BHEEMA VIJAYA KARKAN25113/13/7/2015-TC HASSAN

ಯಾವ ಮಾನದಂಡದಿಂದ ಇವರು ರೌಡಿಗಳಂತೆ ಕಂಡರು?

ಹಾಸನದ ರೌಡಿಗಳು ಸಾರ್ ಕಾಮಿಡಿ ರೌಡಿಗಳು
ಮಲ್ನಾಡ್ ಮೆಹಬೂಬ್
-------------------------------

(ಕಳೆದ ಮಂಗಳವಾರದಿಂದ)
ಸಕಲೇಶಪುರದ ಕಾಮಿಡಿ ರೌಡಿಗಳ ವಿಚಾರ ಕಾಮೇಡಿ ಕಿಲಾಡಿಗಳಾದ ರಿಚರ್ಡ್ ಲೂಯೀಸ್, ಪ್ರಾಣೇಶ್,ಕೃಷ್ಣೇಗೌಡ ಇವರುಗಳಿಗೆ ತಿಳಿದರೆ ನಗೆಹಬ್ಬ ಕಾರ್ಯಕ್ರಮಕ್ಕೆ ಭಾರಿ ಸರಕಾಗಬಹುದು.
ಆನೆಮಹಾಲ್ ಗ್ರಾಮದ ಕೌಡಹಳ್ಳಿಯಲ್ಲಿ ರೇವು ಎಂಬ ದಲಿತ ನಿದ್ದಾನೆ. ನಾನು ಬಿಎಸ್ಪಿಯಲ್ಲಿದ್ದಾಗ ನನ್ನ ಪರಮ ಶಿಷ್ಯ ಇವನು, ಈಗ ಕುಡಿದು-ಕುಡಿದು ಅಸ್ಥಿ ಪಂಜರವಾಗಿದ್ದಾನೆ. ದಲಿತ ಚಳವಳಿಯಲ್ಲಿ ಗುರುತಿಸಿ ಕೊಳ್ಳುವ ಅಟೋ ಓಡಿಸಿ ಜೀವನ ಸಾಗಿಸುವ ರಮೇಶ, ಅಣ್ಣಪ್ಪ, ದೇವರಾಜ್ ಕೀರ್ತಿ, ಮನೆ ಮುಂದೆ ವಿದ್ಯುತ್ ಕಂಬ ಹಾಕಬೇಡಿ ಎಂದು ಕಿರು ಜಲ ವಿದ್ಯುತ್ ಯೋಜನೆಯ ಗುತ್ತಿಗೆದಾರರ ವಿರುದ್ದ ಮಾತನಾಡಿದ ಕ್ಯಾನಹಳ್ಳಿಯ ಸುಬ್ಯಮಣ್ಯ ರೌಡಿಲೀಸ್ಟ್ನಲ್ಲಿದ್ದಾರೆ. ಹೀಗೆ ಅಮಾಯಕರ ಪಟ್ಟಿ ಮಾರುದ್ದವಿದೆ, ಪಿಎಫ್‍ಐ, ಸಂಘಪರಿವಾರದ ಪ್ರಮುಖರ ಹೆಸರುಗಳಿವೆ.
ಶಾಸಕರಿಗೊಂದು ಪ್ರಶ್ನೆ?
ಶಾಸಕ ಎಚ್.ಕೆ.ಕುಮಾರಸ್ವಾಮಿಯವರೇ… ನಮ್ಮನ್ನು ವಿರೋದಿಸುವರನ್ನು ಧಮನ ಮಾಡಲು ನೀವು ಅನುಸರಿಸುತ್ತಿರುವ ಮಾರ್ಗಸರಿಯೇ? ಊರಿನಲ್ಲಿ ನಡೆಯುವ ಯಾವುದೇ ಪ್ರಮುಖ ಆಗುಹೋಗುಗಳು ನಿಮ್ಮ ಗಮನಕ್ಕೆ ಬಾರದೆ ಇರುವುದಿಲ್ಲ. ಈ ರೌಡಿ ಲಿಸ್ಟ್ ಬಗ್ಗೆಯೂ ನಿಮ್ಮ ಗಮನಕ್ಕೆ ಬಾರದೆ ಹೋಗಿದೆ ಎಂಬುದಂತೂ ಸತ್ಯಕ್ಕೆ ದೂರವಾದ ಮಾತು ಬಿಡಿ. ಆಕಸ್ಮಾತ್ ತಿಳಿಯದೆ ಹೋಗಿದೆ ಎಂದಿಟ್ಟುಕೊಳ್ಳಿ. ಈ ರೌಡಿಪಟ್ಟಿಯಲ್ಲಿ ಅನೇಕ ಅಮಾಯಕರು ಇದ್ದರಲ್ಲ. ಅವರ ಬಗ್ಗೆಯಂತೂ ನಿಮಗೆ ಗೊತ್ತಿರಬೇಕಲ್ಲವೇ? ಇವರುಗಳು ಯಾವ ರೀತಿಯಲ್ಲಿ , ಯಾವ ಮಾನದಂಡದಿಂದ ಇವರು ರೌಡಿಗಳಂತೆ ಕಂಡರು? ನಿಮ್ಮ ಜೊತೆಯಲ್ಲೆ ಇರುವ ಬೆಕ್ಕನಹಳ್ಳಿ ನಾಗರಾಜ್ ರೌಡಿನಾ? ಇದನ್ನೆಲ್ಲಾ ಅವಲೋಕಿಸಿದರೆ ನಿಮಗೆ ಎಲ್ಲೂ ಕಾಮಿಡಿ ಎನಿಸಲಿಲ್ಲವೇ ಸ್ವಾಮಿ? ಸ್ವಲ್ಪ ಕೃಪೆ ಮಾಡಿ ನನ್ನ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡ್ತಿರಾ ಪ್ಲೀಸ್
ಗನ್, ಬುಲೆಟ್, ಲಾಟಿ ಇರೋದು ದುಷ್ಟರನ್ನು ಸದೆ ಬಡಿಯೊಕೆ ಅಂತ ಇದು ಸತ್ಯ.
ಚಳವಳಿಗಾರರ ಸ್ವಾಭಿಮಾನವೇ ಅವರ ತಾಕತ್ತು. ನೀವು ಗನ್ನು, ಲಾಟಿ ಹಿಡಿದುಕೊಂಡು ಮಾಡಲು ಹಿಂದೇಟು ಹಾಕುವ ಕೆಲಸಗಳನ್ನು ಚಳವಳಿಗಾರರು.
ಪೋಲಿಸರು ಸೆಲ್ಯೂಟ್ ಹೊಡಿಯುವ ಭ್ರಷ್ಟ ರಾಜಕಾರಣೀಗಳ ವಿರುದ್ದ ತೊಡೆತಟ್ಟಿ ಚಳವಳಿಗಾರರು ನಿಲ್ಲುತ್ತಾರೆ.
 ರಾಜಕಾರಣೀಗಳನ್ನು  `ಕಾಮೇಡಿ' ಮಾಡಿ ನಗುತ್ತಾರೆ ಚಳವಳೀಗಾರರು. ಸಮಾಜಘಾತುಕರನ್ನು ಎದುರಿಸುತ್ತಾರೆ, ಬೀದಿಗಿಳಿದು ಅನ್ಯಾಯದ ವಿರುದ್ದ ಪ್ರಶ್ನೆಮಾಡುತ್ತಾರೆ. ಆಳವಳೀಗಾರರಿಗೆ ರಾಜಕಾರಣಿಗಳ ಬೆಂಬಲವಿಲ್ಲ, ಪೆÇೀಲೀಸರು ವಿರುದ್ಧವಾಗಿದ್ದವು  ದ್ವನಿ ಎತ್ತುತ್ತಾರೆ
ಒಂದು ಮನವಿ. ಪೋಲಿಸರಲ್ಲಿ,  ರಾಜಕಾರಣಿಗಳ, ಪ್ರಯೋಜತ್ವದಲ್ಲಿ  ತಯಾರು ಮಾಡಿರುವ ರೌಡಿ ಪಟ್ಟಿಯನ್ನು ಸತ್ಯವೆಂದು ನಂಬಬೇಡಿ. ಈ ರೌಡಿ ಪಟ್ಟಿಯಲ್ಲಿರುವರನ್ನು ಒಮ್ಮೆ ಕರೆದು ಮಾತನಾಡಿಸಿ. ನಿಮಗೆ ನಗೆ ಹಬ್ಬದ ಕಾರ್ಯಕ್ರಮಕ್ಕೆ ಹೋದಷ್ಟು ಖುಷಿ ಸಿಗುತ್ತದೆ.
`ರೌಡಿಗಳಿಗ ಅವಮಾನ’
