BHEEMA VIJAYA KARKAN25113/13/7/2015-TC HASSAN

ಪಂ ತಾ ಪಂ ಮತೆ ಎಳಿಕೆ ಜಿಲ್ಲಾಡಳಿತ ಸಚ್ಚು: ಜಿಲ್ಲಾದ್ಯಾಂತ 144



ಹಾಸನ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ  ಸಾರ್ವತ್ರಿಕ ಚುನಾವಣೆ- ಮತ ಎಣಿಕೆ ಕಾರ್ಯವನ್ನು ಸುಗಮ ಮತ್ತು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ವ್ಯವಸ್ಥಿತವಾಗಿ ಸಜ್ಜಾಗಿದೆ.
      ಮತ ಎಣಿಕೆಯ ಪ್ರದೇಶಗಳು:ಹಾಸನ ಸರ್ಕಾರಿ ಕಲಾ ಕಾಲೇಜು, ಆಲೂರು  ಸರ್ಕಾರಿ ಜೂನಿಯರ್ ಕಾಲೇಜು, ಸರ್ಕಾರಿ ಜೂನಿಯರ್ ಕಾಲೇಜು,ಅರಕಲಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅರಸೀಕೆರೆ ಸೆಂಟ್ ಮೇರೀಸ್ ಪ್ರೌಡಶಾಲೆ, ಬೇಲೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ಚನ್ನರಾಯಪಟ್ಟಣ  ನವೋದಯ. ಪದವಿ ಪೂರ್ವ ಕಾಲೇಜು, ಹೊಳೆನರಸೀಪುರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಕಲೇಶಪುರ ಸಂತ ಜೋಸೆಫ್ ಶಾಲೆ,

ನಿಷೇದ:ಮತ ಎಣಿಕೆ ಕೇಂದ್ರದ ನಗರ/ಪಟ್ಟಣಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12. ಗಂಟೆಯವರೆಗೆ  ಗುಂಪು ಸೇರುವುದು ಹಾಗೂ ಯಾವುದೇ ತರಹೆಯ ಆಯುಧ ಇತ್ಯಾದಿಗಳನ್ನು ಹೊತ್ತು ತಿರುಗುವುದು, ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು, ಮೆರೆವಣಿಗೆ ನಡೆಸುವುದು ಹಾಗೂ ಶಾಂತಿ ಶಿಸ್ತು ಪಾಲನೆಗೆ ಭಂಗ ತರುವ ಯಾವುದೇ ರೀತಿಯಲ್ಲಿ ವರ್ತಿಸುವುದನ್ನು ನಿಷೇದಿಸುವುದು ಅತ್ಯಾವಶ್ಯಕವೆಂದು ಕಂಡು ಬಂದಿರುವುದರಿಂದ ., ಜಿಲ್ಲಾಧಿಕಾರಿ ಉಮೇಶ್ ಹೆಚ್. ಕುಸುಗಲ್  ನಿಷೇದಿಸಿದ್ದಾರೆ.

