ಹಾಸನ: ಸಾವಿರ ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದು, ಚುನಾವಣೆ ವೇಳೆ ಕೊಟ್ಟ ವಚನದಂತೆ ಈಗಾಗಲೇ ನೂರು ಬೇಡಿಕೆ ಈಡೇರಿಸಿದ್ದೇವೆ ಉಳಿದ ಬೇಡಿಕೆಯನ್ನು ಅವಧಿಯೊಳಗೆ ಎಲ್ಲಾ ಭರವಸೆಯನ್ನು ಈಡೇರಿಸುವುದಾಗಿ ಉದ್ಘಾಟನ ಭಾಷಣದಲ್ಲಿ ಹೇಳಿದರು.
ಗುರುವಾರ ನಗರದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಹಾಗೂ ವೈದ್ಯಕೀಯ ಮೆಡಿಕಲ್ ಕಾಲೇಜು ಮತ್ತು ಪೊಲೀಸ್ ತರಬೇತಿ ಶಾಲೆ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ಅಧಿಕಾರ ಬಂದು ಎರೆಡು ವರೆ ವರ್ಷಗಳು ಕಳೆದಿದೆ. ಇನ್ನು 2 ವರ್ಷ ಬಾಕಿ ಇದೆ. ಚುನಾವಣೇಯ ಸಂರ್ಭರ್ಧದಲ್ಲಿ ನೀಡಿದ್ದ 165 ಭರವಸೆಗಳಲ್ಲಿ ಈಗಗಲೇ 100ರನ್ನು ಈಡೇರಸಿಸಲಾಗಿದೆ. ಇನ್ನುಳಿದ ಅಧಿಕಾರ ಅವಧಿಯಲ್ಲು ಪೂರ್ಣ ಪ್ರಮಾಣದಲ್ಲಿ ಎಲ್ಲಾ ಭರವಸೆಗಳನ್ನಿ ಈಡೇರಿಸಲಾಗುವುದು ಎಂದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮಾತ್ರ ಅಭಿವೃದ್ದಿ ಸಾಧ್ಯ ಸಾಮಾಜಿಕ ನ್ಯಾಯಾದಿಂದ ವಂಚಿತರಾದರಿಗೆ ಆದ್ಯತೆ ಮೇಲೆ ಸಂವಿಧಾನ ಬದ್ದವಾಗಿ ನ್ಯಾಯಾ ಒದಗಿಸುವುದು ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯಾಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಈ ದಿನವು ಐತಿಹಾಸಿಕ ದಿನವಾಗಲಿದೆ. ಒಂದೇ ಕಾರ್ಯಕರ್ಮದಲ್ಲಿ ಸರಿ ಸುಮಾರು ಸಾವಿರ ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ್ದವೆ.
ರಾಜ್ಯದಲ್ಲಿ ಕಾವೇರಿ ಜಲಾಯನವಾದ ಕೃಷ್ಣ, ಗೋದಾವರಿ ಜಲಾಯನ ಪ್ರದೇಶದ ಎಲ್ಲಾ ನೀರಾವರಿ ಯೋಜನೆ ಮುಗಿಸುವ ಸಂಕಲ್ಪ ಹೊಂದಿದ್ದೇವೆ. ಹಿಂದೆ ಇದಕ್ಕೆ 50 ಸಾವಿರ ಕೋಟಿ ವೆಚ್ಚವಾಗುತ್ತಿತ್ತು. ಈಗ ಲೆಕ್ಕ ಹಾಕಿದರೇ 1 ಲಕ್ಷದ 20 ಸಾವಿರ ಕೋಟಿ ರೂ ವ್ಯಯವಾಗುತ್ತದೆ. ಇನ್ನು 2 ವರ್ಷದಲ್ಲಿ ಕಾವೇರಿ ವಿಭಾಗದಲ್ಲಿ ಏನೇನು ಕೆಲಸ ಉಳಿದಿದೆ, ಕುಡಿಯುವ ನೀರು, ಏತ ನೀರಾವರಿ ಸೇರಿದಂತೆ ಇತರೆ ಯೋಜನೆಯ ಉಳಿಕೆ ಕೆಲಸವನ್ನು ಪೂರೈಸುವುದಾಗಿ ಹೇಳಿದರು. ಹೇಮಾವತಿ ಭಾಗದಲ್ಲಿ ಸಾವಿರ ಕೋಟಿ ವೆಚ್ಚದ ಕೆಲಸ ನಡೆಯುತ್ತಿದೆ ಎಂದರು.
