ಹಾಸನ.
ಚರ್ಚಾವೇದಿಕೆ, ಹಾಸನ ಇದರ 3ನೇ ತಿಂಗಳ ವಿಷಯ
ಪ್ರಜಾಪ್ರಭುತ್ವದ ನೆರಳಲ್ಲಿ “ಸಹಿಷ್ಣುತೆ-ಅಸಹಿಷ್ಣುತೆ” ಕುರಿತು ನಡೆಸಿದ ಚರ್ಚೆಗೆ ಪೀಠಿಕೆಯಾಗಿ ವಿಚಾರವಾದಿ ಮತ್ತು ವಿಜ್ಞಾನ ಲೇಖಕ ಕೆ.ಎಸ್.ರವಿಕುಮಾರ್ ಮಾತನಾಡಿದರು. ಅದರ ಸಂಕ್ಷಿಪ್ತ ವರದಿ
ಸಹಿಷ್ಣುತೆ-ಅಸಹಿಷ್ಣುತೆಗಳ ಚರ್ಚೆಯನ್ನು ನಾಲ್ಕುಭಾಗಗಳಲ್ಲಿ ಚರ್ಚಿಸಿ ಸ್ಪಷ್ಠತೆ ಪಡೆದುಕೊಳ್ಳಬೇಕಿದೆ.
ಒಂದನೆಯದಾಗಿ ನಮ್ಮೊಳಗಿರುವ ಗೊಂದಲಗಳೊಡನೆ ಸಂವಾದಿಸುತ್ತಾ, ಪ್ರಶ್ನಿಸುತ್ತಾ ಒಂದು ತಿಳುವಳಿಕೆಗೆ ಬರಬೇಕು.
ಎರಡನೆಯದಾಗಿ ಪ್ರಸ್ತುತ ಸಂದರ್ಭದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ನಡಾವಳಿಗಳ ಪ್ರಶ್ನೆಗಳ ಬೆನ್ನು ಹತ್ತುತ್ತಾ ಹುಡುಕಾಟ ನಡೆಸಿ ಸ್ಪಷ್ಠಪಡಿಸೊಕೊಳ್ಳಬೇಕು.
ಮೂರನೆಯದಾಗಿ ಕೋಮುವಾದದ ಗುತ್ತಿಗೆÀದಾರರ ಕುತರ್ಕಗಳು ಮತ್ತು ವಿತಂಡವಾದಗಳನ್ನು ವಿಶ್ಲೇಷಿಸುತ್ತಾ ಒಂದು ತಿಳುವಳಿಕೆಗೆ ಬರಬೇಕು ಹಾಗೂ ನಾಲ್ಕನೆಯದಾಗಿ ಈ ಮೂರು ಅಂಶಗಳನ್ನು ಕೂಲಂಕುಶವಾಗಿ ಅಧ್ಯಯನ ಮತ್ತು ಪರೀಶೀಲನೆ ನಡೆಸಿದ ಮೇಲೆ ಸಹಿಷ್ಣುತೆ
-ಅಸಹಿಷ್ಣುತೆಗಳ ನಡುವೆ ನಾಗರೀಕ ಇತಿಹಾಸದುದ್ದಕ್ಕೂ ನಡೆದ ಹಾದಿಯನ್ನು ಇತಿಹಾಸ ಪುಟದಿಂದ ಹೆಕ್ಕಿ ಪ್ರಸ್ತುತ ಪ್ರಜಾಪ್ರಭುತ್ವದ ಸಂದರ್ಬದಲ್ಲಿ ಸರ್ವಜನರ ಕಲ್ಯಾಣದ ಅಂಶಗಳು ಸಹಿಷ್ಣುವಾಗಬೇಕು ಅದಕ್ಕೆ ಕುತ್ತುತರುವ ಸಿದ್ದಾಂತ ಮತ್ತು ಚಟುವಟಿಕಗಳು ಅಸಹಷ್ಣುವಾಗಬೇಕು ಎನ್ನು ಅಂಶಗಳನ್ನು ಪಟ್ಟಿಮಾಡುತ್ತಾ ಸಂವಾದಿಸುತ್ತಾ ಹೋಗಬೇಕು ಎಂದು ವಿಚಾರವಾದಿ ಮತ್ತು ವಿಜ್ಞಾನ ಲೇಖಕ ಕೆ.ಎಸ್.ರವಿಕುಮಾರ್ ಮಾತನಾಡಿದರು.
