BHEEMA VIJAYA KARKAN25113/13/7/2015-TC HASSAN

ಕೇಂದ್ರ ನೀಡಿದ ಯೊಜನೆಗೆ ಸಿದ್ದರಾಮಯ್ಯ ಹೆಸರು ಬಳಕೆ:ಕೇಂದ್ರ ಸಚಿವರಾದ ಡಾ. ಹರ್ಷವರ್ಧನ್ ಆರೋಪ




      ಹಾಸನ: ಮುಂದಿನ ಬಜೆಟ್ ರೂಪಿಸಲು ಜನರ ನಿರೀಕ್ಷೆ ತಿಳಿಯಲು ಅಭಿಪ್ರಾಯ ಸಂಗ್ರಹಿಸಲಾಯಿತು. ಕೇಂದ್ರ ಸರ್ಕಾರ ನೀಡಿದ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೆ ನೀಡಿದ ಕೊಡುಗೆಯಾಗಿ ತಮ್ಮ ಹೆಸರು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಆರೋಪಿಸಿದ್ದಾರೆ.
       
     ನಗರದ ಎಂ.ಜಿ. ರಸ್ತೆ, ಗುರುರಾಜ ಕಲ್ಯಾಣ ಮಂಟಪದಲ್ಲಿ ಸುಶಾಸನದ ಹಾದಿಯಲ್ಲಿ ಬಿಜೆಪಿ, ಅಸಹಕಾರದ ದಾರಿಯಲ್ಲಿ ಕಾಂಗ್ರೆಸ್ ಒಂದು ನೋಟ ಎಂಬ ಹೆಸರಿನಲ್ಲಿ ಎಲ್ಲಾ ಜನರ ಅಭಿಪ್ರಾಯ ಪಡೆದು ಮುಂದಿನ ಬಜೆಟ್‍ನಲ್ಲಿ ರೂಪಿಸಲು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಅಲ್ಪ ಅವಧಿಯಲ್ಲಿಯೇ ಜನಧನ ಯೋಜನೆ, ಭದ್ರ ಯೋಜನೆ ಸೇರಿದಂತೆ ಹಲವಾರು ಯೋಜನೆಯನ್ನು ಜಾರಿಗೆ ತಂದಿದೆ. ಅದು ಎಷ್ಟರ ಮಟ್ಟಿಗೆ ಗ್ರಾಮೀಣ ಮಟ್ಟದಲ್ಲಿ ಜನರಿಗೆ ತಲುಪಿದೆ ಹಾಗೂ ಅವಶ್ಯಕವಾದ ಯೋಜನೆ ರೂಪಿಸಲು ಸಲಹೆಯನ್ನು ಸ್ವೀಕರಿಸಿ ಅವರ ನಿರೀಕ್ಷೆಯನ್ನು ತಿಳಿಯುವ ನಿಟ್ಟಿನಲ್ಲಿ ಮೈಸೂರು ವಿಭಾಗ ಮಟ್ಟದ ಜವಬ್ಧಾರಿಯನ್ನು ನಮಗೆ ವಹಿಸಿದ್ದಾರೆ ಎಂದರು. ಕ್ಯಾಬಿನೆಟ್‍ನಲ್ಲಿ ನಡೆಯುವ ಸಭೆಯಲ್ಲಿ ಹೊಸ ಹೊಸ ಯೋಜನೆ ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು. ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರವು ಗ್ರಾಮೀಣ ಮಟ್ಟಕ್ಕೆ ಎಷ್ಟರ ಮಟ್ಟಿಗೆ ತಲುಪಿದೆ ಎಂಬುದನ್ನು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜವಬ್ಧಾರಿ ಆಗಿದೆ ಎಂದು ಹೇಳಿದರು.