ಪೆÇೀಲಿಸರ ರೌಡಿ ಲಿಸ್ಟ್‍ನಿಂದಾಗಿ ` ಪ್ರಾಮಾಣಿಕ' ರೌಡಿಗಳಿಗ ಅವಮಾನವಾಗಿದೆ, ರೌಡಿ ಎಂಬ ಪದಕ್ಕೆ ಕಳಂಕ ಮಾತ್ರವಲ್ಲ ರೌಡಿ ಪದದ ಅತ್ಯಾಚಾರವಾಗಿದೆ ಎಂಬ ಅಪಸ್ವರ ಮಾಜಿ ರೌಡಿಗಳಿಂದ ಕೇಳಿಬರುತ್ತಿದೆ. ರೌಡಿಯಾಗಲು ಕನಿಷ್ಟ ಅರ್ಹತೆಗಳಿವೆ, ನೆಟ್ಟಗೆ ಕತ್ತಿ ಹಿಡಿಯದವರನ್ನು ರೌಡಿಗಳೆಂದು ಘೋಷಿಸಿರುವುದರಿಂದ ನಿಜವಾದ ರೌಡಿಗಳು ಊರುಬಿಡಲು ನಿರ್ಧರಿಸಿದ್ದಾರೆ ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ, ಮಟ್ಕಾ, ಕ್ಲಬ್, ವೇಶ್ಯಾವಾಟಿಕೆ, ಅಕ್ರಮ ಅವ್ಯವಹಾರ, ದಂಧೆ ಮಾಡಿ, ಮಹಡಿ ಮೇಲೆ ಮಹಡಿ ಕಟ್ಟಿರುವ ನಮ್ಮನ್ನೇ ಯಾರೂ ಗಡಿಪಾರು ಮಾಡಲಿಲ್ಲ, ಗಡಿಪಾರಿಗಾಗಿ ಭಾರಿ ಲಾಬಿ ಸಹ ನಡೆಸಿದ್ದೆವು, ನಮ್ಮ ಮನವಿಯನ್ನು ಕಸದ ಬುಟ್ಟಿಗೆ ಎಸೆದರು. ನಮಗೇನಾದರು ಗಡಿಪಾರ್ ಎಂದು ಘೋಷಿಸಿದ್ದರೆ ನಮ್ಮ ಇಮೇಜ್ ಇಂದಿಗೂ ಇರುತಿತ್ತು, ಒಬ್ಬ ರೌಡಿಗೆ ನೀಡಬೇಕಾಗಿದ್ದ ಹಾಗೂ ರೌಡಿ ಬಯಸುವ ಗಡಿಪಾರ್ ಬಿರುದನ್ನು ನೀಡದೆ ಚುನಾವಣೆ ಸಂದರ್ಭದಲ್ಲಿ ಕೆಲವರನ್ನು ಗಡಿಪಾರು ಮಾಡಲು ಮುಂದಾಗಿದ್ದ ಬಗ್ಗೆ ಕೆಂಡಕಾರುತ್ತಿದ್ದಾರೆ.
ನಮಗೆ ಅವಮಾನ ಮಾಡುವ ರೀತಿಯಲ್ಲಿ ಗಡಿಪಾರ್, ರೌಡಿ ಪದದ ಅರ್ಥವರಿಯದೆ `ಕಾಂಜಿ ಪಿಂಜಿ'ಗಳಿಗೆ ಬಳಸಿದ್ದಾರೆ ಎಂದು ತಮ್ಮನ್ನು ಕೆಲ ಪುಡಿ ರೌಡಿಗಳು `ಸ್ವಯಂ ಗಡಿಪಾರ್' ಘೋಷಿಸಿಕೊಂಡಿದ್ದಾರೆ.
ಮಾನ್ಯ ಮುಖ್ಯ ಮಂತ್ರಿಗಳಿಗೆ, ಗೃಹ ಮಂತ್ರಿಗಳಿಗೆ ಬೇಟಿ ಮಾಡಿ `ರೌಡಿ ಯಾಗಲು ಕನಿಷ್ಡ ಮಾನದಂಡ' ನಿಗದಿಪಡಿಸ ಬೇಕೆಂದು ಬಾರಿ `ವಾಚು ಮತ್ತು ಕೋಲಿಂಗ್ ಗ್ಲಾಸ್’ ಮೂಲಕ ಲಾಭಿ ನಡೆಸುತ್ತಾ ಒತ್ತಾಯಪೂರ್ವಕ ಮನವಿ ಮಡುತ್ತಿದ್ದಾರೆ ಎಂಬ ಜೋಕ್ಸ್ ಗಳು ಊರಿನಲ್ಲಿ ಕೇಳಿಬರುತ್ತಿವೆ.
ಇಲ್ಲಿಯವರೆಗೆ ಎಲ್ಲವೂ ಕಾಮಿಡಿಯಾಗಿ ನಡೆಯುತ್ತಿವೆ. ಮುಂದೆ ಎನಾಗುವುದು ಕಾದು ನೋಡಬೇಕಾಗಿದೆ.
( ಮುಂದನ ಮಂಗಳವಾರ ಹಾಸನದ ರೌಡಿ ಶಿಟರ್ ಮುಸವಿರ್ ಪಾಶ ಸಂದರ್ಶನ)

No comments:

Post a Comment