  ನಾಲ್ಕಕ್ಕಿಂತ ಹೆಚ್ಚು ಮಂದಿ ಗುಂಪುಗಾರಿಕೆ ನಡೆಸುವುದು ಆಯುಧ, ಶಸ್ತ್ರಾಸ್ತ್ರಗಳು ಮತ್ತು ಮಾರಕಾಸ್ತ್ರಗಳನ್ನು ಹೊತ್ತು ತಿರುಗುವುದನ್ನು ನಿರ್ಭಂದಿಸಿದೆ.    ಎಣಿಕೆ ಕೇಂದ್ರದ 200 ಮೀಟರ್ ಪರಿದಿಯಲ್ಲಿ ಮತ ಎಣಿಕೆ ಕಾರ್ಯದ ಮೇಲೆ ನಿರತರಾಗಿರುವ ಅಧಿಕಾರಿಗಳು ಮತ್ತು  ಸಿಬ್ಬಂದಿ ವರ್ಗ, ಅಭ್ಯರ್ಥಿಗಳು, ಎಣಿಕೆ ಏಜೆಂಟರು, ಅನುಮತಿ ಹೊಂದಿದ ರಕ್ಷಣಾ ಇಲಾಖೆಯವರು ಹಾಗೂ ಅನುಮತಿ ಹೊಂದಿದ ಮಾಧ್ಯಮದವರು ಇವರುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ತರಹದ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ.
ಯಾವುದೇ ತರಹೆಯ ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು, ಮೆರೆವಣಿಗೆ ನಡೆಸುವುದು ಹಾಗೂ ಶಾಂತಿ ಶಿಸ್ತು ಪಾಲನೆಗೆ ಭಂಗ ತರುವ ರೀತಿಯಲ್ಲಿ ವರ್ತಿಸುವುದನ್ನು ನಿಷೇದಿಸಿದೆ.    ಯಾವುದೇ ರೀತಿಯ ಸಾರ್ವಜನಿಕ ಆಸ್ತಿಗಳಿಗೆ ವಿರೂಪವನ್ನು ಉಂಟು ಮಾಡುವುದನ್ನಾಗಲಿ ಅಥವಾ ನಷ್ಟಗೊಳಿಸುವುದನ್ನಾಗಲಿ ಮಾಡತಕ್ಕದ್ದಲ್ಲ.   ಈ ನಿಷೇದಾಜ್ಞೆಯು ಧಾರ್ಮಿಕ ಹಾಗೂ ಸಾಂಸ್ಕøತಿಕ ಆಚರಣೆಗೆ ಅನ್ವಯಿಸುವುದಿಲ್ಲ.  ಆದಾಗ್ಯೂ ಮೇಲ್ಕಂಡ ಅವಧಿಯಲ್ಲಿ ಮತ ಎಣಿಕೆ ಕಾರ್ಯಕ್ಕೆ ಯಾವುದೇ ರೀತಿ ಅಡಚಣೆಯಾಗದಂತೆ ಆಚರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಉಮೇಶ್ ಹೆಚ್.ಕುಸುಗಲ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಮತ ಎಣಿಕೆ ಫೆ.23 ರಂದು ನಡೆಯಲಿದ್ದು, ಆಯಾಯ ತಾಲ್ಲೂಕು ಚುನಾವಣಾಧಿಕಾರಿಗಳು, ಎಲ್ಲಾ ಅಗತ್ಯ ಪೂರ್ವ ಸಿದ್ದತಾ ಕ್ರಮಗಳನ್ನು ಕೈಗೊಂಡಿದ್ದಾರೆ.
  ಹಾಸನ ಜಿಲ್ಲೆ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯ ಮತ ಎಣಿಕೆ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದ್ದು, ಪ್ರತ್ಯೇಕ ಕೊಠಡಿಗಳಲ್ಲಿ ಎಣಿಕೆ ಸಿದ್ದಪಡಿಸಲಾಗಿದೆ.
  ಹಾಸನ ತಾಲ್ಲೂಕಿನಲ್ಲಿ 9  ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದು, 3 ಕೊಠಡಿಗಳಲ್ಲಿ  ಪ್ರತಿ ಕ್ಷೇತ್ರÀಕ್ಕೆ 3 ಟೇಬಲ್‍ಗಳಂತೆ ಎಣಿಕೆಗೆ ತಯಾರಿಮಾಡಿಕೊಳ್ಳಲಾಗಿದೆ. ಒಂದು ಬಾರಿಗೆ 3 ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತಗಳನ್ನು ಎಣಿಸಬಹುದಾಗಿದೆ. ಹಾಸನ ತಾಲ್ಲೂಕು ಪಂಚಾಯಿತಿಯ 27 ಕ್ಷೇತ್ರಗಳಿದ್ದು 27 ಟೇಬಲ್‍ಗಳಲ್ಲಿ ಮತ ಎಣಿಕೆ ನಡೆಯಲಿದೆ.
  ಕ್ಷೇತ್ರವಾರು ಇರುವ ಮತಗಟ್ಟೆಗಳು :ಭುವನಹಳ್ಳಿ 30, ದುದ್ದ 50, ತಂಡಲಿ 37,  ಕಟ್ಟಾಯ 48, ಮೊಸಳೆ ಹೊಸಳ್ಳಿ 57, ಸಾಲಿಗ್ರಾಮ 57, ಶಾಂತಿಗ್ರಾಮ ಜಿಲ್ಲಾ ಪಂಚಾಯಿತಿ ಕ್ಷೇತ್ರದ 47 ಮತಗಟ್ಟೆಗಳು ಇದೆ.

No comments:

Post a Comment