BHEEMA VIJAYA KARKAN25113/13/7/2015-TC HASSAN

ತೊಡೆ ತಟ್ಟೋದನ್ನ ಮೈಗೋಡಿಸಿಕೊಂಡ ಪ್ರಜ್ವಲ್


ಹಾಸನ:ಹೆಚ್.ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಈಗ ಸುದ್ದಿಯಲ್ಲಿದ್ದಾರೆ.  ಬೀದಿಯಲ್ಲಿ  ಈತ ತೊಡೆ ತಟ್ಟೋದನ್ನ ಆಗಲೇ ಮೈಗೋಡಿಸಿಕೊಂಡಂತೆ ಕಂಡುಬರುತ್ತಿದೆ.
ಇತ್ತೀಚೆಗೆ ಹಳೇಕೋಟೆ ಕಾಂಗ್ರೆಸ್ ಕಾರ್ಯಕರ್ತನ ಮನೆಯ ಮೇಲೆ ಹಾಗು ಕಾರಿನ ಮೇಲೆ ನಡೆದ ಕಲ್ಲಿನ ದಾಳಿ ಇದಕ್ಕೆ ಪ್ರತ್ಯಕ್ಷ ಸಾಕ್ಷ್ಯಿ. ಪ್ರಜ್ವಲ್ ರಾಜಕೀಯ ಜೀವನದ ಆರಂಭದಲ್ಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಎದುರಿಸುವಂತಾಗಿದೆ.
ಪ್ರಜ್ವಲ್‍ಗೆ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ. ಫೇಸ್ ಬುಕ್, ಬ್ಲಾಗ್, ಆನ್‍ಲೈನ್ ಗಳಲ್ಲಿ ಪ್ರಜ್ವಲ್ ಸಿಕ್ಕಾಪಟ್ಟೆ ಮಿಂಚತೊಡಗಿದ್ದಾರೆ.
ದೇವೇಗೌಡರಿಗೆ ತಮ್ಮ ಮೊಮ್ಮಗ ಪ್ರಜ್ವಲ್ ಜಾತಕದ ಮೇಲೆ ಅಪಾರ ನಂಬುಗೆ.  ಮಾಜೀ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಜಾತಕದ ಹೋಲಿಕೆ ಇರುವ ಪ್ರಜ್ವಲ್ ಗೆ ರಾಜಕೀಯವಾಗಿ ಅತ್ಯಂತ ಉಜ್ವಲ ಭವಿಷ್ಯ ಇದೆ ಎಂದು ಜ್ಯೋತಿಷಿಗಳು ಹೇಳಿದ್ದಾರಂತೆ.
ಹಳೇಕೋಟೆ ಘಟನೆಯನ್ನ ಪ್ರಜ್ವಲ್‍ಗೂ ಯಾವುದೇ ಸಂಬಂದವಿಲ್ಲ. ಇದು ರಾಜಕೀಯ ದುರುದ್ದೇಶದ ಷಡ್ಯಂತ್ರ. ವಿನಾಕಾರಣ ಅವನನ್ನು ತಪ್ಪಿತಸ್ಥನನ್ನಾಗಿ ಮಾಡಲಾಗಿದೆ ಎಂದು ಕುಟುಂಬ ಸಮರ್ತಿಸಿಕೊಳ್ಳುತ್ತಿದೆ. ಸೋಲಿನ ಭೀತಿಯಿಂದ ಇಲ್ಲಸಲ್ಲದನ್ನ ಆರೋಪ ಮಾಡಿದ್ದಾರೆ. ಇದು ನನ್ನ ರಾಜಕೀಯ ಬೆಳವಣಿಗೆ ಸಹಿಸದವರ ಕುತಂತ್ರ ಎಂದು ಪ್ರಜ್ವಲ್ ರೇವಣ್ಣ ಹೇಳಿಕೊಂಡಿದ್ದಾರೆ
 ಪ್ರಜ್ವಲ್ ಹೆಸರಿನಲ್ಲಿ ಗಲಾಟೆ ಮಾಡಿದವರು ಯಾರು...? ಎಂಬ ಪ್ರಶ್ನೆಗೆ ಉತ್ತರ ಇಲ್ಲದಂತಾಗಿದೆ.

No comments:

Post a Comment