BHEEMA VIJAYA KARKAN25113/13/7/2015-TC HASSAN

ನಮ್ಮಳಗೆ ಇಂಥವರು ಇದ್ದಾರೆ

ಗೆಳೆಯರೆ. .....

ನಾನು ಇವತ್ತು ಸಂಜೆ ನನ್ನ ಪರೀಕ್ಷೆ ಮುಗಿಸಿ ಬಸ್ಟಾಪಲ್ಲಿ ಬಸ್ಸಿಗೋಸ್ಕರ ಕಾಯ್ತಾ ಇದ್ದೆ
ಯಾವುದೇ ಟೆನ್ಷನ್ ಬಸ್ ಬೇರೆ ಬಂದಿರಲಿಲ್ಲ
ಅಷ್ಟರಲ್ಲಿ 12 ವರ್ಷದ ಬಾಲಕನೊಬ್ಬ ನನ್ನ ಹತ್ತಿರ ಬಂದು ಅಣ್ಅಣ್ 10 ರೂಪಾಯಿ ಇದ್ದರೆ ಕೊಡಿ ಅಂದ ನಾನು ಮೊದಲೇ ಯಾವುದೋ ಟೆನ್ಷನಲ್ಲಿದ್ದೆ ನಮ್ಮ ಹುಡುಗಿ ಬೆರೆ ನನ್ನ ಮೇಲೆ ಕೋಪ ಮಾಡ್ಕೊಂಡು ಬೆಳಿಗ್ಗೆಯಿಂದ ಫೋನ್ ತೆಗ್ದಿರಲಿಲ್ಲ ಈ ಹುಡುಗ ಕೇಳಿದ್ದು ನನಗೆ ರೇಗಿ ಹೊಯ್ತು
ಕೋಪದಲ್ಲಿ ನನ್ನ ಹತ್ರ ಇಲ್ಲ ಹೋಗೊ ಅಂತ ಬೈದುಬಿಟ್ಟೆ. .

         ಆಮೇಲೆ ಯಾಕೋ ಬೆಜಾರಾಗಿ ಆ ಹುಡುಗನ ಹಿಂದೆ ಹೋದೆ.

ಅದೊಂದು ಆಸ್ಪತ್ರೆ ಅದರ ಒಂದು ಕಟ್ಟೆಯ ಮೇಲೆ ಗೋಣಿ ಚೀಲದ ಮೇಲೆ ಒಂದು ಹೆಂಗಸು ಮುದ್ದೆಯಾಗಿ ಮಲಗಿದ್ದಳು ಆ ಹುಡುಗ ಅವಳ ಹತ್ತಿರ ಹೋದವನೇ ತಲೆಗೆ ಕೈ ಹಚ್ಚಿಕೊಂಡು ಕೂತುಬಿಟ್ಟ. ...

      ನನಗೆ ಕುತೂಹಲ ತಡೆಯದೆ ಆ ಹುಡುಗನ ಹತ್ತಿರ ಹೋದೆ...

ನನ್ನ ಮತ್ತು ಬಾಲಕನ ಸಂಭಾಷಣೆ. ...

ನಾನು - ಯಾಕೋ ಏನಾಯ್ತು ಇಲ್ಲಿ ಬಂದು  ಕೂತಿದಿಯಾ...? ಯಾರಿವರು. ...?

ಬಾಲಕ - ಅಣ್ಣಾ ಇವರು ನಮ್ಮಮ್ಮ. .

ನಾನು- ಏನಾಗಿದೆ ಇವರಿಗೆ....?

ಬಾಲಕ-  ಗೊತ್ತಿಲ್ಲ ಅಣ್ಣಾ ಡಾಕ್ಟ್ರು ಹೇಳಿದ್ರು ಅದೇನೋ ಕುಷ್ಟ ರೋಗ ಅಂತೆ.

ನಾನು - ಮತ್ತೆ ಅವರನ್ನ ಇಲ್ಲಿ ಮಲಗಿಸಿ ನಿನ್ ಭಿಕ್ಷೆ ಬೇಡ್ತಿದಿಯಾ....?

ಬಾಲಕ - ಇಲ್ಲ ಅಣ್ಣಾ ನಾನು ಭಿಕ್ಷೆ ಬೇಡಲ್ಲ ದಿನಾ ಬೆಳಿಗ್ಗೆ ಅಂಗಡಿಗಳಿಗೆ ಹೂ ಹಾಕ್ತಿನಿ

ನಾನು - ಮತ್ಯಾಕೆ ನನ್ನ ಹತ್ರ ದುಡ್ಡು ಕೆಳ್ದೆ. ..?

