ಹಾಸನ: ಯಾವ ವ್ಯಕ್ತಿಗೆ ಕುಟುಂಬದಲ್ಲಿ ನೆಮ್ಮದಿ ಸಿಗುವುದಿಲ್ಲವೋ ಆತನು ಮಸೀದಿ, ಮಂದಿರ ಚರ್ಚ್‍ಗಳಿಗೆ ಹೋದರೇ ಶಾಂತಿ ನೆಮ್ಮದಿ ಸಿಗುವುದೇ ಎಂದು ಇಳಕಲ್ ಅರಬಿಕ್ ಕಾಲೇಜ್ ಉಪನ್ಯಾಸಕ ಲಾಲ್ ಹುಸೇನ್ ಕಂದಗಲ್ ತಿಳಿಸಿದ್ದಾರೆ.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೂರು ದಿವಸದ ಸಾರ್ವಜನಿಕ ಕುರ್‍ಆನ್ ಪ್ರವಚನ ಕಾರ್ಯಕ್ರಮದಲ್ಲಿ ಸಂತೃಪ್ತ ಕುಟುಂಬ ಎಂಬ ವಿಷಯ ಕುರಿತು ಮುಖ್ಯ ಭಾಷಣದಲ್ಲಿ ಮಾತನಾಡುತ್ತಾ, ಈಗಿನ ಮನೆಗಳು ಬಹುತೇಕ ಅತೃಪ್ತಿ ಕುಟುಂಬ ಆಗಿದೆ. ಮಕ್ಕಳಿದ್ದರೂ ತಾಯಿಗೆ ಮನೆಯಲ್ಲಿ ಸ್ಥಾನ ನೀಡದೆ ಹೊರ ಹಾಕುವ ಮೂಲಕ ಭಿಕ್ಷೆ ಬೇಡುವ ಸ್ಥಿತಿಗೆ ತಂದಿದ್ದಾರೆ. ಇದಕ್ಕಿಂತ ಪಾಪದ ಕೆಲಸ ಬೇರೆ ಯಾವುದು ಇಲ್ಲ ಎಂದು ಆತಂಕವ್ಯಕ್ತಪಡಿಸಿದರು. ಸ್ವರ್ಗ ಎಂಬುದು ಆಕಾಶದಲ್ಲಿ ಇಲ್ಲ ಅದು ಆತನ ತಾಯಿಯಲ್ಲಿಯೇ ಕಾಣಬಹುದು ಎಂದು ಪ್ರವಾದಿ ಮಹಮದ್ ಹೇಳಿದ್ದಾರೆ.
ಒಂದು ಕುಟುಂಬದೊಳಗೆ ಆಡಳಿತ ಪಕ್ಷ ಮತ್ತು ವಿರೋದ ಪಕ್ಷ ಇರುವುದು ಕೋಟಿಗಟ್ಟಲೆ ಮನೆಯಲ್ಲೆಯೇ ಕಾಣಬಹುದು. ಹಿಂದೆ ಹೆಣ್ಣು ಹುಟ್ಟುವುದು ಬೇಡ ಎಂಬ ಅನಾಗರಿಕ ಕಾಲ ಇತ್ತು. ಆದರೇ ಈಗಲು ಕೂಡ ಆರ್ಥಿಕ ಲಾಭ-ನಷ್ಟದ ಬಗ್ಗೆ ಯೋಚನೆ ಮಾಡುತ್ತಿರುವುದು ಸಮಾಜದ ಬೆಳವಣಿಗೆಗೆ ಮಾರಕ ಎಂದ ಅವರು ಲಾಭ-ನಷ್ಟದ ಲೆಕ್ಕಚಾರದಲ್ಲಿ ಕುಟುಂಬ ನಡೆಯುತ್ತಿದೆ.
