿಸಿಕೊಂಡು ಹೋದರೆ, ಎಂದು ಅನಾವಶ್ಯಕವಾಗಿ ಮಂಜಯ್ಯನವರ ಹೆಣ್ಣು ಮಕ್ಕಳ ಬಗ್ಗೆ ಪ್ರಸ್ತಾಪಿಸಿದ್ದಾರೆ ಅನಾವಷ್ಯಕವಾಗಿ ಪೋಲಿಸ್ ಅಧಿಕಾರಿಗಳ ಮನೆಯ ಹೆಣ್ಣುಮಕ್ಕಳ ಬಗ್ಗೆ ಬೀದಿಯಲ್ಲಿ ಏಕೆ ಮಾತನಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಈ ಬಜರಂಗದಳದವರು ಪೋಲಿಸರ ಮನೆಯ ಹೆಣ್ಣು ಮಕ್ಕಳ ಬಗ್ಗೆ ಏಕೆ ಅಶ್ಲೀಲವಾಗಿ ಮಾತನಾಡುತ್ತಾರೆ? ಈ ಹಿಂದೆ ಸಕಲೇಶಪುರದಲ್ಲಿ ಸಬ್‍ಇನ್ಸ್‍ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ ‘ದೀಪಕ್’ ಎಂಬುವರ ಪತ್ನಿ ಬಗ್ಗೆ ತೀರ ಕೆಟ್ಟದಾಗಿ ಅಂದರೆ ‘ದನದ ಮಾಂಸದ ವ್ಯಾಪಾರಿಯಿಂದ 50ಸಾವಿರ ರೂ ಮಾಮೂಲಿ ಪಡೆಯುವ ನೀನು ನಿನ್ನ ಹೆಂಡತಿಯನ್ನು ನನ್ನ ಬಳಿ ಕಳುಹಿಸು 80 ಸಾವಿರ ಕೊಡುತ್ತೇನೆ ಎಂದು ಬಜರಂಗದಳದ ಬಹಿರಂಗ ಸಭೆಯಲ್ಲಿ ಸಕಲೇಶಪುರದ ಹಳೆ ಬಸ್ ನಿಲ್ದಾಣದಲ್ಲಿ ದ್ವನಿವರ್ದಕದಲ್ಲಿ ಹೇಳಿದ್ದರು. ಇದನ್ನು ಮಾನವಂತ ಸಂಘ ಸಂಸ್ಥೆಗಳು ಖಂಡಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಪ್ರಕಟಣವನ್ನು ತೀವ್ರವಾಗಿ ವಿರೋದಿಸಿದ ಪುರಸಭೆ ಸದಸ್ಯ ಎಸ್.ಎಮ್ ಗಿರೀಶ್ ಮತ್ತು ಮಹಿಳಾ ಮುಖಂಡರಾದ ಅನ್ನಪೂರ್ನೆಶ್ವರಿ ಇವರುಗಳು ಪೋಲಿಸರಿಗೆ ದೂರನ್ನು ನೀಡಿದ್ದರು. ಪೋಲಿಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಭಾರತ ಮಾತೆ, ಗೋಮಾತೆ ಎಂದು ಬೀದಿಗಳಲ್ಲಿ ತಾಯಿಯ ಬಗ್ಗೆ ಮಾತನಾಡುವ ಬಜರಂಗಿಗಳಿಗೆ ಮಂಜಯ್ಯರವರ ಮನೆಯ ಹೆಣ್ಣು ಮಕ್ಕಳಲ್ಲಿ ಭಾರತಮಾತೆ ಕಾಣುವುದಿಲ್ಲವೇ? ಸಬ್‍ಇನ್ಸ್‍ಪೆಕ್ಟರ್ ಮದುರವರಲ್ಲಿ ಭಾತರ ಮಾತೆ ಕಾಣುವುದಿಲ್ಲವೇ? ಸಬ್ ಇನ್ಸ್‍ಪೆಕ್ಟರ್ ದೀಪಕ್ ಪತ್ನಿಯಲ್ಲಿ ಭಾರತಾಂಬೆ ಕಾಣುವುದಿಲ್ಲವೇ?
ಭಯೋತ್ಪಾದನೆ ಹೆಸರಿನಲ್ಲಿ ಅಮಾಯಕರ ಹೆಸರು ಪ್ರಸ್ತಾಪಿಸುವುದು, ಲಾವ್‍ಜಿಹಾದ್ ನಡೆಯುತ್ತಿದೆ ಎಂದು ಪ್ರೇಮಿಗಳನ್ನು ಹೊಡೆಯುವುದು, ದನದ ಮಾಂಸ ಮಾರಾಟಗಾರರನ್ನು ಮನಸ್ಸು ಇಚ್ಚೆ ಹೊಡೆಯುವುದು, ಮತಾಂತರ ಹೆಸರಿನಲ್ಲಿ ಹಲ್ಲೆ ನಡೆಸುವುದು ವ್ಯಾಪಾರ ವ್ಯವಹಾರಗಳಲ್ಲಿ ದರ್ಮ ಬೆರೆಸುವುದು. ಈ ಎಲ್ಲಾ ಅನಾಚಾರಗಳನ್ನು ಬಜರಂಗದಳದ ಕಾರ್ಯಕರ್ತರು ನಿರಂತರವಾಗಿ ಮಾಡುತ್ತಿದ್ದಾರೆ.