ಅವರು ಇತ್ತೀಚೆಗೆ ನಗರದ ಶ್ರಮದಲಿ ಚರ್ಚಾವೇದಿಕೆ, ಹಾಸನ ಹಮ್ಮಿಕೊಂಡಿದ್ದ 3ನೇ ತಿಂಗಳ ವಿಷಯ ಪ್ರಜಾಪ್ರಭುತ್ವದ ನೆರಳಲ್ಲಿ “ಸಹಿಷ್ಣುತೆ-ಅಸಹಿಷ್ಣುತೆ” ಕುರಿತು ನಡೆಸಿದ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡುತ್ತಿದ್ದರು.
ಕರ್ಮಫಲ, ಹಣೆಬರಹ, ಗ್ರಹಚಾರ, ಸ್ಪøಷ್ಯ-ಅಸ್ಪøಷ್ಯ, ಉಚ್ಛ-ನೀಚ, ಬಡವ-ಬಲ್ಲಿದ ಎಂದೆಲ್ಲ ನಿತ್ಯದ ಬದುಕನ್ನು ಗ್ರಹಿಸುವ ಸಮಾಜದಲ್ಲಿ ಸಹಿಷ್ಣುತೆ-ಅಸಹಿಷ್ಣುತೆಗಳ ಕುರಿತ ಚರ್ಚೆ ಅಷ್ಟೇನು ಸರಳವಲ್ಲ ಎಂದ ಅವರು ಸಧ್ಯದ ಭಾರತದಲ್ಲಿ ಪ್ರಭುತ್ವವೇ ಅಮಾನವೀಯ ದಾಳಿಗಳಿಗೆ ಪ್ರೇರಕ ಶಕ್ತಿಯಾಗಿರುವುದು ಮಾನವೀಯ ಕಳಕಳಿಗೆ ಸ್ಪಂದಿಸುವ ಮನಸುಗಳಿಗೆ ಅಪಾರ ಆತಂಕಕ್ಕೆ ಕೆಡವಿದೆ ಹಾಗೂ ಸವಾಲಾದಂತಹ ಸನ್ನಿವೇಶ ರೂಪುಗೊಳ್ಳುತ್ತಿವೆ ಎಂದು ವಿವರಿಸಿದರು.
ಸಹಿಷ್ಣುತೆ –ಅಸಹಿಷ್ಣುತೆ ಎನ್ನುವ ವಾಗ್ವಾದ ಭಾರತದ ಸಂದರ್ಬದಲ್ಲಿ ಶುದ್ಧ ಜಾತ್ಯಾತೀತ ಮನಸುಗಳು ಮತ್ತು ಕೋಮುವಾದಿಕರಣಕ್ಕೆ ಒಳಗಾದ ಮನಸುಗಳ ನಡುವೆ ನಡೆಯುತ್ತಿದೆ, ಪಾಶ್ಚಿಮಾತ್ಯರ ಸಂದರ್ಬದಲ್ಲಿ ಸಹಜೀವನದಲ್ಲಿ ವಿಶ್ವಾಸವಿಟ್ಟ ಮನಸುಗಳು ಮತ್ತು ಫ್ಯಾಸಿಸ್ಟ್ ಮನಸುಗಳ ನಡುವೆ ನಡೆಯುತ್ತಿದೆ.