ಗೋಡೆಯಲ್ಲಿ ಬಿರುಕು ಬಿಟ್ಟರೇ ಗೋಡೆ ಬೀಳುತ್ತದೆ. ಆದರೇ ಕುಟುಂಬದಲ್ಲಿ ಬಿರುಕು ಬಂದರೇ ಮಧ್ಯೆ ಗೋಡೆ ಎದ್ದು ನಿಲ್ಲುತ್ತದೆ. ಒಬ್ಬ ಸ್ತ್ರೀಗೆ ಪುರುಷರ ಮೂರು ಪಟ್ಟು ಹೆಚ್ಚು ಶ್ರೇಷ್ಟತೆಯನ್ನು ಕುರಾನ್ ನೀಡಿದೆ. ಹೆತ್ತ ಮಗುವನ್ನು ಕಡೆಗಣಿಸಿ ಹಾಲು ಹುಣ್ಣಿಸದೆ ಇರುವವರು ತಾಯಿಯೇ ಅಲ್ಲ. ನಿನ್ನ ಹೆಂಡತಿ ಪಾಲಿಗೆ ಅತ್ಯತ್ತಮವಾದರೇ ಆತ ಸಮಾಜಕ್ಕೆ ಉತ್ತಮ. ಹೆಂಡತಿಯಾದವಳು ನಿನ್ನ ಗುಲಾಮಳಲ್ಲ ನಿನ್ನ ಸಂಗಾತಿ ಎಂದು ಕುರಾನ್ ತಿಳಿಸುತ್ತದೆ ಎಂದರು
.
ನಿನ್ನ ರಕ್ತ ಸಂಬಂಧದೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಒಬ್ಬ ವ್ಯಕ್ತಿಯ ಗುಣಗಳು ಕುಟುಂಬದ ತಂದೆ-ತಾಯಿಗಿಂತ ಹೆಚ್ಚು ಹೆಂಡತಿಗೆ ತಿಳಿದಿರುತ್ತದೆ. ಗ್ರಾಹಕ ಸಂಸ್ಕøತಿಯನ್ನು ಮೊದಲು ಬಿಟ್ಟರೇ ಮಾತ್ರ ನೆಮ್ಮದಿ ಕುಟುಂಬ ಕಾಣಲು ಸಾಧ್ಯ ಎಂದು ಹೇಳಿದರು.
ಶ್ರೀ ಸೋಮಶೇಖರ್ ಸ್ವಾಮೀಜಿ :
ಶ್ರೀ ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಚಾರ್ಯ ಸ್ವಾಮೀಜಿ ಉದ್ಘಾಟನಾ ನುಡಿಯಲ್ಲಿ ಮಾತನಾಡಿ, ಒಬ್ಬರಿಗಿಂತ ಹೆಚ್ಚು ಇರುವವರನ್ನು ಜಿಲ್ಲೆ, ರಾಜ್ಯ ಹಾಗೂ ದೇಶ ಎಂದು ಕರೆದರೂ ಅದರೊಳಗೆ ಶಕ್ತಿ ಇರುತ್ತದೆ. ಅದರಂತೆ ನಾನು ಎಂದು ಕರೆಯುವ ಬದಲು ನಮ್ಮದು ಎಂದು ಹೇಳಬೇಕು. ಸಮಸ್ಯೆ ಏಕೆ ಬರುತ್ತದೆ, ಅದಕ್ಕೆ ಪರಿಹಾರ ಏನು ಎಂದು ಹುಡುಕುವುದಕ್ಕಿಂತ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದರೇ ಪರಿಹಾರ ಕಂಡುಕೊಳ್ಳಬಹುದು ಎಂದು ಕಿವಿಮಾತು ಹೇಳಿದರು. ಸಂತೃಪ್ತಿ ಕುಟುಂಬ ಆಗಬೇಕಾದರೇ ಮನುಷ್ಯನಲ್ಲಿ ಚಿಂತೆ ಇರಬಾರದು. ಅಂತಹ ಮಾತುಗಳನ್ನು ಕುರಾನ್‍ನಲ್ಲಿ ಹೇಳಿದೆ ಎಂದರು. ದೇವರ ಸ್ವರೂಪವನ್ನು ಅರ್ಥ ಮಾಡಿಕೊಳ್ಳದೆ ನಾನಾ ಗೊಂದಲಕ್ಕೆ ಒಳಗಾಗುತ್ತಿದ್ದೇವೆ. ನಮ್ಮ ಭಾವನೆಗಳು ಬಹಳಷ್ಟು ಕಲ್ಮಶವಾಗಿದೆ.
