ಹಾಸನ: ವ್ಯವಸ್ಥೆ ಸ್ಮಶಾಣ ಕಾಯುವ ಕೆಲಸ ನಿರ್ವಹಿಸುತ್ತಿದ್ದು ಮುಸ್ಲಿಮರ ದೌರ್ಬಲ್ಯವನ್ನು ಬಂಡವಾಳ ಮಾಡಿಕೊಳ್ಳುತ್ತಿದೆ ಎಂದು ಲೇಖಕ ಬೇಲೂರ್ ನವಾಬ್ ಹೇಳಿದರು.
ನಗರದ ಮಾನವ ಭಂದುತ್ವ ವೇದಿಕೆಯಲ್ಲಿ ಅಂಬೇಡ್ಕರ್ ಯುವ ಸೇನೆ ಆಯೋಜಿಸಿದ್ದ ‘ಹಾಸನ ಮುಸ್ಲಿಮರ ತಲ್ಲಣಗಳು’ ಸಂವಾದ ಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಮಶಾಣ ಕಾಯುವವನಿಗೆ ಹೆಣ ಬಂದಷ್ಟು ಲಾಭ, ಈ ಮಾನಸಿಕ ಸ್ಥಿತಿಯಲ್ಲಿ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ ಎಂದರು.
ಯಾರದೋ ಸಾವು ಯಾರದೋ ಮನೆಯ ಹಬ್ಬವಾಗುವಂತೆ, ಮುಸ್ಲಿಮರ ತಲ್ಲಣಗಳನ್ನು ಈ ವ್ಯವಸ್ಥೆ ಬಂಡವಾಳ ಮಾಡಿಕೊಂಡಿವೆ. ಸ್ಮಾಶಾಣ ಕಾಯುವವನ ಜೀವನ ಉತ್ತಮವಾಗಿ ನಡೆಯಲು ಸ್ಮಶಾಣಕ್ಕೆ ಹೆಚ್ಚು ಹೆಣಗಳು ಬರಬೇಕು ಇದರಿಂದ ಆದಾಯ ಹೆಚ್ಚುತ್ತದೆ. ಸತ್ತವನ ಮನೆಯಲ್ಲಿ ಶೋಕವಿದ್ದರೆ ಸ್ಮಶಾಣ ಕಾಯುವವನ ಮನೆಯಲ್ಲಿ ಆನಂದದ ವಾತಾವರಣ ಉಂಟಾಗುತ್ತದೆ ಇಂತಹ ಸ್ಥಿತಿಯ ಮನಸ್ಸಿನಲ್ಲಿ ನಮ್ಮ ವ್ಯವಸ್ಥೆ ಇದೆ ಎಂದು ಮಾರ್ಮಿಕವಾಗಿ ವಿಷ್ಲೇಶಿಸಿದರು.
ಮುಸ್ಲಿಮರ ತಲ್ಲಣಗಳಿಗೆ ಪರೋಕ್ಷವಾಗಿ ಮುಸ್ಲಿಮರೇ ಕಾರಣರಾಗಿರಬಹುದಾದ ಎಂಬ ಅಂಶಗಳನ್ನು ತಳ್ಳು ಹಾಕುವಂತಿಲ್ಲ ಎಂದ ಅವರು ನಮ್ಮ ಮೀಸಲಾತಿಯನ್ನು ನಾವು ಪಡೆದುಕೊಳ್ಳುತ್ತಿಲ್ಲ. ನಮ್ಮ ಹಕ್ಕನ್ನು ನಾವು ಪ್ರಶ್ನಿಸುತ್ತಿಲ್ಲ. ನಾವು ನಮ್ಮ ಹಕ್ಕನ್ನು ಪಡೆದುಕೊಳ್ಳುವುದು ಹೇಗೆ ಎಂಬುದು ನಮಗೆ ತಿಳಿದಿಲ್ಲ. ನಾವು ಮ್ಯಾಜಿಕ್‍ಗಾಗಿ ಕಾಯುತ್ತ ಕುಳಿತ್ತಿದ್ದೇವೆ ಎಂದರು.