ಈ ಎರಡೂ ಮನಸ್ಸುಗಳ ನಡುವೆ ಹುಟ್ಟಿದ ಈ ಚರ್ಚೆ ಸ್ವಾತಂತ್ರಪೂರ್ವದಲ್ಲೇ ಭಾರತಕ್ಕೆ ಪ್ರವೇಶೀಸಿತು ಇಂದು ಆ ಫ್ಯಾಸಿಸ್ಟ್ ಶಕ್ತಿಗಳು ಭಾರತದ ಅಧಿಕಾರ ಚುಕ್ಕಾಣಿ ಹಿಡಿದಿವೆ ಅವುಗಳ ಪೂರ್ವ ಸಿದ್ಧಾಂತ ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಗೆ ಅಸಹಿಷ್ಣುವಾಗಿವೆ ಅವುಗಳೆಂದರೆ ಜಾತ್ಯಾತೀತ ಎಂಬ ಪರಿಕಲ್ಪನೆ, ಪ್ರಜಾಪ್ರಭುತ್ವ ಭಾರತದ ನೆಲದ್ದಲ್ಲ ಅದು ವಿದೇಶಿ, ವೇದಗಳು ಅಪೌರುಷೇಯ, ಭಾರತ ಹಿಂದೂ ದೇಶವಾಗಬೇಕು, ಪರಕೀಯ ವಾದಗಳನ್ನು ಸ್ವೀಕರಿಸುವುದು ಅಪರಾಧ ಮತ್ತು ಅರ್ಥಹೀನ ಎನ್ನುವ ಚಿಂತನೆಯನ್ನು ಬಿತ್ತುತ್ತಿವೆ ಎಂದು ವಿವರಿಸಿದ ಅವರು ನಿಜ ಧರ್ಮನಿರಪೇಕ್ಷತೆ ಎಂಬ ಮನಸ್ಥಿತಿ ಜಾತ್ಯಾತೀತತೆಗೆ ದಾರಿ ಮಾಡಿಕೊಟ್ಟಿತು,
ಸಾಂಸ್ಥಿಕ ಧರ್ಮ ಪ್ರಭುತ್ವದೊಂದಿಗೆ ಅಧಿಕಾರದ ಒಂದೇ ಹಾಸಿಗೆಯನ್ನು ಹಂಚಿಕೊಂಡು ವ್ಯಕ್ತಿಗತ ಸ್ವಾತಂತ್ರ್ಯಗಳನ್ನು ತನ್ನಿಷ್ಟದಂತೆ ನಿರ್ದೆಶಿಸಹತ್ತಿದೆ ಅದನ್ನು ಜೀವಪರ ಮತ್ತು ಮಾನವಹಕ್ಕು ಪರ ಮನಸ್ಸುಗಳು ಪ್ರಶ್ನಿಸತೊಡಗುತ್ತವೆ ಅದು ಮತಾಂಧರಿಗೆ ಅಸಹನೀಯವಾಗಿ ಕಾಣಿಸಿ ಅವುಗಳ ದಮನ ಕಾರ್ಯನಡೆಸುತ್ತಿವೆ ಹಾಗಾಗಿ ಭಾರತದಲ್ಲಿ ಇಂದು ಈ ಬಿಗುವಿನ ವಾತಾವರಣ ನಿರ್ಮಾಣವಾಗಿರುವುದು ಎಂದರು.

