BHEEMA VIJAYA KARKAN25113/13/7/2015-TC HASSAN

ಕರವೇಯಿಂದ ದೇಹದಾಡ್ಯ ಸ್ಪರ್ದೆ ಅಕ್ಮಲ್ ಪಾಷಾಗೆ ಮಿಸ್ಟರ್ ಹಾಸನ ಪಟ್ಟ


ಹಾಸನ: ಕರವೇಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ದೆಯಲ್ಲಿ ಹಾಸನದ ಅಕ್ಮಲ್ ಪಾಷಾಗೆ ಮಿಸ್ಟರ್ ಹಾಸನವಾಗಿ ಪ್ರಥಮ ಸ್ಥಾನದಲ್ಲಿ ಆಯ್ಕೆಗೊಂಡರು.
     
ನಗರದ ಕುವೆಂಪು ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ದೇಹದಾಡ್ಯ ಸ್ಪರ್ದೆಯು 34 ಕೆಜಿಯಿಂದ 85 ಕೆಜಿವರೆಗೂ ನಡೆಯಿತು. ಪ್ರಥಮ ಸ್ಥಾನಗಳಿಸಿದ ಅಕ್ಮಲ್ ಪಾಷಾಗೆ ಒಂದು ಕೆಜಿ ಬೆಳ್ಳಿ ಗದೆ ಹಾಗೂ 10 ಸಾವಿರ ನಗದು ನೀಡಿ ಗೌರವಿಸಲಾಯಿತು. 2ನೇ ಸ್ಥಾನವನ್ನು ಹಾಸನದ ಮಧು ಅವರು ಪ್ರಶಸ್ತಿ ಪತ್ರದೊಂದಿಗೆ 10 ಸಾವಿರ ರೂಗಳನ್ನು ಪಡೆದರು. 3ನೇ ಸ್ಥಾನವನ್ನು ಹಾಸನದ ಯೋಗೇಶ್ ಪಡೆದರು.
 
  ಕರವೇ ಯುವ ಘಟಕದ ಅಧ್ಯಕ್ಷ ಪ್ರೀತಮ್‍ರಾಜ್ ದೇಹದಾಡ್ಯ ಸ್ಪರ್ದೆಯ ಆಯೋಜನೆ ಮಾಡಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 34 ಸ್ಪರ್ದಾಳುಗಳು ಭಾಗವಹಿಸಿದ್ದರು.
   
 ದೇಹದಾಡ್ಯ ಸ್ಪರ್ದೆಯ ಉದ್ಘಾಟನೆಯನ್ನು ಕರವೇ ಬೆಂಗಳೂರಿನ ಉದ್ದಿಮೆ ಘಟಕದ ಯಶವಂತ್‍ಗೌಡ ನೆರವೇರಿಸಿದರು. ಇದೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಅವರ ಪುತ್ರ ಮಂಥರ್‍ಗೌಡ, ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ಉಪಾಧ್ಯಕ್ಷ ಗಣೇಶ್‍ಗೌಡ ಹಾಗೂ ಇತರರು ಭಾಗವಹಿಸಿದ್ದರು. 

No comments:

Post a Comment