ಪ್ರತಾಪ್ ಸಿಂಹ:
       ಸಂಸದರು ಹಾಗೂ ಬಿಜೆಪಿ ರಾಷ್ಟ್ರೀಯ ಮುಖಂಡ ಪ್ರತಾಪ್ ಸಿಂಹ ಮಾತನಾಡಿ, ನರೇಂದ್ರ ಮೋದಿ ನೇತ್ರತ್ವದ ಬಿಜೆಪಿ ಸರ್ಕಾರ ಬಂದು 18 ತಿಂಗಳುಗಳಾಗಿದೆ. ಈ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದೆ. ಈಗಾಗಲೇ ಜನಜೀವನದಲ್ಲಿ ಬದಲಾವಣೆಗಳು ಕೂಡ ಆಗಿದೆ ಎಂದರು. ಆದರೇ ರೈತರ ಸಂಕಷ್ಟ ಹಾಗೂ ಜನರ ಮನಸ್ಸಿನ ನಿರೀಕ್ಷೆ ತಿಳಿದು ಆ ಅನುಗುಣವಾಗಿ ಬಜೆಟ್ ರೂಪಿಸಲು ದೇಶದ ಎಲ್ಲಾ ಜಿಲ್ಲೆಗಳಲ್ಲೂ ಇಂತಹ ಕಾರ್ಯಕ್ರಮ ರೂಪಿಸಿ ಅಭಿಪ್ರಾಯ ಪಡೆಯಲಾಗುತ್ತಿದೆ. ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುವಾಗ ನಾನಾ ದೇಶದ ಪ್ರಧಾನಿಗಳಿಗೆ ಆಹ್ವಾನ ನೀಡಿದ್ದರು. ಮೊದಲ ಹಂತದಲ್ಲಿಯೇ ದೇಶಕ್ಕೆ ದೊಡ್ಡ ಸಂದೇಶ ನೀಡಿದ ಮೊದಲ ಪ್ರಧಾನಿಯಾಗಿದ್ದಾರೆ. ಇತರೆ ದೇಶಗಳಿಗೆ ಮೋದಿ ಅವರು ಸುಮ್ಮನೆ ಕಾಲಹರಣ ಮಾಡಲು ತಿರುಗಿಲ್ಲ. ಭಾರತದ ಗಡಿ ಸಂರಕ್ಷಣೆ ಮಾಡುವ ಕೆಲಸ ನಿಷ್ಟೆಯಿಂದ ಮಾಡಿದ್ದಾರೆ ಎಂದರು. ದೇಶವನ್ನು ಅಭಿವೃದ್ಧಿಯತ್ತ ಕೊಂಡೂಯ್ಯಲು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಕೈಹಾಕಿದ್ದಾರೆ. ವಾಜಪೇಯಿ ಕನಸ್ಸನ್ನು ವಿಸ್ತಾರ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಪಕ್ಷದ ಸಾಧನೆ ಹೇಳುವುದಕ್ಕಿಂತ ನಿಮ್ಮೇಲ್ಲಾರ ನಿರೀಕ್ಷೆ ಪಡೆಯುವುದು ಉದ್ದೇಶವಾಗಿದೆ ಎಂದರು.
   
       ಕೇಂದ್ರವು 1 ಕೆಜಿ ಅಕ್ಕಿಯನ್ನು 32 ರೂಗಳಿಗೆ ಖರೀದಿ ಮಾಡಿ, ರಾಜ್ಯ ಸರ್ಕಾರಕ್ಕೆ 3ರೂಗಳಿಗೆ ನೀಡುತ್ತದೆ. ಅದೇ ರೀತಿ ಸಕ್ಕರೆ, ಗೋದಿ ಸೇರಿದಂತೆ ನಾನಾ ದವಸ ದಾನ್ಯವನ್ನು ಕಡಿಮೆ ಬೆಲೆಗೆ ನೀಡಿದ್ದನ್ನು ರಾಜ್ಯ ಸರ್ಕಾರ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಹಾಕಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
 