ಮುಸ್ಲಿಮರು ಸರ್ವ ಸಮಾಜದ ಜೊತೆ ಬೆರೆಯವರ ಮನಸ್ಥಿತಿಯನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ನಡೆಯುವ ಎಲ್ಲಾ ಆಗುಹೋಗುಗಳಲ್ಲಿ ಸಮಪಾಲುದಾರರಾಗಿ ಬಾಗವಹಿಸಬೇಕು ಎಂದು ಹೇಳಿದರು.
ಅಂಬೆಡ್ಕರ್ ಯುವ ಸೇನೆ ರಾಜ್ಯ ಕಾರ್ಯದ್ಯಕ್ಷ ನಾಗರಾಜು ಹೆತ್ತೂರ್ ಮಾತನಾಡಿ, ಘೋಷಣೆ ಮಾಡುವ ಹಕ್ಕು ಯಾರಿಗೂ ಯಾರು ನೀಡಿಲ್ಲ. ಹಾಗೂ ಘೋಷಣೆಗೆ ಒಳಗಾಗುವುದು ಸಮಾಜಕ್ಕೆ ಮಾರಕವಾದದ್ದು ಎಂದರು.
ಕಾರ್ಯಕ್ರಮದಲ್ಲಿ ವಕ್ಫ್ ಸಲಾಹ ಸಮೀತಿ ಅದ್ಯಕ್ಷ ಪರ್ವೀಜ್ ಪಾಷ, ದಸಂಸ ಮುಖಂಡ ಅಬ್ದುಲ್ ಸಮದ್, ಜಮಾತೆ ಇಸ್ಲಾಮಿ ಹಿಂದ್ ಮುಖಂಡ ಖಾಲಕ್ ಸಾಬ್, ಪಿಎಫ್‍ಐ ಮುಖಂಡ ಸೋಫಿ ಇಬ್ರಾಹಿಮ್, ವೀರ ಕನ್ನಡಿಗರ ಟಿಪ್ಪು ಸೇನೆ ಜಿಲ್ಲಾಧ್ಯಕ್ಷ ಆಜಂ ಖಾನ್, ಆರ್‍ಪಿಐ ರಾಜ್ಯಕಾರ್ಯದ್ಯಕ್ಷ ಅಜಾಸ್ ಅಹಮದ್ ಫಾರುಕಿ. ಎಪಿಪಿ ಮುಖಂಡ ಅಕ್ಮಲ್ ಜಾವೀದ್, ಸಿಐಟಿಯು ಮುಖಂಡ ಅಹಮ್ಮದ್, ಕವಿ ಝುಫ್ಲಿ ನಗರಸಭೆ ಸದಸ್ಯ ಸಮೀರ್ ಖಾನ್, ಎಸ್‍ಡಿಪಿಐ ಮುಖಂಡ ಅಮೀರ್ ಜಾನ್, ವಕ್ಫ್ ಸಲಹಾ ಸಮೀತಿ ಸದಸ್ಯ ಕಬೀರ್. ಎಪಿಪಿ ನಾಗರಾಜು ಸಾಹಿತಿ ನಾಯಕನಹಳ್ಳಿ ಮಂಜೇಗೌಡ, ಉಪ್ಪಾರ್ ಕೊಟ್ರೇಶ್
ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪರ್ತಕರ್ತ ಮಲ್ನಾಡ್ ಮೆಹಬೂಬ್ ನಿರೂಪಿಸಿದರು ಮಾನವ ಬಂದುತ್ವ ವೇದಿಕೆ ಅದ್ಯಕ್ಷ ಜಿ. ಓ ಮಹಂತಪ್ಪ ಅಧ್ಯಕ್ಷತೆ ವಹಿಸಿದ್ದರು.


No comments:
Post a Comment