ಭಾರತವೊಂದು ಜಗತ್ತಿನಲ್ಲೆ ಅಸಹಿಷ್ಣುದೇಶ ಎನ್ನುವುದು ಅತ್ಯಂತ ಸುಂದರವಾದ ಹಸಿ-ಹಸಿ ಸುಳ್ಳು ಚೋಳರು ಆಗ್ನೇಯ ಏಷ್ಯ ಮತ್ತು ಶ್ರೀಲಂಕಾದ ಮೇಲೆ ದಾಳಿಮಾಡಿ ಲೂಟಿ ಮಾಡಿದರು, ಅಶೋಕ ಅಫಗಾನಿಸ್ತಾನದ ಮೇಲೆ ದಾಳಿಮಾಡಿದ್ದಾನೆ, ಗುಪ್ತರು ಭಾರತದ ನೆಲದ ಹೊರಗೆಲ್ಲಾ ಸಾಮ್ರಾಜ್ಯ ಸ್ಥಾಪಿಸಿದ್ದರು,
ಉತ್ತರದ ರಾಜರು ದಕ್ಷಿಣದ ರಾಜರನ್ನು ಮೃಗಗಳಂತೆ ನೋಡಿಕೊಂಡಿದ್ದಾರೆ ನಮ್ಮ ಅಪೌರುಷೇಯ ಗ್ರಂಥಗಳೆಲ್ಲಾ ದಕ್ಷಿಣದವರು ಮತ್ತು ದ್ರಾವಿಡರನ್ನು ರಾಕ್ಷಸರು, ಕಳ್ಳರು, ನರಕವಾಸಿಗಳು ಎಂದೆಲ್ಲ ತಮ್ಮ ಅಸಹಿಷ್ಣುತೆಯನ್ನು ತೋಡಿಕೊಂಡಿದ್ದಾರೆ, ದಲಿತರು ಮತ್ತು ಮಹಿಳೆಯರನ್ನು ಪಶುಗಳಿಗಿಂತಲೂ ಕೀಳಾಗಿ ಈಗಲೂ ನೋಡಿಕೊಳ್ಳುತ್ತಿದ್ದಾರೆ ಎಂದು ಉದಾಹರಣೆ ಸಮೇತ ವಿವರಿಸಿದ ಅವರು ನಮ್ಮಲ್ಲಿ ಸಹಿಸುವಿಕೆಯಲ್ಲಿ ನಾಲ್ಕು ಬಗೆಗಳಿವೆ ಮಾನವತ್ವಕ್ಕಿಂತ ದೊಡ್ಡದಾವುದಿಲ್ಲ ಎಂದು
ಭಾವಿಸುವ ಮಾನವೀಯ ಸಹಷ್ಣುತೆ, ಅನ್ಯಾಯಗಳನ್ನು ನೋಡಿಕೊಂಡು ನಿಷ್ಕ್ರಿಯ ಮೌನಕ್ಕೆ ಜಾರಿಕೊಳ್ಳುವ ನಿರ್ಲಿಪ್ತ ಸಹಿಷ್ಣುತೆ, ನನ್ನಂತೆ ನೀನು ಇರಲೇ ಬೇಕು ಎಂದು ವಾದಿಸಿ ಅಧಿಕಾರ ಸ್ಥಾಪಿಸುವ ಷರತ್ತುಬದ್ಧ ಸಹಿಷ್ಣುತೆ ಮತ್ತು ಅನ್ಯಾಯದ ವಿರುದ್ಧ ಪುಟಿದೇಳಲು ಅಸಹಾಯಕವಾದಂತಹ ನಿಸ್ಸಾಹಾಯಕ ಸಹಿಷ್ಣುತೆ ಹಾಗಾಗಿ ನಿಸ್ಸಾಹಯಕ ಮನಸುಗಳಿಗೆ ಸಹಾಯಕವಾಗಿ ಜಾತ್ಯಾತೀತ ಮನಸುಗಳು ಪ್ರಜಾಪ್ರಭುತ್ವೀಯ ಮೌಲ್ಯಗಳಿಗೆ ಬದ್ಧವಾಗುವ ಸಹಿಷ್ಣುತೆ ಬೆಳೆಸುತ್ತಾ ಮಾನವೀಯವಾದಕ್ಕೆ, ಪ್ರಜಾತಂತ್ರಿಕವಾದಕ್ಕೆ ಮಾರಕವಾಗುವ ಚಿಂತನೆಗಳಿಗೆ ಅಸಹಿಷ್ಣುಗಳಾಗುತ್ತಾ ಭಾರತದ ಸಾರ್ವಬೌಮತ್ವವನ್ನು ಉಳಿಸಬೇಕಿದೆ ಎಂದರು.
