BHEEMA VIJAYA KARKAN25113/13/7/2015-TC HASSAN

ಸಂಘಪರಿವಾರದಲ್ಲಿರುವ..,.

1993ರಿಂದ 2009ರ ವೇಳೆಗೆ ಧರ್ಮಾಂದ ಮುಸ್ಲಿಮ್ ಭಯೋತ್ಪಾದಕರ ಕ್ರೌರ್ಯಕ್ಕೆ ಬಲಿಯಾದ ಕಾಶ್ಮೀರಿ ಪಂಡಿತರ ಸಂಖ್ಯೆ ಸುಮಾರು 2000 ಈ ದೌರ್ಜನ್ಯವನ್ನು ಮನುಷ್ಯ ಅನ್ನಿಸಿಕೊಂಡ ಪ್ರತಿಯೊಬ್ಬರೂ ಉಗ್ರವಾಗಿ ಖಂಡಿಸಲೇಬೇಕು, ಹಿಂದುಪರ ಸಂಘನೆಗಳಂತೂ ಇಂತಹ ದುರ್ಘಟನೆಗಳು ನಡೆದಾಗಲೆಲ್ಲ ಮುಸ್ಲಿಮ್ ಧರ್ಮಾಂಧತೆ ಮತ್ತು ಅದರಿಂದಿನ ಕುಮ್ಮಕ್ಕು ಪಾಕಿಸ್ತಾನದ ಸರ್ವನಾಶಕ್ಕೆ ಕರೆಕೊಟ್ಟಲ್ಲದೆ ಭಾರತೀಯ ತರುಣಗಣ ಇಂತಹ ಭಯೋತ್ಪಾದನೆಯ ವಿರುದ್ಧ ತಮ್ಮ ಪ್ರಾಣಗಳನ್ನಾದರೂ ಪಣಕ್ಕಿಟ್ಟು ಹೋರಾಡಲು ಸಿದ್ದರಾಗಿರಬೇಕೆಂದು ಕರೆ ನೀಡುವುದರ ಜೊತೆಗೆ ಅಧಿಕಾರದಲ್ಲಿರುವ ಸರ್ಕಾರವು ಭಯೋತ್ಪಾದನೆ ಮತ್ತು ಪಾಕಿಸ್ತಾನದ ವಿರುದ್ಧ ಸಮರ ಸಾರದೆ ಷಂಡತನವನ್ನು ಪ್ರಧರ್ಶನ ಮಾಡುತ್ತಿವೆ ಎಂದು ಬಾರಿ ಬಾರಿ ಭಾಷಣಗಳಲ್ಲಿ ಖಂಡನೆ ತೋರುತ್ತವೆ. ನಿಜ ಇದೆಲ್ಲ ಆಗಲೇಬೇಕು. ತನ್ನ ದೇಶದ ಒಂದೇ ಒಂದು ಜೀವಕ್ಕೂ ಅಷ್ಟು ಬೆಲೆ ಕೊಡಬೇಕಾದ್ದು ನಮ್ಮ ಕರ್ತವ್ಯವೇ ಹೌದು. ಹಾಗೆ ನಮ್ಮ ದೇಶದ ಪ್ರಜೆಗಳ ಮಾನ ಪ್ರಾಣಗಳನ್ನು ಕಾಪಾಡಿಕೊಳ್ಳಲಾಗದ ಸರ್ಕಾರದ್ದು ಷಂಡತನವೂ ಹೌದು. ಹಾಗೆ ಅಂತಹ ಸರ್ಕಾರದ ವಿರುದ್ಧದ ದ್ವನಿ ಎತ್ತಬೇಕಾದ ಜವಾಬ್ದಾರಿ ನಮ್ಮ ಮೇಲಿರಬೇಕಾದ್ದೂ ಹೌದು. ಕೊನೆಗೆ ನಮ್ಮ ದೇಶದ ಪಂಡಿತರ ಪ್ರಾಣ ಹರಣ ಮಾಡುತ್ತಿರುವ ಭಯೋತ್ಪಾದಕರ ವಿರುದ್ಧ ನಮ್ಮ ಪ್ರಾಣವನ್ನೂ ಲೆಕ್ಕಿಸದೆ ಹೋರಾಡಿ ಎಂಬ ನಮ್ಮ ನಾಯಕರ ಆಣತಿಯಂತೆ ನಾವು ನಮ್ಮ ಪ್ರಾಣವನ್ನೂ ಬಲಿ ಕೊಟ್ಟು ನಿಲ್ಲಲೇಬೇಕು, ಹೌದು.ಹೌದು.ಹೌದು. ಎಲ್ಲವೂ ಹೌದು.
ಆದರೆ,
ಕೇಂದ್ರ ಸರ್ಕಾರದ "ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ನೀಡಿರುವ ಅಂಕಿಅಂಶಗಳ ಸಣ್ಣ ಮಾಹಿತಿಯೊಂದು  ಇಲ್ಲಿದೆ ಸ್ವಲ್ಪ ಗಮನವಿಟ್ಟು ನೋಡಿ.