ಊರಿನ ಶಾಂತಿಗಾಗಿ ಪೋಲಿಸರು ಮುಂದಾಗಿರುವುದನ್ನು ಸಹಿಸದೆ ಪೋಲಿಸರ ಕುಟುಂಬ ಹಾಗೂ ಮಹಿಳಾ ಪೋಲಿಸ್‍ರವರ ಬಗ್ಗೆ ಕೀಳಾಗಿ ಮಾತನಾಡುವುದು ಅಮಾನವೀಯ.
ಕಳೆದ 5 ರಂದು ನಡೆದ ಬಜರಂಗದಳದ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕಿನಿಂದ ಗಡಿಪಾರ್ ಆಗಿರುವ ವ್ಯಕ್ತಿಯನ್ನು ಸಕಲೇಶಪುರದಲ್ಲಿ ಸನ್ಮಾನ ಮಾಡಲಾಗಿದೆ. ಈ ಮೂಲಕ ಸಕಲೇಶಪುರದಲ್ಲಿ ಸಮಾಜ ಘಾತುಕರಿಗೆ ಆಶ್ರಯ ನೀಡುವ ತಾಣವಾಗಿಸಲಾಗುತ್ತಿದೆ.
ಊರಿನ ಶಾಂತಿ ಕದಡಲು ಸದಾ ಒಂದಲ್ಲ ಒಂದು ರೀತಿಯ ಪ್ರಯತ್ನ ಈ ಬಜರಂಗದಳ ಕಾರ್ಯಕರ್ತರಿಂದ ನಡೆಯುತ್ತಿದೆ. ಇಂತಹ ಹೀನ ಕೃತ್ಯಗಳಿಂದ ಬೇಸತ್ತು ಸಕಲೇಶಪುರದ ಆರ್.ಎಸ್.ಎಸ್ ಬಜರಂಗದಳದ ಕೆಲವು ವ್ಯಕ್ತಿಗಳನ್ನು ಉಚ್ಛಾಟಿಸಿದೆ. ಬಿ.ಜೆ.ಪಿ ಸಹ ಅಂತರ ಕಾಪಾಡಿಕೊಂಡಿದೆ. ಸಕಲೇಶಪುರ ಶಾಂತಿ ಕದಡಲು ಯತ್ನಿಸುತ್ತಿರುವ ಹಾಗೂ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡುವ ಬಜರಂಗಿಗಳ ವಿರುದ್ದ ಉಗ್ರ ಕ್ರಮಕ್ಕೆ ಒತ್ತಾಯಿಸುತ್ತೇವೆ.
ಇನ್ನು ವೃತ್ತ ನಿರೀಕ್ಷಕರಾಗಿ ಕೆಲಸ ಮಾಡುತ್ತಿರುವ ಮಂಜಯ್ಯ ಅವರು ಹಾಸನದ ಸ್ಥಳೀಯರಾಗಿದ್ದು ರಾಜಕೀಯ ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿದ್ದು ಇವರನ್ನು ಇವರ ಮೇಲೆ ಕ್ರಮ ಜರುಗಿಸಿ ಮತ್ತು ವರ್ಗಾವಣೆ ಮಾಡಬೇಕೆಂದು ಎಲ್ಲಾ ಕಡೆ ಪತ್ರ ಬರೆದಿದ್ದಾರೆ. ಮಂಜಯ್ಯ ತಪ್ಪು ಮಾಡಿದ್ದರೆ ಸಾಬೀತು ಮಾಡಲಿ ಅದು ಬಿಟ್ಟು ದಲಿತ ಒಬ್ಬರು ಅಧಿಕಾರಿಯಾಗಿರುವುದನ್ನು ಇಷ್ಟಪಡದ ಈತ ಯಾವುದೋ ವಿಚಾರವನ್ನು ಮುಂದಿಟ್ಟುಕೊಂಡು ಆರ್ ಟಿ ಐ ಹೆಸರಲ್ಲಿ ಧರ್ಮದ ಹೆಸರಲ್ಲಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವುದು ಖಂಡನೀಯ ಇಂತಹವರ ಮೇಲೆ ಅಟ್ರಾಸಿಟಿ ಕೇಸು ದಾಖಲಿಸಿ ಗಡಿಪಾರು ಮಾಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು. ಇಲ್ಲವಾದಲ್ಲಿ ಅಂಬೇಡ್ಕರ್ ಯುವ ಸೇನೆ ಮತ್ತು ಎಲ್ಲಾ ದಲಿತಪರ ಸಂಘಟನೆಗಳಿಂದ ಸಕಲೇಶಪುರ ಬಂದ್ ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಸುತ್ತೇವೆ.
ಸುದ್ದಿಗೊಷ್ಟಿಯಲ್ಲಿ ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯ ಕೆ ಪ್ರಕಾಶ್, ನಗರಾಧ್ಯಕ್ಷ ರಾಜೇಶ್, ಕೆ.ಎಸ್. ಗುರುರಾಜ್ ಇದ್ದರು

No comments:
Post a Comment