BHEEMA VIJAYA KARKAN25113/13/7/2015-TC HASSAN

ಗ್ರಾಮೀಣ ಪ್ರದೇಶಕ್ಕೆ ಸವಲತ್ತು ತಲುಪುವುದರಲ್ಲಿ ವಿಳಂಬ ಹೆಚ್.ಎಸ್. ಪ್ರಕಾಶ್ ಆತಂಕ


ಹಾಸನ: ಗ್ರಾಮೀಣ ಪ್ರದೇಶಕ್ಕೆ ಸವಲತ್ತು ತಲುಪುವುದರಲ್ಲಿ ವಿಳಂಬವಾಗುತ್ತಿದೆ ಎಂದು ಕ್ಷೇತ್ರದ ಶಾಸಕ ಹೆಚ್.ಎಸ್. ಪ್ರಕಾಶ್ ಆತಂಕವ್ಯಕ್ತಪಡಿಸಿದ್ದಾರೆ.
       ನಗರದ ಸಿಲ್ವರ್ ಜ್ಯೂಬ್ಲಿ ಬಳಿ ಇರುವ ತೋಟಗಾರಿಕೆ ಇಲಾಖೆ ಆವರಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ರೈತರಿಗೆ ಇಲಾಖೆಯ ವಿವಿಧ ಯೋಜನೆಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,  ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ರೈತರಿಗೆ ಕಳೆದ 2014ನೇ ಸಾಲಿನಲ್ಲಿ ಕೊಳವೆ ಬಾವಿ ಕೊರೆಯಲಾಗಿದ್ದರೂ ಇದುವರೆಗೂ ಸಂಪರ್ಕದ ವ್ಯವಸ್ಥೆ ಮಾಡಿಲ್ಲ. ಸರ್ಕಾರದ ವಿವಿಧ ಯೋಜನೆಗಳು ಗ್ರಾಮೀಣ ಮಟ್ಟಕ್ಕೆ ತಲುಪುವಲ್ಲಿ ಬಹಳಷ್ಟು ವಿಳಂಬವಾಗುತ್ತಿದೆ. ಅನೇಕರಿಗೆ ಯೋಜನೆ ಬಗ್ಗೆ ಅರಿವೆ ಇರುವುದಿಲ್ಲ. ಅದಕ್ಕಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅಮದಿನ ವರ್ಷದ ಯೋಜನೆ ಬಗ್ಗೆ ಸಮಗ್ರ ಮಾಹಿತಿಯನ್ನು ಫಲಕದ ಹಾಕುವುದರ ಮೂಲಕ ತಿಳಿಸಬೇಕು. ಇಂತಹ ಆದೇಶವನ್ನು ತೋಟಗಾರಿಕೆ ಇಲಾಖೆ ಮಾಡಲು ಸಲಹೆ ನೀಡಿದರು.
        ಸರ್ಕಾರ ನೀಡುವ ಸೌಲಭ್ಯವನ್ನು ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಎಷ್ಟು ಸರಿಯಾಗಿದೆ. ಗ್ರಾಮೀಣ ಪ್ರದೇಶದ ರೈತರಿಗೆ ಕಷ್ಟಕರವಾಗಬಹುದು. ಶಾಸಕರು ಕೂಡ ಲ್ಯಾಪ್‍ಟಾಪ್ ಬಳಕೆ ಮಾಡಲು ನೀಡಿದ್ದರು. ಆದರೇ ಹೀಗ ಕಲಿಯುವುದು ಕಷ್ಟ. ಮಕ್ಕಳ ಉಪಾಯೋಗಕ್ಕೆ ಸರಿಯಾಗುತ್ತದೆ. ಅಂತಹ ಕೆಲಸವನ್ನು ಗ್ರಾಮೀಣ ಮಟ್ಟದಲ್ಲಿ ಯೋಜನೆಯಲ್ಲಿ ಅರ್ಜಿ ಹಾಕುವುದಕ್ಕೆ ನೀಡಿದರೇ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.
ಜಾನಕಿ :
