ಹಾಸನ: ಪ್ರವಾಸಕ್ಕೆಂದು ಬಂದಿದ್ದ ಸ್ನೇಹಿತರ ಗುಂಪೊಂದು ವಾಹನದಲಿ ಚಲಿಸುತ್ತಿದ್ದಾಗ ತಡ ರಾತ್ರಿ ಚಾಲಕನ ಆಯತಪ್ಪಿ ಕೆರೆಗೆ ಉರುಳಿದ ಪರಿಣಾಮ 7 ಜನರು ಮೃತಪಟ್ಟರೇ ಮೂವರು ಬದುಕುಳಿದಿದ್ದಾರೆ.
ಮೇಲುಕೋಟೆಗೆ ಹೋಗಿ ಚಿಕ್ಕಮಗಳೂರಿಗೆ ತೆರಳುತ್ತಿದ್ದಾಗ ರಾತ್ರಿ 1-30ರ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಶ್ರವಣಬೆಳಗೊಳದ ಬಳಿ ಇರುವ ಜನಿವಾರ ಕೆರೆಗೆ ಸ್ಕಾರ್ಪಿಯೋ ಕಾರು ಉರುಳಿದೆ. ವಾಹನದಲ್ಲಿದ್ದ ಚಾಮರಾಜನಗರ ಜಿಲ್ಲೆ ನಲ್ಲೂರು ಗ್ರಾಮದ ಸತೀಶ 25ವರ್ಷ, ಅಂಕನಹಳ್ಳಿ, ಮಂಡ್ಯ ಜಿಲ್ಲೆಯ ಶಿವಸ್ವಾಮಿ 23ವರ್ಷ, ಮಂಡ್ಯ ಜಿಲ್ಲೆ ತಿಮ್ಮೇಗೌಡನ ದೊಡ್ಡಿಯ ಜಯಂತ್ 24ವರ್ಷ, ಬೆಂಗಳೂರು ಮಾಗಡಿ ರಸ್ತೆಯಲ್ಲಿರುವ ಮಾಚುವಳ್ಳಿಯ ಜನಾರ್ಧನ 24ವರ್ಷ, ತುಮಕರೂರು ಜಿಲ್ಲೆ ತುರುವೇಕೆರೆ ಕಪ್ಪೂರು ಗ್ರಾಮದ ಕಾರ್ತಿಕ್ 25ವರ್ಷ, ರಾಮನಗರ ಜಿಲ್ಲೆ ಅಬ್ಬಿನಕುಪ್ಪೆ, ಬಿಡದಿಯ ದಿಲೀಪ್ 24ವರ್ಷ, ಹೊಳೆನರಸೀಪುರ ತಾಲ್ಲೂಕ್ ನಗರನಹಳ್ಳಿಯ ಎನ್.ಆರ್. ರಾಜು 25ವರ್ಷ, 7 ಜನರು ಮೃತಪಟ್ಟಿದ್ದಾರೆ. ಪ್ರಶಾಂತ್, ರಘು ಹಾಗೂ ಚಾಲಕ ಪ್ರಸನ್ನ ಇವರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿ ಮೂವರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಮನಗರ ತಾಲ್ಲೂಕ್ ಬೆಟ್ಟಳ್ಳಿ ಗ್ರಾಮದ ವಾಸಿ ರಂಗನಾಥ ರವರು ಬೆಂಗಳೂರಿನ ಟಯೋಟ ಕಿರ್ಲೋಸ್ಕರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿನ ಸ್ನೇಹಿತರಾದ ಎಂ.ಸಿ.ಮನು, ಡಿ.ಆರ್. ಸಂತೋಷ, ಅನಿಲ್‍ಕುಮಾರ, ಸತೀಶ, ಶಿವಸ್ವಾಮಿ, ಜಯಂತ್, ಜನಾರ್ಧನ, ಕಾರ್ತಿಕ್, ದಿಲೀಪ್, ರಾಜು, ರಘು, ಪ್ರಶಾಂತರವರುಗಳು ಶನಿವಾರ ಮತ್ತು ಭಾನುವಾರ ಕಂಪನಿಗೆ ರಜೆ ಇದ್ದುದರಿಂದ ಚಿಕ್ಕಮಗಳೂರು, ಹೊರನಾಡು ಮುಂತಾದ ಕಡೆ ದೇವಸ್ಥಾನಕ್ಕೆ ಹೋಗಲು ತನ್ನ ಸ್ನೇಹಿತ ಪ್ರಸನ್ನಕುಮಾರನಿಗೆ ಕಾರುಗಳು ಬೇಕೆಂದು ಕೇಳಲಾಗಿದೆ.
ಇವರೆಲ್ಲಾ ಬೆಂಗಳೂರಿನ ಬಿಡದಿ ಬಳಿ ಇರುವ ಟೊಯಾಟಾ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಸ್ನೇಹಿತರೆಲ್ಲಾ ಪ್ರವಾಸ ಮಾಡುವ ಯೋಚನೆಯೊಂದಿಗೆ ಎರಡು ವಾಹನದಲ್ಲಿ ಹೊರಟಿದ್ದಾರೆ. ಹಿಂದೆ ಶಿಫ್ಟ್ ಕಾರು ಬರುತ್ತಿದ್ದು, ಮೊದಲು ಹೊರಟ ಸ್ಕಾರ್ಪಿಯೋ ಕಾರುನಲ್ಲಿ ದುರ್ಘಟನೆ ನಡೆದಿದೆ. ಕೆರೆಗೆ ವಾಹನ ಬಿದ್ದಾಗ ಡೋರ್ ಲಾಕ್ ತೆಗೆಯಲು ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಆದರೇ ಚಾಲಕನು ಹೊರ ಬಂದು ಪಕ್ಕದಲ್ಲಿದ್ದ ಇಬ್ಬರನ್ನು ಉಳಿಸಿದ್ದಾನೆ ಎಂದು ಹೇಳಲಾಗಿದೆ. ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

No comments:
Post a Comment