ಬಾಲಕ - ಅಣ್ಣಾ ಅಮ್ಮನ್ನ ಆಸ್ಪತ್ರೆಗೆ ತೋರಿಸ್ದೆ ಮಾತ್ರೆ ತಗೋಳೊಕೆ 10 ರೂಪಾಯಿ ಕಡಿಮೆ ಇತ್ತು ಅಣ್ಣಾ

ಇದನ್ನು ಕೇಳಿ ನನ್ನ ಕಣ್ಣಾಲಿಗೆ ಒದ್ದೆಯಾಯಿತು ಹೆತ್ತ ತಾಯಿಯನ್ನು ಬೀದಿಗ ತಳ್ಳುವ ಮಕ್ಕಳಿರುವ ಈ ಕಾಲದಲ್ಲಿ ಆ ಹುಡುಗನ ಮಾತು ನನ್ನಲ್ಲಿ ಸಂಚಲನ ಉಂಟು ಮಾಡಿತು. ..

ನಾನು- ನಿಮ್ಮಪ್ಪ ಎಲ್ಲೋ ಮರಿ ...?

ಬಾಲಕ - ನಂಗೆ ಅಪ್ಪ ಇಲ್ಲ ಅಣ್ಣಾ ಸತ್ತೊಗಿದಾರೆ. ...

ನಾನು - ಶಾಲೆಗೆ ಹೋಗಲ್ವಾ ನೀನು.....?

ಬಾಲಕ - ಹೋಗ್ತಿನಿ ಅಣ್ಣಾ ಬೆಳಿಗ್ಗೆ ಹೂ ಹಾಕಿ
ಆಮೇಲೆ ಹೋಗ್ತಿನಿ

ಆ ಹುಡುಗನ ಮಾತುಗಳು ನನ್ನ ಮೂಕವಿಸ್ಮತನನ್ನಾಗಿಸಿ ಬಿಟ್ಟಿದ್ದವು ಜೇಬೊಳಗೆ ಕೈ ಹಾಕಿ 100 ರೂಪಾಯಿ ನೋಟೊಂದನ್ನು ಬಾಲಕನ ಕೈಗಿತ್ತೆ

ಬಾಲಕ -ಬೇಡ ಅಣ್ಣಾ ನಂಗೆ ಬರೀ 10  ರೂಪಾಯಿ ಸಾಕು ಇವತ್ತು ನಾನು ದುಡ್ಡು ಸರಿಯಾಗೇ ತಂದಿದ್ದೆ ದಾರಿಯಲ್ಲಿ ಪಾಪ ಒಂದು ಅಜ್ಜಿ ಹಸಿವು ಅಂತ ಮಲ್ಕೊಂಡಿದ್ಲು ಅದಕ್ಕೆ ಅವಳಿಗೆ ತಿಂಡಿ ಕೊಡಸ್ದೆ ಕಡಿಮೆ ಬಿತ್ತು 10 ರೂಪಾಯಿ ಕೊಡಿ

ಆ ಬಾಲಕ ಮಾತು ಒಮ್ಮೆ ನನ್ನ ಬಾಲ್ಯವನ್ನು ನೆನಪಿತು ನಾನು ಈ ವಯಸ್ಸಿನಲ್ಲಿ ನನಗೆ ಸೈಕಲ್ ಬೇಕು ಎಂದು ಹಠ ಹಿಡಿದಾಗ ಅಪ್ಪ ತಮ್ಮ ಮದುವೆಯಲ್ಲಿ ಕೊಟ್ಟ ವಾಚನ್ನು ಮಾರಿ ನನಗೆ ಸೈಕಲ್ ತಂದು ಕೊಟ್ಟರು
ಅಷ್ಟೊತ್ತಿಗಾಗಲೇ ನನ್ನ ಕಣ್ಣಿಂದ ಹನಿಯೋಂದು ಜಾರಿ ಕಪಾಳ ಮಾರ್ಗವಾಗಿ ನೆಲ ಸೇರಿತ್ತು. ..

