ಹಾಸನ: ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ಗ್ರಾಮೀಣ ಮಟ್ಟದ ನಿರುದ್ಯೋಗಿಗಳಿಗೆ ತಾಲ್ಲೂಕ್ ಪಂಚಾಯಿತಿ ಸಭಾಂಗಣದಲ್ಲಿ ಸಂದರ್ಶನ ಮಾಡಲಾಯಿತು.
ತಮ್ಮ ಸ್ವಂತ ನಾನಾ ಉದ್ಯೋಗಕ್ಕಾಗಿ ಈ ಹಿಂದೆ ಅರ್ಜಿ ಹಾಕಿದ ನಿರುದ್ಯೋಗಿಗಳು ಶನಿವಾರ ಪರಿಶೀಲನೆಗಾಗಿ ಕರೆಯಲಾಗಿತ್ತು. ಹಾಸನ ತಾಲ್ಲೂಕಿನ ವಿವಿಧ ಗ್ರಾಮೀಣ ಭಾಗದಿಂದ ಉದ್ಯೋಗಕಾಂಕ್ಷಿಗಳು ದಾಖಲಾತಿಯೊಂದಿಗೆ ಸಂದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳು ಅವರಿಂದ ವಿವರ ಪಡೆದರು. ಆಯ್ಕೆಗೊಂಡವರಿಗೆ ಸ್ವಂತ ಉದ್ಯೋಗ ಮಾಡಲು ಬ್ಯಾಂಕಿನಿಂದ ಸಾಲ ಪಡೆಯುವ ಅವಕಾಶ ಸಿಗುತ್ತದೆ.

No comments:
Post a Comment