ರೇವಣ್ಣ.. ಜೀ, ನೀವು ಸ್ವಾಭಿಮಾನಿ ಹೊಲೆಮಾದಿಗನಾಗಿ ಹುಟ್ಟಿದ್ದರೇ..!!
ರೇವಣ್ಣ.. ಜೀ, ನೀವು ಸ್ವಾಭಿಮಾನಿ ಹೊಲೆಮಾದಿಗನಾಗಿ ಹುಟ್ಟಿದ್ದರೇ..!! ಮಾನ್ಯ ಎಚ್.ಡಿ ರೇವಣ್ಣ ಅವರಿಗೆ ``ಭೀಮ ವಿಜಯ’’ ಬಹಿರಂಗ ಪತ್ರ ಮಾನ್ಯ ಶ್ರೀ ಎಚ್ ಡಿ ರೇವಣ್ಣ ಹಾಲಿ ಶಾಸಕರು, ಮಾಜಿ ಮಂತ್ರಿಗಳು ಇವರಿಗೆ ಭೀಮ ವಿಜಯದ ನಮಸ್ಕಾರಗಳು. ಹಾಲಿ ಎಂ ಪಿ, ಮಾಜಿ ಪ್ರಧಾನಿ ಮಾನ್ಯ ಶ್ರೀ ಎಚ್ ಡಿ ದೇವೇಗೌಡರು, ನಿಮ್ಮ ಸಹೋದರರಾದ ಹಾಲಿ ಎಂಎಲ್‍ಎ ಮಾಜಿ ಮುಖ್ಯ ಮಂತ್ರಿ ಎಚ್ ಡಿ ಕುಮಾರ ಸ್ವಾಮಿ. ನಿಮ್ಮ ಪತ್ನಿ ಜಿ ಪಂ ಸದಸ್ಯೆ ಭವಾನಿ, ನಿಮ್ಮ ಪುತ್ರ ಜಿ ಪಂ ಸದಸ್ಯೆ ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ನಂಬಿರುತ್ತೇನೆ. ನಿಮ್ಮ ತಂದೆಯವರನ್ನು ರಾಜ್ಯಪಾಲರು ರಾಜಭವನದ ಒಳಗೆ ಪ್ರವೇಶನೀಡದಿರುವ ವಿಷಯ ತಿಳಿಯಿತು . ನಿಮ್ಮ ಪಕ್ಷದ ಮುಖಂಡರು ಪ್ರತಿಭಟನೆಯನ್ನು ಮಾಡಿದ್ದು ತಿಳಿಯಿತು. ಇದು ಪ್ರಕೃತಿ ನಿಯಮ ರೇವಣ್ಣ ಜೀ.. ಮಾಡಿದುಣ್ಣು ಮಾರಯಾ ಅಂತಾರಲ್ಲ ಹಾಗೇ.. ಸಿರಗನಹಳ್ಳಿಯಲ್ಲಿ ನೀವು ಮಾಡಿದ್ದನ್ನು. ಸಮಯ ನಿಮಗೆ ಮಾರ್ಮಿಕವಾಗಿ ತಿಳಿಸಿದೆ. ರಾಜ್ಯಪಾಲರು ತಿಳಿದೂ ತಿಳಿಯದೂ ಪರೋಕ್ಷವಾಗಿ ಬಧುಕಿನ ವಾಸ್ತವನ್ನು ನಿಮಗೆ ತಿಳಿಸಿದ್ದಾರೆ. ಮಾದ್ಯಮಗಳು ಇದನ್ನು ಬಿಡಿಸಿ ಹೇಳಿವೆ.. ನೀವು ಆರ್ಥಮಾಡಿಕೊಳ್ಳಬೇಕಾದದ್ದು ಬಹಳಷ್ಟಿದೆ. ಸಿರಗನಹಳ್ಳಿಯಲ್ಲಿ ನೀವು ಮಾಡಿದ್ದು ಸರಿಯೇ.. ರೇವಣ್ಣನವರೇ..? ಇವನ್ಯಾರು ನನ್ನನ್ನು ಹೀಗೆ ಪ್ರಶ್ನಿಸೂಕೆ ಎಂದು ನಿಮ್ಮನ್ನು ಪ್ರಶ್ನಿಸಿಕೊಳ್ಳಬೇಡಿ. ನೀವು ವಿಜಯ್ ಕುಮಾರನನ್ನು ` ವಿಜಯವಾಣಿ’ ಯಿಂದ ಬೆದರಿಸಿ ಕಳುಹಿಸಿದಿರಿ. ವಿಜಯ್ ಕುಮಾರ್ ಕೆಲಸಕ್ಕೆ ರಾಜಿನಾಮೆ ನೀಡಿ ನಿಮ್ಮ ಮುಂದೆ ಸವಾಲಾಗಿ ನಂತಿದ್ದಾನೆ. ನಿಮ್ಮ ಕನಸಿನಲ್ಲಿ ಬಂದು ಎದೆ ಮೇಲೆ ಕುಣಿಯುತ್ತಿದ್ದಾನೆ. ನಿಮಗೆ ವಿಜಯ್ ಕುಮಾರ್ ನಿಂದಾಗಿ ನಿದ್ದೆ ಬರುತ್ತಿಲ್ಲ. ನಿದ್ದೆ ಗುಳಿಗೆ ಸೇವಿಸಿ ನಿದ್ರಿಸುತ್ತಿದ್ದಿರಿ ಇದು ಆರೋಗ್ಯಕ್ಕೆ ಒಳ್ಳಯದಲ್ಲ ರೇವಣ್ಣ, ಇಂಗ್ಲೀಷ್ ಪತ್ರಿಕೆ ವರದಿಗಾರರೊಬ್ಬರನ್ನು ಬೆದರಿಕೆ ಹಾಕಿದ್ದೀರಿ.. ನಿಮ್ಮ ವಿರುದ್ದ ಬರೆಯುವರನ್ನು ಬೆದರಿಸುತ್ತಿರಿ, ಇಲ್ಲಿಂದ ಓಡಿಸಲು ಯತ್ನಿಸುತ್ತಿರಿ . ಇನ್ನು ಬರೆಯುವರನ್ನು ಬೆದರಿಸಲಾಗದು, ಓಡಿಸಲಾಗುವುದು. ನಾನು ಹುಟ್ಟಿರುವುದೇ ಈ ಸಂಘರ್ಷಕ್ಕಾಗಿ, `ಶೋಷಿಸವರು ಮಾತ್ರ ಶೋಷಿತರ ಹಣೆಬರಹ ಬರೆಯಲು ಸಾಧ್ಯ’ ಎನ್ನುವುದನ್ನು ಅಳಿಸಿ. ಶೋಷಿಸುವರ ಹಣೆಬರಹ ಬರೆಯಲು ನಾನು ಮೈದಾನದಲ್ಲಿದ್ದೇನೆ. ನನಗೆ ಭಯ ದ ಅರ್ಥವೇ ಗೊತ್ತಿಲ್ಲ. ನನ್ನ ಡಿಕ್ಷನರಿಯಿಂದ ಈ ಪದ ಅಳಿಸಿಹಾಕಿದ್ದೇನೆ. ದೇವೇಗೌಡರ ಪುತ್ರನಲ್ಲದಿದ್ದರೇ ನೀವು ಶೊನ್ಯ ರೇವಣ್ಣ, ಜನನಾಯಕ ಎನಿಸಿಕೊಳ್ಳುವ ಯಾವ ಅರ್ಹತೆಯೂ ನಿಮಗಿಲ್ಲ. ಒಂದಂತು ಸತ್ಯ ರೇವಣ್ಣನವರೆ.. ನೀವೇ ದೇವೇಗೌಡರ ಮಗನಲ್ಲದಿದ್ದರೇ ಅದೇನಾಗಿರುತ್ತಿದ್ದಿರೂ..? ನಾನು ಸಂವಿಧನಾತ್ಮಕವಾಗಿ ಇಲ್ಲಿ ಮಾತನಾಡುತ್ತಿದ್ದೇನೆ ನಿಮ್ಮ ಮಾನಹಾನಿ ಯಾಗದಂತೆ ಎಚ್ಚರ ವಹಿಸಿದ್ದೇನೆ. ಮುಖ್ಯವಾಗಿ ಸಂವಿಧಾನ ಮಾನ್ಯತೆ ನೀಡದ `ದಲಿತ’ ಪದವನ್ನು ಬಳಸದೆ. ಪರಿಶಿಷ್ಟ ಜಾತಿ ಪದವನ್ನೆ ಬಳೆಸಿದ್ದೇನೆ. ಸಿಗರನಹಳ್ಳಿಯ ಎಸ್ಸಿಗಳು ಸಂವಿಧಾನದ `ಧಾರ್ಮಿಕ ಸ್ವಾತಂತ್ರ್ಯದ ಹಕ್ಕ’ನ್ನು ಕೇಳುತ್ತಿದ್ದಾರೆ. ನೀವು ಅವರ ಹಕ್ಕನ್ನು ಧಮನಿಸಲು ಮುಂದಾಗಿದ್ದೀರಿ. ಪ್ರಚೋದಿಸುತ್ತಿದ್ದೀರಿ. ಮಾನವ ವಿರೋಧಿ, ಸಂವಿಧಾನ ವಿರೋಧಿ ಜಾತಿವಾದವನ್ನು ಎತ್ತಿಹಿಡಿಯುತ್ತಿದ್ದೀರಿ. ಸಿಗರನಹಳ್ಳಿ ಎಸ್ಸಿಗಳು ದೇವಸ್ಥಾನ ಪ್ರವೇಶಕ್ಕೆ ಸಂಬಂದಿಸಿದಂತೆ ಹಲವು ದಿನಗಳಿಂದ ಸಮಾಜದ ಮುಂದೆ ಪ್ರಶ್ನೆ ಎತ್ತಿದ್ದಾರೆ. ನೀವು ಈ ಕ್ಷೇತ್ರದ ಶಾಸಕರಾಗಿ ರಾಜಧರ್ಮ ಪಾಲಿಸುವುದು ನಿಮ್ಮ ಕರ್ತವ್ಯ ಆದರೇ ನೀವು ಮಾಡುತ್ತಿರುವುದಾದರೂ ಏನು? ಪರ್ತಕರ್ತಕರನ್ನು ಪೋಲಿಸರನ್ನು ಬಡಿದ ಆರೋಪಿಗಳಿಗೆ ಬೆಂಬಲಿತವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ( ಶಾಮಿಯಾನ ಮತ್ತು ಮೈಕಿನ ಪರವಾನಿಗೆ ಪಡೆಯದೆ) ಪ್ರತಿಭಟನೆ ನಡೆಸುತ್ತೀರಿ. ಸಮಾಜ ದ್ರೋಹಿ, ಮಾನವ ವಿರೋಧಿ, ಸಂವಿದಾನ ವಿರೋಧಿ ಜಾತಿವಾದಿಗಳಿಗೆ ಬೆಂಬಲಿಸುತ್ತಿರಲ್ಲ ನಿಜವಾಗಿಯೂ ನೀವು ಮನುಷ್ಯರೇ…? ನಿಮ್ಮ ಅಪ್ಪಾಜಿ ದೇವೇಗೌಡರು ಹೇಳಿದ ಹಾಗಿ ಸಿಗರನಹಳ್ಳಿಯ ಎಸ್ಸಿಗಳು ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ಪ್ರಯತ್ನಿಸಿಲ್ಲ. ಸಿಗರನಹಳ್ಳಿಯ ಸವರ್ಣಿಯರು ಎಲ್ಲಿಯವರೆಗೂ ಪ್ರವೇಶಿಸುತ್ತಾರೇ ಅಲ್ಲಿಯವರೆಗೆ ನಮಗೂ ಪ್ರವೇಶ ನೀಡಿ ಎಂದು ಕೇಳುತ್ತಿದ್ದಾರೆ ಅಷ್ಟೆ. ಇದನ್ನು ವಿರೋಧಿಸುವ ಸಂವಿಧಾನ ವಿರೋಧಿಗಳಿಗೆ ನೀವು ಬೆಂಬಲಿಸುವುದು ಆತ್ಮವಂಚನೆಯಲ್ಲವೇ? ಸಿಗರನಗಳ್ಳಿಯ ಕೆಲ ಅಂದರೇ ಎಲ್ಲರೂ ಅಲ್ಲ ಕೆಲವು ಸವರ್ಣಿಯರು ಉಪವಿಭಾಗಾಧಿಕಾರಿ ವಿಜಯ್(ಮಹಿಳಾ ಅಧಿಕಾರಿ) ಅವರೊಂದಿಗೆ ತೀರ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ದಿಗ್ಭಂದನೆ ವಿದಿಸಿದ್ದರು. ಇದು ಸರಿ ಎಂದು ಸಮರ್ಥಿಸುವ ಹಾಗೆ ವರ್ತಿಸುತ್ತಿರಲ್ಲ ಇದು ಜಾತಿಯ `ಅಹಂ’ ಅಲ್ಲದೆ ಮತ್ತೇನೂ? ಮಾನವ ವಿರೋದಿಯಾಗಿ ನಡೆದು ಕೊಂಡ `ಹಿಟ್ಲರ್’ ಕಡೆಯ ದಿನಗಳು ಎನಾದವು ಗೊತ್ತೇ…? ರೇವಣ್ಣ..