BHEEMA VIJAYA KARKAN25113/13/7/2015-TC HASSAN

ಕ್ರೀಡೆಯು ಪ್ರಿತಿ,ಸೋಲು,ಗೆಲವು,ಧ್ಯಾನ, ಆರೋಗ್ಯ ನೀಡುತ್ತದೆ: ಎಚ್ ಎಂ ವಿಶ್ವನಾಥ್



ಸಕಲೇಶಪುರ: ಕ್ರೀಡೆ ಪ್ರೀತಿಯ ಒಂದು ಭಾಗ. ಜೀವನದಲ್ಲಿ ಸೋತು ಗೆಲ್ಲುವುದನ್ನು  ಹಾಗೂ ಬದುಕುವುದನ್ನು ಕಲಿಸುತ್ತದೆ ಆರೋಗ್ಯವನ್ನು ನೀಡುತ್ತದೆ ಎಂದು ಮಾಜಿ ಶಾಸಕ ಎಚ್  ಎಂ ವಿಶ್ವನಾಥ್ ಹೇಳಿದರು.


ಪಟ್ಟಣದ ಸುಭಾಷ್ ಮೈಧಾನದಲ್ಲಿ ರಾಯಲ್ ಫ್ರೆಂಡ್ಸ್ ಟ್ರಸ್ಟ್ ಆಶ್ರಯದಲ್ಲಿ ನಡೆದ ಹೋನ್ನಲು ಬೆಳಕಿನ 2 ದಿನದ ಟೆನಿಸ್ ಬಾಲ್ ಕ್ರಿಕೇಟ್ ಪಂಧ್ಯದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು. ಕ್ರೀಡೆಯಲ್ಲಿ ಪ್ರೀತಿಯಿದೆ ಯಾವುದೇ ಗಡಿಗಳಿಲ್ಲ. ಎಲ್ಲರೂ ಮುಕ್ತವಾಗಿ ಬೆರೆಯುವ ವೇದಿಕೆಯು ಆಗಿದೆ ಎಂದು ಹೇಳಿದರು.


ಭಕ್ತರು ಇದ್ದಲ್ಲಿ ದೇವರಿರುತ್ತಾನೆ ಎನ್ನುವ ಹಾಗೆ ಧಾನಿಗಳಿದ್ದ ಕಡೆ ಕ್ರಿಡೆ ಇರುತ್ತದೆ. ಕ್ರಿಡೆ ಭಕ್ತಿಯಷ್ಟೆ ಪ್ರಭಾವಿಯಾಗಿದ್ದು, ಧ್ಯಾನಕಿಂತಲು ಹೆಚ್ಚಾಗಿ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದರು.
ಬದುಕಿನಲ್ಲಿ ಸೋಲು ಸಹಜ, ಸೋಲಿನ ಹತಾಶೆ ಮನುಷ್ಯನನ್ನು ಘಾಸಿಗೊಳಿಸುತ್ತದೆ, ಬದುಕನ್ನು ಸಂಕೀರ್ಣಗೋಳೀಸುತ್ತದೆ. ಆದರೆ ಕ್ರೀಡೆ ಸೋಲು-ಗೆಲವುಗಳ ಆಟ ಇದು ಮನುಷ್ಯನ ಮನಸ್ಸನ್ನು ಗಟ್ಟಿಗೊಳಿಸಿ ಸೋಲು ಮತ್ತು ಗೆಲುವನ್ನು ಸಮಾನಾಂತರವಾಗಿ ಸ್ವಿಕರಿಸುವ ಹಾಗೂ ಸೋತಾಗ ಹತಾಶರಾಗದಿರುವಂತ ಸ್ಥಿತಿಯಲ್ಲಿ ಮನಸ್ಸನ್ನು ಉಲ್ಲಾಸಗೊಳಿಸಿ ಇನ್ನೂದು ಗೆಲುವಿಗೆ ಪ್ರೇರಣೆನೀಡುತ್ತದೆ ಜೊತೆಗೆ ಉತ್ತಮವಾದ ಆರೋಗ್ಯಕ್ಕೂ ಕ್ರೀಡೆ ಸಹಕಾರಿ ಎಂದರು.


ರಕ್ಷಿದ್ದಿ ಇಬ್ರಾಹಿಂ ಕುಟುಂಬ ಕಳೆದ 4 ದಶಕಗಳಿಂದ ಕ್ರೀಡೆಗೆ ತನ್ನ ಕೈಲಾದ ಕೊಡುಗೆಯನ್ನು ನೀಡುತ್ತಿದೆ. ಕ್ರೀಡೆಯ ಜೊತೆ ಬದುಕುತ್ತಿದೆ ಎಂದು ಗುಣಗಾನ ಮಾಡಿದ ಮಾಜಿ ಶಾಸಕ ಎಚ್ ಎಂ ವಿಶ್ವನಾಥ್, ಧಾನಿಗಳು ಹಾಗೂ ಪ್ರಯೋಜಕರಿಲ್ಲದಿದ್ದರೆ ಕ್ರೀಡೆ ನಡೆಸಲು ಕಷ್ಟಸಾದ್ಯ ಎಂದರು.


ಈ ಸಂದರ್ಭದಲ್ಲಿ ರೋಗಿಗಳಿಗೆ ಆರ್ಥಿಕ ಧನ ಸಹಾಯ ಮಾಡಲಾಯಿತು ಹಾಗೂ ಹಿರಿಯ ಕ್ರೀಕೇಟ್ ಪಟುಗಳಾದ ಅರುಣ್ ರಕ್ಷಿದ್ದಿ, ತಜಮುಲ್, ಶ್ರೀಕಾಂತ್ ರವರನ್ನು ಸನ್ಮಾನಿಸಲಾಯಿತು.

 

ವೇದಿಕೆಯಲ್ಲಿ ಕಾಂಗ್ರೇಸ್ ಮುಖಂಡ ಡಿ ಸಿ ಸಣ್ಣಸ್ವಾಮಿ, ಜಿ ಪಂ ಸದಸ್ಯ ಸುಪ್ರದೀಪ್ತ್, ಪುರಸಭೆಯ ಮಾಜಿ ಆದ್ಯಕ್ಷ  ಸಯ್ಯದ್ ಮುಫೀಜ್,  ಪತ್ರಕರ್ತರ ಸಂಘದ ಅದ್ಯಕ್ಷ ರವಿ ಕುಮಾರ್, ಕೊಲ್ಲಹಳ್ಳಿ ಇಬ್ರಾಹಿಂ, ರಾಯಲ್ ಫ್ರೆಂಡ್ಸ್ ಟ್ರಸ್ಟ್ ಅಧ್ಯಕ್ಷ ಸಫೀರ್ ಖಾನ್ ಇತರರು ಇದ್ದರು.


No comments:

Post a Comment