2009ರಿಂದ 2014 ಅವಧಿಯಲ್ಲಿ ಭಾರತ ದೇಶಾದ್ಯಂತ ನಡೆದ
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 220213

ಕೊಲೆಯಾದ ದಲಿತರ ಸಂಖ್ಯೆ 3908

ಅತ್ಯಾಚಾರಕ್ಕೊಳಗಾದ ದಲಿತ ಮಹಿಳೆಯರ ಸಂಖ್ಯೆ 10131

ಅಪಹರಣಕ್ಕೊಳಗಾದ ದಲಿತ ಮಹಿಳೆಯರ ಸಂಖ್ಯೆ 3512

ಇವಿಷ್ಟು ದಾಖಲಾಗಿರುವ ಪ್ರಕರಣಗಳ ಸಂಖ್ಯೆ. ಇನ್ನು ದಾಖಲಾಗದೆ ಇರುವ ಪ್ರಕರಣಗಳದೆಷ್ಟೋ.....
ಇದನ್ನೆಲ್ಲ ಇಲ್ಲಿ ಹೇಳುವಾಗ ರಕ್ತ ಕುದಿಯುತ್ತದೆ, ಕಣ್ಣು ಮಂಜಾಗುತ್ತದೆ. ಕೇವಲ ಒಂದು ದನದ ವಿಚಾರ ಹಿಡಿದುಕೊಂಡು ದೇಶವ್ಯಾಪಿ ಹೋರಾಟ ಆಂಧೋಲನಗಳಿಗೆ ಕರೆ ನೀಡುವ RSS VHP ರಾಮಸೇನೆ ಶಿವಸೇನೆ ಬಜರಂಗಿಗಳ ಯಾವ ಕಣ್ಣಿಗೂ ದಲಿತರ ಮೇಲಿನ ಈ ದೌರ್ಜನ್ಯ ಪ್ರಕರಣಗಳ ಅಂಕಿಅಂಶಗಳು ಕಂಡಿಲ್ಲ. ಯಾವ ಸೂಲಿಬೆಲೆ ಪ್ರತಾಪಸಿಂಹ ಮುತಾಲಿಕ್ಗಳೂ ಈ ಘಟನೆಗಳಿಗೆ ಸರ್ಕಾರದ ದಲಿತ ವಿರೋಧಿ ನೀತಿಗಳೇ ಕಾರಣವೆಂದು ಭಾಷಣವಿಕ್ಕಲಿಲ್ಲ. ಇದ್ಯಾವುದಕ್ಕೂ ಅವರುಗಳ ಹೊಟ್ಟೆ ಉರಿಯಲಿಲ್ಲ. ನರನಾಡಿಗಳು ಕಂಪಿಸಲಿಲ್ಲ. ಈ ಘಟನೆಗಳನ್ನು ಹತ್ತಿಕ್ಕಲಾರದ ಸರ್ಕಾರಕ್ಕೆ ಷಂಡತ್ವ ಆವರಿಸಿದೆ ಎಂದು ಕೂಗಿ ಕೂಗಿ ಹೇಳಲಿಲ್ಲ.
ಇದ್ಯಾವುದೂ ನಮ್ಮ ದೇಶದ ಸಂಸ್ಕೃತಿ, ಗೌರವ, ಘನತೆಗಳಿಗೆ ದಕ್ಕೆ ತರುವ ವಿಚಾರಗಳು ಅಂತ ಅವರ್ಯಾರಿಗು ಅನ್ನಿಸಲೇ ಇಲ್ಲ.
ಕಾಶ್ಮೀರಿ ಪಂಡಿತರ ಜೀವಕ್ಕಿರುವ ಬೆಲೆ ದಲಿತರ ಜೀವಕ್ಕಿಲ್ಲ ಎಂಬ ಇವರುಗಳ ಮನುವಾಧಿ ಬುದ್ಧಿ ಯಾವತ್ತಿಗೋ ಪ್ರೂವ್ ಆಗಿದೆ.
ಒಂದು ದನದ ಮೇಲಿರುವ ಅಕ್ಕರೆ ಒಬ್ಬ ದಲಿತನ ಮೇಲಿಡಲಾಗದ ಇವರ ಷಡ್ಯಂತ್ರಗಳು ಅದೆಂದೋ ಜಗಜ್ಜಾಹೀರಾಗಿದೆ.
ಆದರೆ ಈ ದಲಿತರ ದುರದೃಷ್ಟ ಏನೆಂದರೆ. ಹಿಂದುಪರ ಸಂಘಟನೆಗಳ ಈ ಪಕ್ಷಪಾತಿ ದೋರಣೆಯ ಅರಿವಿಲ್ಲದ ಶೂದ್ರರು, ಪರಿಶಿಷ್ಟ ಜಾತಿ, ಪಂಗಡದ ಯುವಕರು ಈಗಲೂ ಇವರ ಸಂಘಟನೆಗಳ ಕಾರ್ಯಕರ್ತರಾಗಿ ಇವರ ಆಙ್ಞಾದಾರಕರಾಗಿ ಅವರ ಹಿಂದೆ ಹೋಗುತ್ತಿರುವುದು. ಇವರೆಲ್ಲರಿಗೂ ಈ ಸತ್ಯಗಳು ಅರಿವಾಗಿ, ಎಚ್ಚೆತ್ತು, ಆ ಸಂಘ ಪರಿವಾರಗಳಿಂದ ಹೊರಬಂದ ದಿನ ಅಲ್ಲಿ ಹೆಣ ಹೊರಲೂ ನಾಲ್ಕು ಜನ ಇರಲ್ಲ. ದಲಿತ ಸಮುದಾಯದ ಯುವಕರು ಇನ್ನಾದರೂ ಈ ನಿಟ್ಟಿನಲ್ಲಿ ಯೋಚಿಸಲಿ. ತಮ್ಮ ಸಮುದಾಯದ ಮಾನ ಪ್ರಾಣಗಳನ್ನು ಉಳಿಸಿಕೊಳ್ಳಲು ಮುಂದಾಗಲಿ.
ಜೈ ಭೀಮ್.

No comments:

Post a Comment