ಹಾಸನ: ಸಮಾಜದಲ್ಲಿ ಶಾಂತಿ ಸಮಧಾನ ಇರಬೇಕಾದರೆ ಕುಟುಂಬ ವ್ಯವಸ್ಥೆ ಚನ್ನಾಗಿರಬೇಕು. ಮಹಿಳೆಯರಿಗೆ ಕುಟುಂಬ ವ್ಯವಸ್ಥೆಯಲ್ಲಿ ಅಪಾರ ಗೌರವವಿದೆ ಎಂದು ಮಲೇನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಅಶೋಕ್ ಹಾರನಹಳ್ಳಿ ಅಭಿಪ್ರಾಯಪಟ್ಟರು.ನಗರದ ಸುರಭಿ ವೃಂದದವರು ಶ್ರೀ ಸೀತಾರಾಮಾಂಜನೇಯ ದೇವಾಲಯದ ಸೌದಮಿನಿ ಸಭಾಂಗಣದಲ್ಲಿ ಇತ್ತಿಚಿಗೆ ಏರ್ಪಡಿಸಿದ್ದ ದ್ವಿತೀಯ ವರ್ಷದ ಸಂಗೀತ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತೀಯ ಸಂಸೃತಿಯಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನವಿರುವುದರನ್ನ ಕಾಣಬಹುದು ಎಂದರಲ್ಲದೇ ಧಾರ್ಮಿಕ ಹಾಗೂ ಸಾಂಸ್ಕøತಿಕವಾಗಿ ಮಹಿಳೆಯರು ತಮ್ಮನ್ನು ತಾವು ಗುರುತಿಸಿಕೊಂಡಿರುವುದನ್ನ ಕಾಣಬಹುದು. ಅದೇ ರೀತಿ ದಾಸವರೇಣ್ಯರು ಕೀರ್ತನೆಗಳನ್ನ ಜನರ ಆಡು ಭಾಷೆಯಲ್ಲಿ ರಚಿಸಿ ಮನೆ ಮನೆಗೂ ಸಂಗೀತವನ್ನು ತಲುಪಿಸಿಲು ಕಾರಣಕರ್ತರಾಗಿದ್ದಾರೆ. ಸುರಭಿ ವೃಂದದವರು ಪುರಂದರದಾಸರ ಕೀರ್ತನೆಗಳನ್ನ ಅಭ್ಯಾಸ ಮಾಡಿ ಈ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸುತ್ತಿರುವುದು ಸುಸ್ತ್ಯಾರ್ಹ ಎಂದರು.
ಸಮಾರಂಭದಲ್ಲಿ ಭಾಗವಹಿಸಿದ ಮೈಸೂರು ಸುರಭಿ ವೃಂದ ಶ್ರೀಮತಿ ಲಲಿತಾ ಶ್ರೀನಿವಾಸನ್ ಮಾತನಾಡಿ ವಿದುಷಿ ಸುಖನ್ಯ ಪ್ರಭಾಕರ್‍ರವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನ ಸ್ಮರಿಸಿದರು. ಸಂಗೀತಾಸಕ್ತರಿಗೆ ಉಪ್ರೇರಣೆಯಿಂದ ನಿರಂತರವಾದ ಸಂಗೀತ ಕಲೆಗೆ ಪ್ರೋತ್ಸಾಹ ನೀಡಿದ್ದು, ಸುರಭಿ ಹಾಸನ ತಂಡದ ಸದಸ್ಯರು ಇಂದು ಕಾರ್ಯಕ್ರಮ ನೀಡುತ್ತಿರುವುದು ತಮಗೂ ಸಂತಸ ತಂದಿದೆ ಎಂದರು.
ಸಭೆಯನ್ನುದ್ದೇಶಿಸಿ ಸುರಭಿ ತಂಡದ ಮಾರ್ಗದರ್ಶಿ ಶ್ರೀಮತಿ ಗಿರಿಜಾ ವಿ.ರಾವ್ ಮಾತನಾಡಿದರು. ಎರಡು ಗಂಟೆಗೂ ಹೆಚ್ಚು ಕಾಲ ನಡೆದ ನಾದರಸ ಕಾರ್ಯಕ್ರಮದಲ್ಲಿ ಪುರಂದರದಾಸರ 22 ಕೃತಿಗಳನ್ನ ತಂಡದ ಸದಸ್ಯಿನಿಯರು ಹಾಡಿದರು. ವಿದ್ವಾನ್ ರಾಘವೇಂದ್ರ ಪ್ರಸಾದ್‍ರ ಪಿಟೀಲ್ ವಾದನದಲ್ಲಿ ಮತ್ತು ಮೃಂದಗ ವಾದನದಲ್ಲಿ ಸಹಕಾರ ನೀಡಿದರು.
ಇದೇ ಸಂದರ್ಭದಲ್ಲಿ ಅಶೋಕ್ ಹಾರನಹಳ್ಳಿ, ಶ್ರೀಮತಿ ಲಲಿತಾ ಶ್ರೀನಿವಾಸನ್, ಶ್ರೀಮತಿ ಗಿರೀಜಾ ವಿ.ರಾವ್‍ರರನ್ನ ವೇದಿಯಲ್ಲಿ ಸನ್ಮಾನಿಸಲಾಯಿತು.
No comments:
Post a Comment