ಜೀ. ಜಾತಿ, ಧರ್ಮ, ಶಕ್ತಿ, ಹಣಗಳಿಂದ ಮೆರದವರರು ಈ ಮಣ್ಣಲ್ಲೆ ಮಣ್ಣಗೊದು. ಇತಿಹಾಸ ಮಾತ್ರ ಸಾರಿ ಸಾರಿ ಅವರ ಕ್ರೂರತೆ ಸಾರುತ್ತದೆ. ಈ ನಿಮ್ಮ ಅಟ್ಟಹಾಸವು ಅಷ್ಟೆ ಇತಿಹಾಸ ಸೇರಿದೆ. ಮುಂದಿನ ಪೀಳಿಗೆಗಳು ನಿಮ್ಮನ್ನು ದೋಷಿಸದಿರದು. ನೀವು ಮಹಾನ್ ಸ್ವಾಭಿಮಾನಿಯಾಗಿ ಬಿಂಬಿಸಿಕೊಳ್ಳುತ್ತೀರಿ. ನಾನು ನಿಮ್ಮ ದರ್ಯ-ಹಠ ಎಲ್ಲವನ್ನು ಒಪ್ಪಿಕೊಳ್ಳುತ್ತೇನೆ. ಎಕೆಂದರೆ ನೀವು ಸಕಲೇಶಪುರದ ಶಾಸಕ ಎಚ್ ಕೆ ಕುಮಾರಸ್ವಾಮಿ ಅವರ ಹಾಗೆ ರಾಜಕೀಯ ಮಂಗಳಮುಖಿಯಲ್ಲ. ಸಿಗರನಹಳ್ಳಿಯ ಎಸ್ಸಿಗಳು ನಿಮ್ಮಹಾಗೆ ಸ್ವಾಭಿಮಾನಿಗಳು, ಅವರಲ್ಲಿ ದೇವರನ್ನು ನಂಬದವರು ಬಹಳಷ್ಟು ಜನ ಇದ್ದಾರೆ. ದೇವಸ್ಥಾನದ ಪ್ರವೇಶ, ಸಮೂದಾಯ ಭವನ ಪ್ರವೇಶ ಅಲ್ಲಿಯ ಎಸ್ಸಿಗಳ ಸ್ವಾಭಿಮಾನದ ಪ್ರಶ್ನೆಯಾಗಿದೆ. ಹುಟ್ಟು ಯಾರ ಕೈಯಲ್ಲೂ ಇಲ್ಲ ರೇವಣ್ಣ,.. `ಅದು ಅಕಸ್ಮಿಕ’ ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿಹಾಕಿ ಹುಟ್ಟಲು ಅಸಾದ್ಯ. ನೀವೆನಾದರು ಎಸ್ಸಿಯಾಗಿ ಹುಟ್ಟಿದ್ದರೇ? ಬೇಜಾರು ಮಾಡಿಕೊಳ್ಳಲು ಬೇಡಿ. ಇದು ಒಂದು ಕಲ್ಪನೆ ಅಷ್ಟೇ .. ಎಸ್ಸಿಯಾಗಿ ಹುಟ್ಟುವುದು ಪಾಪವು ಅಲ್ಲ ಶಾಪವು ಅಲ್ಲ. ನೀವೆನಾದರು.. ಸಿಗರನಹಳ್ಳಿಯ ತಾಯವ್ವ ಮಗನಾಗಿ ಹುಟ್ಟಿದ್ದರೇ ಏನು ಮಾಡುತ್ತಿದ್ದೀರಿ?. ನಿಮ್ಮನ್ನು ದೇವಸ್ಥಾನದ ಹೋರಗೆ? ಸಮುದಾಯ ಭವನದ ಹೊರಗೆ ನಿಲ್ಲಿಸಿದ್ದರೆ? ನಿಮ್ಮ ಪ್ರತಿಕ್ರಿಯೇ ಏನಾಗಿರುತ್ತಿತ್ತು ರೇವಣ್ಣ ಜೀ..? ನಿಮ್ಮ ಜಾಗದಲ್ಲಿ ವಿಜಯ ಕುಮಾರ್? ವಿಜಯ ಕುಮಾರ್ ಜಾಗದಲ್ಲಿ ನೀವಿದ್ದರೇ? ಆಗ ನೀವು ಸುಮ್ಮನಾಗಿರುತ್ತಿರಲಿಲ್ಲ. ಖಂಡಿತವಾಗಿಯೂ ಬಂಡಾಯದ ಬಾವುಟ ಹಿಡಿಯುತ್ತಿದ್ದೀರಿ. ನಾನು ಮನುಷ್ಯನಲ್ಲವೇ ಎಂದು ಪ್ರಶ್ನಿಸುತ್ತಿದ್ದೀರಿ? ನಿಮ್ಮ ಹಕ್ಕಿಗಾಗಿ ಖಂಡಿತಾ ಹೋರಾಡುತ್ತಿದ್ದಿರಿ. ಜಾತಿವಾದವನ್ನು ವಿರೋದಿಸುತ್ತಿದ್ದೀರಿ.. ರೇವಣ್ಣ ಜೀ ಅರ್ಥ ಮಾಡಿಕೊಳ್ಳಿ ಸ್ವಾಮಿಮಾನಿ ಮನುಷ್ಯ ಮಾಡಬೇಕಾದುದ್ದನ್ನೆ ಸಿಗರನಹಳ್ಳಿಯ ಎಸ್ಸಿಗಳು ಮಾಡುತ್ತಿದ್ದಾರೆ. ನೀವು ರಾಜಕೀಯಕ್ಕೆ ಸಿಗರನ ಹಳ್ಳಿ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದೀರಿ. ಕಾಂಗ್ರೇಸ್ ಪಕ್ಷವನ್ನು ಎಳೆದು ತರುತಿದ್ದೀರಿ. ಒಕ್ಕಲಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದೀರಿ. ಇದು ನ್ಯಾಯವೇ ರೇವಣ್ಣ ಜೀ..? ಮುಂದಿನ 11 ರಂದು ಸೋಮವಾರ ಸಿಗರನಹಳ್ಳಿ ವಿಚಾರಕ್ಕೆ ಸಂಬಂದಿಸಿದಂತೆ ಜಿಲ್ಲಾಡಳಿತ ಸಭೆ ಕರೆದಿದೆ. ಅ ಸಭೆಯಲ್ಲಿ ಒಂದು ಒಳ್ಳೆಯ ನಿರ್ನಾಯ ಕೈಗೊಳ್ಳಿ. ಕೊಳಕು ಜಾತಿ ವಾದವನ್ನು ದಿಕ್ಕರಿಸಿ ಸಂವಿಧಾನ ಹಾಗೂ ಮಾನವಿಯತೆಗೆ ಒತ್ತು ಕೊಟ್ಟು ಸಮಸ್ಯೆಯನ್ನು ಬಗೆ ಹರಿಸಿ. ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳು ಬಹಳಷ್ಟಿವೆ. ಬದುಕಿಗೆ ಕಗಂಟ್ಟಾಗಿರುವ ಸಮಸ್ಯೆಗಳಿಂದ ಜನ ತತ್ತರಿಸುತ್ತಿದ್ದಾರೆ. ಮಿತಿಮೀರಿದ ಬಿಸಿಲಿನ ತಾಪ ಜೊತೆಗೆ ನೀರಿನ ಅಹಾಕಾರ ಬದುಕನ್ನೆ ಕಠಿಣ ಗೊಳಿಸುತ್ತಿದೆ. ಕನಿಷ್ಟ ಕುಡಿಯುವ ನೀರಿನ ಸಮಸ್ಯೆಯಾದರು ಬಗೆಹರಿಸಲು ಮುಂದಾಗಿ, ಇದೆಲ್ಲಾ ಬಿಟ್ಟು ಶಿಲಾಯುಗದ ಮಾನವ ನಂತೆ ವರ್ತಿಸುವುದು ಸರಿಯಲ್ಲ ರೇವಣ್ಣ.. ಜೀ? ಜೈ ಭೀಮ್, ಜೈ ಭಾರತ್ ಭೀಮ ವಿಜಯ
No comments:
Post a Comment