ನಾನು -ಅಲ್ಲ ನಿಮ್ಮಮ್ಮನ ಆಸ್ಪತ್ರೆಗೆ ದುಡ್ಡು ಕಡಿಮೆ ಬಿಳುತ್ತೆ ಅಂತ ಗೊತ್ತಿದ್ರು ಅಜ್ಜಿಗೆ ಯಾಕೆ ದುಡ್ಡು ಕೊಟ್ಟೆ. ....?

ಬಾಲಕ -ಅಣ್ಣಾ ನಾನು ಹುಡುಗ ದುಡಿಯುವ ಶಕ್ತಿ ಇದೆ ನಾನು ಹೇಗಾದರೂ ಮಾಡಿ ದುಡ್ಡು ಹೊಂದಿಸ್ತಿನಿ ಆದ್ರೆ ಪಾಪ ಆ ಅಜ್ಜಿಗೆ ಮೇಲೆಳೊಕು ಆಗಲ್ಲ ಅದ್ಕೆ ಕೊಟ್ಟೆ. ..

ನಾನು ಆಶ್ಚರ್ಯಚಕಿತನಾದೆ ಇಷ್ಟು ಚಿಕ್ಕ ವಯಸ್ಸಿಗೇ ಎಂತಹ ಬುದ್ದಿ ಬೇರೆಯವರಿಗೆ ಕಷ್ಟ ಕೊಟ್ಟು ನಾವು ಚನ್ನಾಗಿದ್ರೆ ಸಾಕು ಅನ್ನೊ ಈ ಜನರ ಮಧ್ಯೆ ನನಗೆ ಕಷ್ಟ ಇರಲಿ ಬೇರೆಯವರ ಕಷ್ಟಕ್ಕೆ ನಾನು ಸ್ಪಂದಸ್ತಿನಿ ಅನ್ನೋ ಆಗಿ ಹುಡುಗನ ಮಾತು ಅವನ ಮೇಲಿನ ಅಭಿಮಾನವನ್ನು ಇನ್ನೂ ಜಾಸ್ತಿ ಮಾಡಿತು

ದುಃಖ ತಡೆಯದೆ ಅವನನ್ನು ಅಪ್ಪಿಕೊಂಡು ಅತ್ತು ಬಿಟ್ಟೆ  ಸಾವರಿಸಿಕೊಂಡು

ನಾನು -ತಗೊ ಎಂದು 100 ರೂಪಾಯಿ

ಬಾಲಕ -ಬೇಡ ಅಣ್ಣಾ ನಂಗೆ ಬರೀ 10 ರೂಪಾಯಿ ಸಾಕು ಎಂದು ಎಲ್ಲೋ ಒಂದು ಕಡೆ ಹೋಗಿ ಚಿಲ್ಲರೆ ತಂದು 90 ರೂಪಾಯಿ ನನ್ನ ಕೈಗಿತ್ತು ಬರ್ತಿನಿ ಅಂತ ಹೇಳಿ ಹೋಗುವಾಗ ಒಂದು ಮಾತು ಹೇಳಿದ

ಅಣ್ಣಾ ನಾನು ಅಮ್ಮನ್ನ ಚನ್ನಾಗಿ ನೋಡ್ಕೊತೀನಿ ಭಿಕ್ಷೆ ಬೇಡಿ ಅಲ್ಲ ಚನ್ನಾಗಿ ಡುಡ್ದು 

ನಿಮ್ಮ ದುಡ್ಡನ್ನ ಖಂಡಿತ ವಾಪಸ್ ಕೊಡ್ತಿನಿ ಅಣ್ಣಾ ಎಂದವನ ಕಣ್ಣಲ್ಲಿ ಆತ್ಮವಿಶ್ವಸದ ಮಿಂಚೊಂದು ಕಣ್ಣಿಗೆ ರಾಚುವಂತೆ ಹೊಳೆಯುತ್ತಿತ್ತು. ..

ಗೆಳೆಯರೆ ಇಂತಹ ಮುಗ್ಧ ಎಷ್ಟೋ ಮಕ್ಕಳು ನಮ್ಮ ನಿಮ್ಮ ಸುತ್ತಮುತ್ತ ಎಲ್ಲ ಕಡೆ ಇದಾರೆ
ಅಂತಹವರಿಗೆ ನಮ್ಮಿಂದ ಎನಾದರೂ ಮಾಡಲು ಸಾಧ್ಯ ನಾ.....?

ಇದು ನನ್ನ ಪ್ರಶ್ನೆ. .....

No comments:

Post a Comment