ಬೇಲೂರು.ಮಾ.9 ;-ಇತ್ತೀಚಿನ ದಿನದಲ್ಲಿ ಸಮಾಜದಲ್ಲಿ ಅನ್ಯಾಯ ಅಕ್ರಮ ಭ್ರಷ್ಟಚಾರ ನಡೆಯುತ್ತಿದ್ದರು ಯುವ ಜನಾಂಗ ಅನ್ಯಾಯವನ್ನು ಪ್ರತಿಭಟಿಸುವಲ್ಲಿ ಸಂಪೂರ್ಣ ವಿಫಲಾಗಿದ್ದಾರೆ, ದೇಶದ ವಿದ್ಯಾರ್ಥಿಗಳಿಗೆ ಕನ್ನಯ್ಯಕುಮಾರ್ ರಂತಹ ವಿದ್ಯಾರ್ಥಿ ನಾಯಕ ಅವಶ್ಯವಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಅಬ್ದುಲ್ ಸಮದ್ ತಿಳಿಸಿದರು.
ಪಟ್ಟಣದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವರಣದಲ್ಲಿ ರಾಷ್ಟ್ರೀಯ ಕಾನೂನು ಶಾಲೆ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಪ್ರತ್ಯೇಕತೆ ನೀತಿ ಅಧ್ಯಯನ ಸಂಸ್ಥೆ ಹಾಗೂ ಅಂಬೇಡ್ಕರ್ ಅಧ್ಯಯನ ಕೇಂದ್ರ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಯುವ ಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್ ಅಭಿಯಾನ ಕಾರ್ಯಕ್ರಮ ಉದ್ಘಾಟನೆ ನಡೆಸಿ ಮಾತನಾಡಿದ ಅವರು ಪ್ರಶಕ್ತ ವಿದ್ಯಾರ್ಥಿಗಳು ಇಂಟರ್‍ನೆಟ್ ಜಾಲದಲ್ಲಿ ಕಾಲ ಕಳೆಯುತ್ತಾ ತಮ್ಮ ಅಮೂಲ್ಯ ವಿದ್ಯಾರ್ಥಿ ಸಮಯವನ್ನು ವ್ಯಯ ಮಾಡಿಕೊಳ್ಳುತ್ತಿದ್ದಾರೆ ಎಂದ ಅವರು ದಿನಕಳೆದಂತೆ ದೇಶದಲ್ಲಿ ಅನಾಚಾರ,ಅತ್ಯಚಾರ ಅಕ್ರಮಗಳು ನಡೆಯುತ್ತಿದ್ದರೂ ಕೂಡ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡುವ ಚೈತನ್ಯ ಇಲ್ಲವಾಗಿ ಕೋಮಸ್ಥಿತಿಗೆ ತಲಿಪಿದ್ದಾರೆ ಎಂದರು.
ವೈಡಿಡಿ ಕಾಲೇಜು ಪ್ರಾಂಶುಪಾಲ ಪ್ರೋ.ಜಯಣ್ಣಗೌಡ ಮಾತನಾಡಿ ವಿಶ್ವದಲ್ಲಿ ಸಮಾಜ ಸುಧಾರಕರಾಗಿ ಬಂದ ದಾರ್ಶನಿಕ ಮಹಾನ್ ವ್ಯಕ್ತಿಗಳು ಇಂದು ಜಾತಿ ಧರ್ಮಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಆವರ ನೀಡಿದ ವಿಚಾರಧಾರೆಗಳು ಮನುಕುಲದ ಉದ್ದಾರಕ್ಕೆ ಎಂಬ ಉದ್ದೇಶವನ್ನು ಮರೆತು, ಸ್ವಾರ್ಥಕ್ಕಾಗಿ ಮಾಹನ್ ಪುರುಷರನ್ನು ಬಳಕೆ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ, ಇನ್ನು ವಿಶ್ವದಲ್ಲಿ ದಾರ್ಶನಿಕ ಸಾಲಿನಲ್ಲಿ ಬರುವ ಬುದ್ದ ಬಸವ ಅಂಬೇಡ್ಕರ್ ಪೂಜ್ಯನೀಯ ವ್ಯಕ್ತಿಗಳಾಗಿ ನಿತ್ಯ ಅಭಿಷೇಕ ಹೂವಗಳಿಂದ ಪೂಜಿಸಲ್ಪಟ್ಟಿದ್ದಾರೆ, ಬಸವಣ್ಣನವರು ಮತ್ತು ಅಂಬೇಡ್ಕರ್ ವಿಚಾರಧಾರೆಗಳು ಎಷ್ಟು ಜನ ಅಳವಡಿಸಿಕೊಂಡಿದ್ದಾರೆ ಎಂದು ಅವರು ವಿದ್ಯಾರ್ಥಿಗಳು ಪಠ್ಯದ ಜೋತೆಯಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರೆ ಯಾವ ವಿದ್ಯಾರ್ಥಿಗಳು ಪುಸ್ತಕ ಓದುವ ಕಡೆ ಗಮನ ನೀಡುತ್ತಿಲ್ಲ, ದಿನ-ನಿತ್ಯ ಮೊಬಲ್‍ಗೆ ನೂರಾರು ರೂಪಾಯಿಗಳನ್ನು ವೆಚ್ಚ ಮಾಡುತ್ತಾರೆ ಪುಸ್ತಕ ಖರೀದಿಗೆ ಮೀನಾ-ಮೇಷ ಎಣಿಸುತ್ತಾರೆ ಎಂದರು.
ಪ್ರಗತಿ ಪರ ಸಂಘಟನೆ ಅಧ್ಕಕ್ಷ ಕೆ.ಸುದರ್ಶನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯುವ ಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್ ಸಂಯೋಜಕ ಜಯರಾಮು ನಾಯಕರಹಳ್ಳಿ, ಚಿಂತಕರಾದ ವೆಂಕಟೇಶ್ ದೇವಿಪೂರ, ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಕು||ಪವಿತ್ರ, ಪತ್ರಕರ್ತರ ಬಿ.ಎನ್.ಲಕ್ಷ್ಮಣ್, ಪ್ರೋ.ಜಯರಾಮು, ಪ್ರೋ.ಸತೀಶ್, ಪ್ರೋ.ಮಮತ ಇನ್ನು ಮುಂತಾದವರು ಹಾಜರಿದ್ದರು.
ಪೋಟೋ: ರಾಷ್ಟ್ರೀಯ ಕಾನೂನು ಶಾಲೆ ಹಾಗೂ ಅಂಬೇಡ್ಕರ್ ಅಧ್ಯಯನ ಕೇಂದ್ರ ಬೇಂಗಳೂರು ಇವರ ವತಿಯಿಂದ ಯುವ ಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಅಬ್ದುಲ್ ಸಮದ್ ಉದ್ಘಾಟನೆ ನಡೆಸಿದರು.

No comments:
Post a Comment