ಕಾಯಕ ಬಿಡು ಫಲ ನನಗೆ ಬಿಡು, ಯಾವುದಕ್ಕೂ ವ್ಯಾಮೋಹ ಇರಬಾರದು, ಧ್ವೇಶಿಷ ಬಾರದು. ದೇವರು ಮನುಷ್ಯನಲ್ಲೆ ಇದ್ದಾನೆ. ಜಗತ್ತು ಬದುಕಿದೆ ಎಂದರೇ ದೇವ ಜಗತ್ತು ಕಾಯುತ್ತಿದ್ದಾನೆ ಎಂದರ್ಥ. ಸಂಸಾರದಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಮನಸ್ಥಾಪ ನಡೆದು ಹೆಮ್ಮರವಾಗಿ ಬೆಳೆದು ಒಬ್ಬರಿಗೊಬ್ಬರೂ ನೆಮ್ಮದಿ ಇಲ್ಲದ ಬದುಕು ಸಾಗಿಸಬೇಕಾಗುತ್ತದೆ ಎಂದು ಹೇಳಿದರು. ನ್ಯಾಯಾಲಯದಲ್ಲಿ ಹೆಚ್ಚು ಪ್ರಕರಣ ದಾಖಲಾಗಿದೆ ಎಂದರೇ ಅದು ಕುಟುಂಬದ ವಿಚಾರಗಳೇ ಆಗಿರುತ್ತದೆ. ಮನೆಯಲ್ಲಿ ಪ್ರೀತಿ ನೆಲೆಸಿದರೇ ಯಾವ ಸಮಸ್ಯೆ ಎದುರಾಗುವುದಿಲ್ಲ ಎಂದು ಇದೆ ವೇಳೆ ತಿಳಿಸಿದರು.
ಸಂತೃಪ್ತ ಕುಟುಂಬದ ಬಗ್ಗೆ ಮುಖ್ಯ ಭಾಷಣ ಮಾಡಿದ ನಂತರ ಭಾಗವಹಿಸಿದ್ದ ಸಾರ್ವಜನಿಕರು ತಮ್ಮ ಅನಿಸಿಕೆಯನ್ನು ಇದೆ ವೇಳೆ ಪ್ರಸ್ತುತ ಪಡಿಸಿ ತಿಳಿದುಕೊಂಡರು.
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಸಯ್ಯಾದ್ ಅಬ್ದೂಲ್ ಖಾಲಿಕ್, ಡಯಾಟ್ ಉಪನಿರ್ದೇಶಕ ಡಾ. ಡಿ.ವಿ. ಕಾಂತ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹೆಚ್.ಎಸ್. ಪರ್ವೀಜ್ ಪಾಷ, ಮಸ್ಜಿದ್ ಎ ಮಾಮೂರ್ ಅಧ್ಯಕ್ಷ ಫೈರೋಜ್ ನುಸ್ರುತ್ ರಹೀಮ್, ನಗರಸಭೆ ಮಾಜಿ ಸದಸ್ಯ ಹಾಗೂ ವಕೀಲರು ಕೆ.ಎಸ್. ಶ್ಯಾಮ್ ಸುಂದರ್ ಇತರರು ಪಾಲ್ಗೊಂಡಿದ್ದರು. ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಯನ್ನು ಸಲೀಂ ಪಾಷ ನಡೆಸಿಕೊಟ್ಟರು. ಕನ್ನಡಕ್ಕೆ ಅನುವಾದವನ್ನು ಮೊಹಸಿನ್ ಇಕ್ಬಾಲ್ ಹಾಗೂ ಮುಹಮ್ಮದ್ ಯಾಸಿರ್ ಸಲೀಂ ಲುರ್‍ಆನ್ ಪಠಿಸಿದರು.


No comments:
Post a Comment