ರೈತರ ಭೂಮಿಗಳಿಗೆ ನೀರು ಕೊಡಲು ಎಲ್ಲೆಲ್ಲಿ ನೀರು ಲಭ್ಯವಿದೆ ಅಲ್ಲಲ್ಲಿ ಬಳಸಿಕೊಳ್ಳುವ ಕೆಲಸ ಮಾಡಲಾಗುವುದು. ಕೆರೆಗಳು ಬತ್ತಿ ಹೋಗಿ, ಅಂತರ್‍ಜಲ ತಳ ಸೇರಿದೆ. ಅದಕ್ಕಾಗಿ 1200 ಕೆರೆಗಳಿಗೆ ನೀರು ತುಂಬಿಸಲು ಹಾಗೂ ಪಂಪ್ ಸೆಟ್‍ಗಳಿಗೆ ನೀರು ನೀಡಲು 5 ಸಾವಿರ ಕೋಟಿ ರೂಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು. ನಮ್ಮ ಸರ್ಕಾರ ರೈತರ ಪರ ಇರಬೇಕು ಎಂಬ ದೃಷ್ಟಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಬಡವರು ಖಾಸಗಿ ಮೆಡಿಕಲ್ ಕಾಲೇಜಿಗೆ ಹೋಗಲು ಸಾಧ್ಯವಿಲ್ಲ. ಇದನ್ನರಿತು ಅವರ ಅನುಕೂಲಕ್ಕಾಗಿ ಹಳ್ಳಿಗಾಡಿನ ಮಕ್ಕಳಿಗೆ ಸೀಟು ನೀಡಲು ಹಾಸನ ಮೆಡಿಕಲ್ ಕಾಲೇಜ್ ತರಲಾಯಿತು. ಆಗೇ ಇನ್ನು 6 ಕಾಲೇಜ್ ತರಲು ಘೋಷಣೆ ಮಾಡಿದ್ದೇನೆ. ಈಗಾಗಲೇ 3 ಕಾಲೇಜ್ ಪ್ರಾರಂಭವಾಗಿದೆ. ಇದುವರೆಗೂ ನಾನಾ ಸರ್ಕಾರಗಳು ಬಂದು ಹೋಗಿದೆ ಅಷ್ಟೆ ಯಾರು ಒಂದು ಮೆಡಿಕಲ್ ಕಾಲೇಜ್ ಮಾಡಲು ಮುಂದಾಗಲಿಲ್ಲ ಎಂದ ಸಿದ್ದರಾಮಯ್ಯ ಅವರು ನಗರದ ನಾನಾ ಕಾಲೇಜುಗಳಿಗೆ ಸೌಲಭ್ಯ ಕೇಳೀದ್ದಾರೆ ಶೀಘ್ರವೇ ನೀಡಲಾಗುವುದು ಎಮದಾಗ ಸಭಾಂಗಣದಲ್ಲಿ ಕುಳಿತಿದ್ದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮಾತನಾಡಲು ಹೋದಾಗ ಮೂಲಭೂತ ಸೌಕರ್ಯ ಕೊಡೂಣಾ ಬಿಡು ರೇವಣ್ಣ ಎಂದು ಟಾಂಗ್ ನೀಡಿದರು.
ಸಾಮಾನ್ಯ ಜನರಿಗೂ ಗುಣಮಟ್ಟದ ಶಿಕ್ಷಣ ದೊರಕಲಿ ಎಂದು ಮೂರಾರ್ಜಿ ದೇಸಾಯಿ ವಸತಿ ಶಾಲೆಯನ್ನು 1995 ರಲ್ಲಿ ನಾನು ಹಣಕಾಸು ಮಂತ್ರಿಯಾಗಿದ್ದಾಗ ಪ್ರಾರಂಭಿಸಿದೆ. ಡಿಎಸ್‍ಎಸ್ ಹೋರಾಟ ಕೂಡ ನಡೆದಿತ್ತು. ಮುಂದಿನ ದಿನಗಳಲ್ಲಿ ಹೋಬ್ಳಿ ಮಟ್ಟದಲಿ ಇಂತಹ ಶಾಲೆ ಪ್ರಾರಂಭಿಸುವ ಗುರಿ ಹೊಂದಿದ್ದೇವೆ ಎಂದರು.
ರೈತರಿಗೆ 3 ಲಕ್ಷದವರೆಗೂ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ ಎಂದ ಸಿಎಂ ಅವರು ಬಳಿ ಕುಳಿತಿದ್ದ ಶಾಸಕ ಸಿ.ಎನ್. ಬಾಲಕೃಷ್ಣ ಕಡೆ ತಿರುಗಿ ನೀವು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದವರು ನಿಮಗೆ ತಿಳಿದಿರಬೇಕು ಎಂದರು.
