BHEEMA VIJAYA KARKAN25113/13/7/2015-TC HASSAN

ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮೇ.8 ರಿಂದ ಬ್ರಹ್ಮಕಳಶೋತ್ಸವ




ಸಕಲೇಶಪುರ: ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಅಷ್ಠಬಂಧ ಬ್ರಹ್ಮಕಳಶೋತ್ಸವ ಮೇ.8 ರಿಂದ ಮೂರು ದಿನಗಳ ಕಾಲ ನಡೆಯಲಿದೆ ಎಂದು ದೇವಸ್ಥನ ಸಮಿತಿ ಅಧ್ಯಕ್ಷ ಭಸ್ಕರನಾಯ್ಡು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಶುಕ್ರವಾರ ಈ ವಿಷಯ ತಿಳಿಸಿದ ಅವರು, ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಬ್ರಹ್ಮ ಕಳಶೊತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ದೇವಸ್ಥಾನದ ದುರಸ್ತಿ, ಶಬರಿಮೈ ದೇವಸ್ಥಾನದ ಮಾದರಿಯಲ್ಲಿ 18 ಮೆಟ್ಟಿಲುಗಳಿಗೆ ಪಂಚಲೋಹದ ಹೊದಿಕೆ ಹಾಗೂ ಬಾಗಿಲುಗಳಿಗೆ ಕವಚ ನಿಮಾಣ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅಷ್ಠಬಂಧ ಬ್ರಹ್ಮಕಳಶೋತ್ಸವ ಕಾರ್ಯಗಳು ಕೇರಳದ ರ್ಶರೀ ಶಿವಶಂಕರನ್ ನಂಬುದರಿಪಾಡ್ ಅವರ ನೇತೃತ್ವದಲ್ಲಿ ನಡೆಯಲಿದ್ದು, ದೇವಸ್ಥಾನ ಶುದ್ಧಿ ಪೂಜೆ, ಪಡಿಪೂಜೆಗಳು ಶಬರಿಮಲೈ ದೇವಸ್ಥಾನದ ಶ್ರೀ ಕೊರಟ್ಟಿಕೆರ ಹರಿಕೃಷ್ಣನ್ ನಂಬುದರಿಪಾಡ್ ಅವರ ಸಾರಥ್ಯದಲ್ಲಿ ನೆರವೇರಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಜೊತೆಗೆ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಎಲ್ಲಾ ರೀತಿಯಿಂದಲೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಬಹ್ಮ ಕಳಶೊತ್ಸವದ ಮೊದಲ ದಿನವಾದ ಮೇ.8 ರಂದು ಭಾನುವಾರ ಬೆಳಗ್ಗೆ 6 ಗಂಟೆಗೆ ಮಹಾಗಣಪತಿ ಪೂಜೆ, ಪೃಥ್ವಿಂಗರಿ ಹೋಮ, ರಾತ್ರಿ ಮಹಾ ಮಂಗಳಾರತಿ. ಸೋಮವಾರ ಬೆಳಗ್ಗೆ 5.30ಕ್ಕೆ ಅಷ್ಟಧ್ರವ್ಯ ಮಹಾಗಣಪತಿ ಹೋಮ, ಉಷಪೂಜೆ, ನವಗಾಭಿಷೇಕ, 25 ಕಳಶಾಭಿಷೇಕ ಪೂಜೆ, ಸಂಜೆ 6.30ಕ್ಕೆ ಮಹಾ ಸುದರ್ಶನ ಹೋಮ, ಭಗವತಿ ಸೇವೆ. ಕೊನೆಯ ದಿನವಾದ ಮಂಗಳವಾರ ಬೆಳಗ್ಗೆ 10.30ಕ್ಕೆ 25 ಕಳಶಾಭಿಷೇಕ, ನವಗ್ರಹಪೂಜೆ, ಸಂಜೆ ಮಹಾ ದೀಪಾರಾದನೆ, ಪಡಿಪೂಜೆ, 60 ಕೆ.ಜಿ ಹೂಗಳಿಂದ ಪುಷ್ಪಾಭಿಷೇಕ ನಡೆಯಲಿದೆ. ಜೊತೆಗೆ ಮೂರು ದಿನ ಬೆಳಗ್ಗೆ, ಮದ್ಯಾಹ್ನ ಹಾಗೂ ಸಂಜೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.
ದೇವಸ್ಥಾನದ ಆವರಣದಲ್ಲಿರುವ 18 ಮೆಟ್ಟಿಲುಗಳ ಮೂಲಕ ಇನ್ನು ಮುಂದೆ ದೇವಸ್ಥಾನ ಪ್ರವೇಶಿಸಲು ಭಕ್ತರಿಗೆ ಅವಕಶವಿರುವುದಿಲ್ಲ. ಪಡಿಪೂಜೆ ನಡೆಸುವ ಕಾರಣ ಅಯ್ಯಪ್ಪ ಮಾಲಧಾರಿಗಳು ಹಾಗೂ ವ್ರತ ಇರುವವರಿಗೆ ಮಾತ್ರ ಈ ಮೆಟ್ಟಿಲುಗಳಲ್ಲಿ ಸಾಘಲು ಅವಕಾಶವಿರುತ್ತದೆ. ಇತರೆ ಭಕ್ತರಿಗೆ ಪ್ರತ್ಯೇಕ ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಅಭಿವೃದ್ಧಿಯನ್ನು ಸುಮಾರು 40 ಲಕ್ಷ ರೂ.ವೆಚ್ಛದಲ್ಲಿ ನಡೆಸಲಾಗುತ್ತಿದ್ದು ಈಗಾಗಲೆ ಸುಮಾರು 25 ಲಕ್ಷ ರೂ.ವೆಚ್ಛದ ಕೆಲಸಗಳು ಮುಗಿದಿದ್ದು ಉಳಿದ ಕೆಲಸ ಕಾರ್ಯಗಳು ಬಾಕಿ ಇವೆ. ದೇಣಿಗೆ ನೀಡ ಬಯಸುವ ಭಕ್ತರು 9844435808, 9945033974 ಸಂಖ್ಯೆಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಮನವಿ ಮಾಡಿದರು.

No comments:

Post a Comment