ಚರ್ಚಾಗೋಷ್ಠಿಯಲ್ಲಿ ನಾಡಿನ ವಿಚಾರವಾದಿ ಜ.ಹೊ.ನಾ ವಿಶ್ವಮಾನವತಾ ವಾದವನ್ನು ಸಾರುವಂತಹ ಚಿಂತನೆಗಳಿಗೆ ವಿರುದ್ದದ ಚಿಂತನೆಗಳಿಗೆ ನಾವು ಅಸಹಿಷ್ಣುಗಳಾಗಬೇಕು ಎಂದರು, ಉಪನ್ಯಾಸಕಿ ಮತ್ತು ಚಿಂತಕಿ ಪ್ರಮೀಳ ದೀನ-ದಲಿತರಿಗೆ ಮನೆ ನೀಡದ, ಅವರಜೊತೆ ಮಾನವೀಯವಾಗಿ ವರ್ತಿಸದ ಮನಸುಗಳು ಈಗಿನ ಸಂದರ್ಬದಲ್ಲಿ ಹೆಚ್ಚುತ್ತಿವೆ ಇದು ಮಾನವಪರ ಸಹಿಷ್ಣುತೆಯನ್ನು ಹೆಚ್ಚೆಚ್ಚು ಅಸಹಿಷ್ಣುಗಳಾಗಿಸಿದೆ ಎಂದರು.
ಕಾರ್ಮಿಕ ಮುಖಂಡ ಧರ್ಮೆಶ್ ದೇಶದ ಆರ್ಥಿಕ ನೀತಿಗಳು ವಿದೇಶಿಗುಲಾಮಗಿರಿಗೆ ತಳುತ್ತಿರುವ ಯೋಜನೆಗಳನ್ನು ರೂಪಿಸಿಕೊಳ್ಳಲು ರಾಜಕೀಯ ಸರ್ವಾಧಿಕರಣಕ್ಕೆ ಮತೀಯ ಅಸಹಿಷ್ಣುತೆಯನ್ನು ದೇಶದಲ್ಲಿ ಪ್ರಸ್ತುತ ಪ್ರಭುತ್ವ ಬಿತ್ತುತ್ತಿದೆ ಇದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಉಪನ್ಯಾಸಕ ರೋಹಿತ್, ಸಾಹಿತಿ ಚಲಂಹಾಡ್ಲಹಳ್ಳಿ, ಸಮಾಜಸೇವಕ ಸುರೇಶ್ ಗುರೂಜಿ, ಸಮಾಜಸೇವಕಿ ವೇದಶ್ರಿರಾಜ್, ಮಾತನಾಡಿದರು. ರೈತಮುಖಂಡ ನವೀನ್‍ಕುಮಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಸಕಾರಿ ನೌಕರರ ಒಕ್ಕೂಟದ ಶಿವಣ್ಣ, ಯುವಜನ ಮುಖಂಡ ಪೃಥ್ವಿ ವಿದ್ಯಾರ್ಥಿ ಮುಖಂಡ, ಪ್ರದೀಪ್, ಟಿಪ್ಪು ಸಂಘರ್ಷ ಸಮಿತಿಯ ಮುಬಷಿರ್ ಅಹ್ಮದ್, ಅಂಗನಾವಾಡಿ ನಾಯಕಿ ಪುಷ್ಪ, ಮುಂತಾದವರು ಚರ್ಚೆಯಲ್ಲಿ ಭಾಗÀವಹಿಸಿದ್ದರು.
ವೇದಿಕೆ ಸಂಚಾಲಕ ಅಹಮದ್‍ಹಗರೆ ಪ್ರಾಸ್ತವಿಕವಾಗಿ ಮಾತನಾಡಿದರು.
No comments:
Post a Comment