ಮುಖ್ಯಮಂತ್ರಿಯವರು ಅಹಿಂದ ಪರವಾಗಿ ಇದ್ದಾರೆ ಎಂದು ಹೇಳಿರುವ ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ.ಎಮ್. ಶಿವಲಿಂಗೇಗೌಡರಿಗೆ ತಿಳಿದಿದೆ. ನಮ್ಮ ಸರ್ಕಾರ ಎಲ್ಲಾ ವರ್ಗದ ಜನರಿಗೆ ಯೋಜನೆಯನ್ನು ತಲುಪಿಸಿದ್ದೇವೆ. ಉಚಿತವಾಗಿ ಅಕ್ಕಿ ನೀಡಿದ್ದರಿಂದ ಕೂಲಿ ಕೆಲಸಕ್ಕೆ ಯಾರು ಬರುತ್ತಿಲ್ಲ ಎಂದು ಸಭೆಯಲ್ಲಿ ನನಗೆ ಶಾಸಕರೊಬ್ಬರೂ ಪ್ರಶ್ನೆ ಮಾಡಿದ್ದರು. ಅರಮಾಗಿ ಇರಲಿ ಬಿಡಿ, ಇದುವರೆಗೂ ಕೂಲಿ ಮಾಡಿ ಸುಸ್ತಾಗಿ ಎಲ್ಲಾ ಸವೆದು ಹೋಗಿದೆ. ನೀವು ಅರಮಾಗಿ ಕುಳಿತಿದ್ದೀರಾ ಸಲ್ಪ ಶ್ರಮ ನೀಡಿ ಎಂದು ಹೇಳಿದ ನೆನಪನ್ನು ಬಿಚ್ಚಿಟ್ಟರು. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತ್ ಚುನಾವಣೆ ಬಳಿಕ ರಾಜ್ಯ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡುವುದಾಗಿ ಹೇಳಿದರು.
ಡಾ. ಜಿ. ಪರಮೇಶ್ವರ್ :
ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ಧವಿರುತ್ತದೆ. ಸಮಾಜಿಕ ನಾಯ್ಯಪರಿಕಲ್ಪನೆಯೊಂದಿಗೆ ಹಾಗೂ ಅಭಿವೃದ್ಧಿಯನ್ನು ಒಂದುಗೊಳಿಸಿ ಅಧಿಕಾರ ನಡೆಸುತ್ತಿರುವ ನಮ್ಮ ಸರ್ಕಾರ ಕಳೇದ 2.ವರೆ ವರ್ಷದಿಂದ ದಿಂದ ನಾವು ನೀಡಿದ್ದ ಎಲ್ಲಾ ಭೆವಸೆಗಳನ್ನು ಹೀಡೆರಿಸುದ್ದವೆ. ನೀರಾವರಿಗೆಂದೆ ಇದುವರೆಗೂ 30 ಸಾವಿರ ಕೋಟಿ ಮೀಸಲಿಟ್ಟಿದ್ದವೇ. ನಮ್ಮ ಸರ್ಕಾರದ ಸಾಧನೆಯನ್ನು ಸ್ವತಹ ರೇವಣ್ಣ ಅವರೇ ಒಪ್ಪುತ್ತಾರೆ ಎಂದ ಅವರು . ಜಿಲ್ಲೆಗೆ ಬೇಕಾಗಿರುವ ಮೂಲಭೂತ ಸೌಕಯ್ಯ ನೆರವೆರಿಸಲು ನಮ್ಮ ಸರ್ಕಾರ ಬದ್ಧವಿದೆ ಎಂದರು. ಇನ್ನು ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇದ್ದ ಸರಿ ಸುಮಾರು 6 ಸಾವಿರ ಸಿಬಂದ್ದಿಯನ್ನು ನೇಮಕ ಮಾಡಿಕೊಳ್ಳಲಾಗಿದ್ದು ಕೇಲವೇ ದಿನಗಳಲ್ಲಿ ಇನ್ನು 6 ಸಾವಿರ ನೌಕರನ್ನು ನೇಮಕ ಮಾಡಿಕೊಳ್ಳಲಿದ್ದವೆ ಎಂದರು. ಇನ್ನು ದಲಿತರ ಹಾಗೂ ಅಲ್ಪ ಸಂಖ್ಯಾಂತ ಜನಾಂಗದ ಅಭಿವೃದ್ಧಿಗೆ ಸರಿ ಸುಮಾರು 13 ಸಾವಿರ ಕೋಟಿ ಮೀಸಲಿಟ್ಟಿದೆ ಎಂದ ಅವರು ಇನ್ನುಳಿದ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಿದೆ ಎಂದರು. ಮುಖ್ಯಮಂತ್ರಿಯವರು 11 ಸಾವಿರ ಮನೆ ಕಟ್ಟುವ ಯೋಜನೆ ಕೈಗೆತ್ತಿಕೊಂಡಿದ್ದಾರೆ. 3 ಸಾವಿರ ಪೊಲೀಸ್ ಮನೆ ನಿರ್ಮಾನವಾಗಿದೆ. ಸಿಬ್ಬಂದಿ ಕೊರತೆ ನಿಬಾಯಿಸಲು 8 ಸಾವಿರು ಪೊಲೀಸ್ ಕಾನ್‍ಸ್ಟೇಬಲ್ ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ ಎಂದರು. ಕಳೆದ ಬಜೆಟ್‍ನಲ್ಲಿ 16 ಸಾವಿರ ಕೋಟಿ ರೂಗಳನ್ನು ಅಲ್ಪ ಸಂಖ್ಯಾತರಿಗೆ ಮೀಸಲಾಗಿಟ್ಟಿದ್ದಾರೆ. ಜಿಲ್ಲೆಯಲ್ಲಿ ಅಭಿವರದ್ಧಿ ಕೆಲಸವನ್ನು ಯಾವುದೇ ಮುಲಾಜು ಇಲ್ಲದೆ ಮಾಡುವುದಾಗಿ ಕರೆ ನೀಡಿದರು.
ಎ. ಮಂಜು:
ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಮಾತನಾಡಿ, ಅಂದು ರಾಜ್ಯದಲ್ಲಿ ಆಡಳಿತದಲ್ಲಿದ್ದ ವಿರೇಂದ್ರ ಪಾಟೀಲ್ ನೀರಿಗಾಗ ಲಾಟಿ ಪ್ರಾರಂಭಿಸಿ ಬಂದ ಹಣದಲ್ಲಿ ನೀರಿಗೆ ಗೊರೂರಿನಲ್ಲಿ ಅಡಿಗಲ್ಲು ಹಾಕಿದರು. ಅಂತವರ ನೆನಪಿಗಾಗಿ ಗೂರುರುನಲ್ಲಿ ಅವರ ಪ್ರತಿಮೆ ನಿರ್ಮಿಸಲು ಮನವಿ ಮಾಡಿದರು. ಇನ್ನು ಜಿಲ್ಲೆಯಲ್ಲಿ ಆನೆ ದಾಳಿ ಯು ಹೆಚ್ಚಾಗಿದ್ದು ಶ್ರೀಘವೇ ಆನೆ ಕಾರಿಡಾರ್ ನಿರ್ಮಿಸುವ ಮೂಲಕ ಮಲೆನಾಡು ಭಾಗದ ರೈತರಿಗೆ ಅನುಕೂಲ ಮಾಡುಕುಡವಂತೆ ಕೊರಿದರು. ತುರ್ತಾಗಿ ರೈಲ್ವೆ ಮೇಲ್ ಸೇತುವೆ ನಿರ್ಮಾಣ ಮಾಡಲು ಅನುದಾನ ನೀಡಬೇಕು. ಕುಡಿಯುವ ನೀರಿನ 2ನೇ ಹಂತದ ಯೋಜನೆ ಜಾರಿ ಮಾಡಿ ಜಿಲ್ಲೆ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ ಎಂದರು.
ಹೆಚ್.ಎಸ್. ಪ್ರಕಾಶ್ ;
ಕ್ಷೇತ್ರದ ಶಾಸಕರಾದ ಹೆಚ್.ಎಸ್. ಪ್ರಕಾಶ್ ಮಾತನಾಡಿ, ನೀರಾವರಿಗೆ ಶ್ರಮಿಸಿದ ಅಂದಿನ ಆಡಳಿತ ನಡೆಸಿದ ರಾಜ್ಯದ ವೀರೇಂದ್ರ ಆಪಟೇಲ್ ಅವರನ್ನು ನೆನಪಿಸಿಕೊಳ್ಳಲೇ ಬೇಕು ಎಂದರು. ನಗರದಲ್ಲಿರುವ ವೈದ್ಯಕೀಯ ಕಾಲೇಜಿಗೆ ಉಪಕರಣಗಳಿಲ್ಲ. ಸ್ಕ್ಯಾನಿಂಗ್ ಇಲ್ಲ. 2 ವರ್ಷಗಳಿಂದ ಪಿಜಿ ಕೋರ್ಸ್ ನಿಲ್ಲಿಸಲಾಗಿದೆ. ದಯಮಾಡಿ ಪ್ರಾರಂಭಿಸಬೇಕೆಂದು ಮನವಿ ಮಾಡಿದರು. ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಲ್ಯಾಬ್ ಕೊರತೆಯಿಂದ ವಿದ್ಯಾರ್ಥಿಗಳು ಎಂಸಿಇ ಕಾಳೇಜಿಗೆ ಹೋಗಬೇಕಾಗಿದೆ. ಪಶು ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಕೂಡಲೇ ಮೂಲಭೂತ ಸೌಕರ್ಯ ನೀಡಿ ಸರಿಪಡಿಸಬೇಕು ಎಂದು ಹೇಳಿದರು. ಅತ್ಯವಶ್ಯಕವಾಗಿ ಬೇಕಾಗಿರುವ ಹಣವನ್ನು ಸರ್ಕಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮ ಗಂಟೆ ಗಟ್ಟಲೆ ತಡವಾಗಿ ನಡೆದರೂ 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಮೊದಲು ನೂತನ ಸರ್ಕಾರಿ ವೈದ್ಯಕೀಯ ಕಾಲೇಜ್ ಉದ್ಘಾಟನೆ ಮಾಡಿ ನಂತರ ಸಭಾ ಕಾರ್ಯಕ್ರಮಕ್ಕೆ ಬರುವಾಗ ಮೊದಲೇ ಗೇಟಿನಲ್ಲಿ ಕಾದಿದ್ದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ನಾಲ್ಕು ಜನ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಲೆ ಹಾಕಿ ಬರಮಾಡಿಕೊಂಡರು. ಶಂಕಸ್ಥಾಪನೆ ಮಾಡುವ ವೇಳೆ ಸಿಎಂ ಅವರು ರೇವಣ್ಣ ಹಾಗೂ ಎಲ್ಲಾ ಜೆಡಿಎಸ್ ಶಾಸಕರನ್ನು ಆಹ್ವಾನಿಸಿದರು. ಪ್ರಕಾಶ್ ಅವರು ಕಾಣದಿದ್ದಾಗ ಕರೆದು ಒಟ್ಟಿಗೆ ನೆರವೇರಿಸಿದರು. ಭಾಗವಹಿಸಿದ್ದ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದರೂ ಸಾಕಗಾದೆ ಊಟಕ್ಕಾಗಿ ಪರದಾಡಿದರು.
ವೇದಿಕೆಯಲ್ಲೂ ಮುಖ್ಯಮಂತ್ರಿ ಅವರು ಗಂಟ ಘೋಷವಾಗಿ ಮಾತನಾಡಿದರು. ಮಹಿಳಾ ಸುರಕ್ಷತೆಗಾಗಿ ಹಾಗೂ ಕಾನೂನು ಬಾಹಿರ ಚುಟುವಟಿಕೆಗಳನ್ನು ತೆಡೆಯುವ ಹಿತದೃಷ್ಠಿಯಿಂದ ಹಾಸನ ಜಿಲ್ಲಾ ಪೊಲೀಸ್ ವತಿಯಿಂದ ಎಫ್.ಐ. ಆರ್ ಎಂಬ ಹೊಸ ಮೊಬೈಲ್ ಆಫ್ಷೇಕೇಷನ್‍ನ್ನು ಬಿಡುಗಡೆಗೊಳಿಸಲಾಯಿತ್ತು. ರಾಜ್ಯದಲ್ಲೆ ಪ್ರಮಥಬಾರಿಗೆ ಇತಂಹದೊಂದು ಪ್ರಯತ್ನ ಎಂದು ಶ್ಲಾಘಿಸಿದರು.
ಇದೆ ವೇಳೆ ಲೊಕೋಪಯೋಗಿ ಸಚಿವರಾದ ಡಾ:ಹೆಚ್.ಸಿ.ಮಹದೇವಪ್ಪ, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ:ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್, ನೂತನ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಕೆ.ಎಮ್. ಶಿವಲಿಂಗೇಗೌಡ, ರುದ್ರೇಶ್‍ಗೌಡ, ಹೆಚ್.ಕೆ. ಕುಮಾರಸ್ವಾಮಿ, ಜಿಪಂ ಅಧ್ಯಕ್ಷೆ ಹೇಮಾವತಿ, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್, ಆಹಾರ ನಿಗಮ ಘಟಕದ ಅಧ್ಯಕ್ಷ ಎಸ್.ಎಮ್. ಆನಂದ್, ಜಿಲ್ಲಾಧಿಕಾರಿ ಉಮೇಶ್ ಹೆಚ್. ಕುಸುಗಲ್ ಇತರರು ಭಾಗವಹಿಸಿದ್ದರು.



No comments:
Post a Comment