              2022ಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಸಂಭ್ರಮದಲ್ಲಿ ನರೇಂದ್ರ ಮೋದಿಯವರು ಗ್ರಾಮೀಣ ಮಟ್ಟದಲ್ಲಿ ದಿನದ 24 ಗಂಟೆಯು ವಿದ್ಯುತ್ ಕೊಡುವ ಉದ್ದೇಶ ಹೊಂದಿದ್ದಾರೆ ಎಂದರು. ವಿದ್ಯುತ್ ಉಳಿತಾಯಕ್ಕಾಗಿ ಮೋದಿ ಅವರು ಎಲ್‍ಇಡಿ ಬಲ್ಪ್ ಜಾರಿಗೆ ತಂದರು ಇದರಿಂದ ಮಾಮುಲಿ ಬಲ್ಪ್‍ಗಿಂತ ನೂರಕ್ಕೆ 50 ರಷ್ಟು ವಿದ್ಯುತ್ ಉಳಿತಾಯವಾಗುತ್ತಿದೆ. ಆದರೇ ಅದನ್ನು ರಾಜ್ಯದಲ್ಲಿ ಮುಖ್ಯಮಂತ್ರಿಯವರು ಹೊಸಬೆಳಕು ಎಂಬ ಹೆಸರಿನಲ್ಲಿ ನೀಡುವ ಮೂಲಕ ಜನತೆಯಲ್ಲಿ ಹೆಸರು ಮಾಡಲು ಹೊರಟಿದೆ ಎಂದು ಕಿಡಿಕಾರಿದರು. ಈಗಾಗಲೇ ಪ್ರತಿ ಕುಟುಂಬಕ್ಕೂ 5 ಬಲ್ಪ್ ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತರುವ ಎಲ್ಲಾ ಯೋಜನೆಯನ್ನು ರಾಜ್ಯದಲ್ಲಿ ಸಿಎಂ ಅವರು ಹೈಜಾಕ್ ಮಾಡುವ ಕೆಲಸಕ್ಕೆ ಹೊರಟ್ಟಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
   
                ಮೋದ ಅವರು ಪ್ರಧಾನಿ ಆದ ಮೇಲೆ ಅಟಲ್ ಪೆನ್‍ಷನ್ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ, ಜೀವನಜ್ಯೋತಿ ವಿಮಾ ಯೋಜನೆ ಜಾರಿಗೆ ತಂದಿದೆ. ಕಡಿಮೆ ಹಣದಲ್ಲಿ ಜೀವ ರಕ್ಷಣೆ ಜೊತೆಗೆ ಆತನ ಕುಟುಂಬಕ್ಕೆ ಹಣ ನೀಡುವಂತೆ ಉತ್ತಮ ಕೆಲಸ ಮಾಡುತ್ತಿದೆ ಎಂದರು. ಸಾಮಾಜಿಕ ಭದ್ರತೆಯನ್ನು ಮೋದಿ ಮಾಡುವ ಮೂಲಕ ಕೂಲಿ ಕಾರ್ಮಿಕನಿಗೂ ಭದ್ರತೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಎಲ್ಲಾ ಯೋಜನೆಯನ್ನು ಪ್ರತಿ ಮನೆ ಮನೆಗೂ ತಿಳಿಸುವ ಕೆಲಸ ಮಾಡುವಂತೆ ಕರೆ ನೀಡಿದರು.
     
            ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರಿಂದ ಹೊಸ ಯೋಜನೆ ರೂಪಿಸುವ ಬಗ್ಗೆ ಅಭಿಪ್ರಾಯವನ್ನು ಕೇಂದ್ರ ಸಚಿವರಾದ ಡಾ. ಹರ್ಷವರ್ಧನ್ ಪಡೆದರು. ಭಾಷೆ ಸಮಸ್ಯೆಯಿಂದ ಪ್ರತಾಪ್ ಸಿಂಹ ಅವರು ವಿವರ ಪಡೆದು ವಿವವರಿಸಿದರು.
     
              ಇದೆ ವೇಳೆ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ರೇಣುಕುಮಾರ್, ಮೈಸೂರು ವಿಭಾಗದ ಸುರೇಶ್ ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನವೀಲೆಅಣ್ಣಪ್ಪ, ಪಕ್ಷದ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಇತರರು ಭಾಗವಹಿಸಿದ್ದರು. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಸ್ವಾಗತಿಸಿದರು. ಹರ್ಷ ಮತ್ತು ಸಂಗಡಿಗರು ವಂದೇಮಾತರಂ ಹಾಡಿದರು.

No comments:

Post a Comment