       ಅಪರ ಜಿಲ್ಲಾಧಿಕಾರಿ ಜಾನಕಿ ಮಾತನಾಡಿ, ರೈತರು ಹಾಗು ತೋಟಗಾರಿಕೆ ಇಲಾಖೆ ನಡುವೆ ಸಮನ್ವಯತೆ ಇರಬೇಕು. ಸರ್ಕಾರ ನೀಡುವ ಯೋಜನೆಯನ್ನು ಸಮಪರ್ಕವಾಗಿ ಬಳಕೆಯಾಗಲಿ ಅಧಿಕಾರಿಗಳಿಂದ ಮಾಹಿತಿ ಪಡೆಯುವಂತೆ ಕಿವಿಮಾತು ಹೇಳಿದರು. ಅಧಿಕಾರಿಗಳು ಕೂಡ ಇಂತಹ ಕಾರ್ಯಕ್ರಮವನ್ನು ಗ್ರಾಮೀಣ ಮಟ್ಟದಲ್ಲಿ ಆಯೋಜಿಸಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು. ತೋಟಗಾರಿಕೆ  ಇಲಾಖೆ ಹಲವಾರು ರೀತಿಯಲ್ಲಿ ಸಮಗ್ರ ತೋಟಗಾರಿಕೆ ಪದ್ಧತಿಯನ್ನು ಪರಿಚಯಿಸುತ್ತಿದ್ದು, ಅದರ ಸಮದುಪಯೋಗವನ್ನು ಎಲ್ಲಾರು ಪಡೆದುಕೊಳ್ಳುವಂತೆ ಕರೆ ನೀಡಲಾಯಿತು.
ಸುಮ:
       ತೋಟಗರಿಕೆ ಇಲಾಖೆ ಉಪನಿರ್ದೇಶಕಿ ಸುಮ ಮಾತನಾಡಿ, ತೋಟಗಾರಿಕೆ ಬೆಳೆಗಳಲ್ಲಿ ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳಲು ಪ್ರಧಾನ ಮಂತ್ರಿ ಕೃಷಿ ಸಂಚಾಯಿ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನೀರಿನ ಸದ್ಬಳಿಕೆ ಹಾಗೂ ಉಳಿತಾಯ ತಿಳಿಸಲಾಗಿದೆ. ಬೆಳೆಯ ಇಳುವರಿ ಶೇಕಡ 90 ರಂತೆ ಹಾಗೂ ಹೆಕ್ಟೇರ್ ಪ್ರದೇಶಕ್ಕೆ ನಿಯಮಾನುಸಾರ ಶೇಕಡ 60, ಶೇಕಡ 45 ಹಾಗೂ ಶೇಕಡ 35 ರಂತೆ ಗರಿಷ್ಟ ಮಿತಿ ಒಳಗೆ ಸಹಾಯಧನ ನೀಡಲು ಅವಕಾಶವಿದೆ ಎಂದರು. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ರೈತರಿಗೆ ತೋಟಗಾರಿಕೆ ಇಲಾಖೆವತಿಯಿಂದ ಪ್ರತ್ಯೇಕ ಅನುಧಾನ ಮೀಸಲಿಡಲಾಗಿದೆ. ಆಸಕ್ತ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅರ್ಹ ರೈತ ಫಲಾನುಭವಿಗಳು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
       ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುರುಷೋತ್ತಮ್, ಕ.ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕ ಎಂ. ಸೋಮಶೇಖರ್, ಸಮತಾ ಸೈನಿಕದಳದ ಜಿಲ್ಲಾಧ್ಯಕ್ಷ ಆರ್.ಪಿ.ಐ. ಸತೀಶ್, ಅಂಬೂಗ ಮಲ್ಲೇಶ್, ತೋಟಗಾರಿಕೆ ಇಲಾಖೆ ಅಧಿಕಾರಿ ಸಂಜಯ್, ಅಂಬೇಡ್ಕರ್ ನಿಗಮದ ಹಿರಿಯ ಸಹಾಯಕ ನಿರ್ದೇಶಕ ಜವರಪ್ಪ ಇತರರು ಪಾಲ್ಗೊಂಡಿದ್ದರು.

No comments:

Post a Comment