BHEEMA VIJAYA KARKAN25113/13/7/2015-TC HASSAN

ವರ್ಷದ ಪ್ರಯತ್ನಕ್ಕೆ ಸಿಕ್ಕ ಜಯ: ಶೃಂಗೇರಿ ಜಗದ್ಗುರುಗಳ ಪುರಪ್ರವೇಶ





ಸಕಲೇಶಪುರ: ವರ್ಷದಿಂದ ನಡೆಸಿದ ಪ್ರಯತ್ನದ ಫಲವಾಗಿ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶಂಕರಾಚಾರ್ಯ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಶಂಕರಾಚಾರ್ಯ ವಿಧುಶೇಖರ ಭಾರತೀ ಸ್ವಾಮೀಜಿ ಅವರ ಪುರಪ್ರವೇಶ ಕಾರ್ಯಕ್ರಮ ಏ.25 ರಂದು ಸೋಮವಾರ ಆಯೋಜನೆಗೊಂಡಿದೆ ಎಂದು ಗುರುವಂದನಾ ಸ್ವಾಗತ ಸಮಿತಿ ಪ್ರಚಾರ ವಿಭಾಗದ ಅಧ್ಯಕ್ಷ ಲಕ್ಷ್ಮಿನಾರಾಯಣ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿದ ಅವರು, ರ್ಶರೀಗಳು ಸೋಮವಾರ ಸಂಜೆ 5.30ಕ್ಕೆ ಪುರಪ್ರವೇಶ ಮಾಡಲಿದ್ದು ಎಸ್‍ಬಿಎಂ ಮುಂಭಾಗದಿಂದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ವರೆಗೆ ವಿವಿಧ ಮಂಗಳ ವಾದ್ಯಗಳು ಹಾಗೂ ಪೂರ್ಣಕುಂಭ ಮೇಳದೊಂದಿಗೆ ಉತ್ಸವ ನಡೆಸಲಾಗುವುದು. ನಂತರ ಪ್ರವಚನ, ಬ್ರಾಹ್ಮಣ ಸಮಾಜದ ಅಧ್ಯಕ್ಷರಿಂದ ಧೂಳಿ ಪಾದಪೂಜೆ, ಭಿನ್ನವತ್ತಳೆ ಸಮರ್ಪಣೆ ಕಾರ್ಯಕ್ರಮದಲ್ಲಿ ಪಲ್ಗೊಳ್ಳುವರು ಎಂದರು.
ಮಾರನೆ ದಿನ ಮಂಗಳವಾರ ಬೆಳಗ್ಗೆ 9 ಗಂಟೆಗೆ ಸಕಲೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ಪ್ರವಚನ, ಮಂತ್ರಪುಷ್ಪ ಮಂಗಳಾರತಿ ನಡೆಯಲಿದೆ. ನಂತರ ಬ್ರಾಹ್ಮಣ ಬೀದಿಯಲ್ಲಿರುವ ಗಾಯಿತ್ರಿ ವಿಪ್ರ ಸಮುದಾಯ ಭವನವನ್ನು ಸ್ವಾಮೀಜಿಗಳು ಲೋಕಾರ್ಪಣೆಗೊಳಿಸಲಿದ್ದು 10 ಗಂಟೆಗೆ ಓಂ ಮಂದಿರದಲ್ಲಿ ಶ್ರೀ ಚಂದ್ರಮೌಳೇಶ್ವರ ಪೂಜೆ, ಫಲಪುಷ್ಪ ಸಮರ್ಪಣೆ, ಭಕ್ತರಿಂದ ಪಾದಪೂಜೆ, ದೀಕ್ಷಾವಂದನೆ, ಕಾಣಿಕೆ ಸಮರ್ಪಣೆ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದರು.

No comments:

Post a Comment