ಸಕಲೇಶಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಸಭೆಯನ್ನು ತಾಲ್ಲೂಕಿನ ದಲಿತ ಸಮೂದಾಯದ ಪ್ರಮುಖರ ಗಮನಕ್ಕೆತಾರದೆ ಕಾಟಾಚಾರಕ್ಕೆ ನಡೆಸುತ್ತಿದ್ದಾರೆ. ಇದರಿಂದಾಗಿ ತಾಲ್ಲೂಕಿನ ದಲಿತರ ಸಮಸ್ಯೆಗಳಿಗೆ ಪ್ರಾಮಾಣೀಕವಾದ ಪರಿಹಾರ ಸಾದ್ಯವಾಗುತ್ತಿಲ್ಲಾ ಎಂದು ದಲಿತ ಮುಖಂಡರು ಆರೋಪಿಸಿದರು.
ಪಟ್ಟಣದಲ್ಲಿ ಶುಕ್ರವಾರ ಯಸಳೂರು ಗ್ರಾಪಂ ಮಾಜಿ ಅಧ್ಯಕ್ಷ ದೇವೇಂದ್ರ, ಹೆತ್ತೂರು ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಎಚ್.ಎಂ.ಸೋಮಶೇಖರ್, ಬಾಳೆಕೆರೆ ಈರಯ್ಯ, ಚಂಗಡಿಹಳ್ಳಿ ಗ್ರಾಪಂ ಮಾಜಿ ಸದಸ್ಯ ನಿಂಗರಾಜು ಪತ್ರಿಕಾಗೋಷ್ಟಿ ನಡೆಸಿದರು.ಹಿತರಕ್ಷಣಾ ಸಭೆಯಲ್ಲಿ ಸ್ಥಳಿಯ ಶಾಸಕರು ಸೇರಿದಂತೆ ತಾಲ್ಲೂಕಿನ ಪ್ರಮುಖ ಅಧಿಕಾರಿಗಳು ಹಾಜಾರಾಗುವ ಸಭೆಯಲ್ಲಿ ಕೆಲವೆ-ಕೆಲವು ರಾಜಕಾರಣಿಗಳನ್ನು ಹಾಗೂ ಅಧಿಕಾರಿಗಳಿಗೆ ಬೇಕಾದ ಮುಖಂಡರನ್ನು ಕರೆದು ಸಭೆ ನಡೆಸಲಾಗುತ್ತಿದೆ. ತಾಲ್ಲೂಕಿನ ಗ್ರಾಮ ಮಟ್ಟದ ನಾಗರೀಕನು ಈ ಸಭೆಯಲ್ಲಿ ಮಾಗವಹಿಸಿ ತನ್ನ ಸಮಸ್ಯೆಯನ್ನು ಹೇಳಿಕೊಳ್ಳುವಂತಹ ಮಟ್ಟದಲ್ಲಿ ಈ ಸಭೆ ಪ್ರಚಾರ ವಾಗಬೇಕು ಎಂದರು.
ಗ್ರಾಮೀಣ ಬಾಗದ ದಲಿತರು ಹೆಚ್ಚು ಸಮಸ್ಯೆಯಲ್ಲಿದ್ದು ಈ ಬಾಗದ ಜನರಿಗೆ ಯಾವುದೆ ಮಾಹಿತಿ ನೀಡಲಾಗುತ್ತಿಲ್ಲ. ಕಾಟಾಚಾರಕ್ಕೆ ಸಭೆನಡೆಸಿ ಸರಕಾರಕ್ಕೆ ವರದಿನೀಡಲಾಗುತ್ತಿದೆ. ಸಭೆಯಲ್ಲಿ ಪ್ರಸ್ತಾಪವಾಗುವ ಯಾವ ಸಮಸ್ಯೆಗಳು ಪರಿಹಾರವಾಗುತ್ತಿಲ್ಲಾ. ಎಸ್.ಸಿ , ಎಸ್ ಟಿ, ಗಳು ವಾಸಿಸುವ ಪ್ರದೇಶಗಳು ಕನಿಷ್ಟ ಮೂಲಭೂತ ಸಮಸ್ಯೆಗಳಿಂದ ತತ್ತರಿಸುತ್ತಿವೆ.
ಅಧಿಕಾರಿಗಳು ದಲಿತರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ, ಗ್ರಾಮ ಸಭೆಗಳಲ್ಲಿ ದಲಿತರ ಸಮಸ್ಯೆಗಳನ್ನು ಗಂಬೀರವಾಗಿ ಪರಿಗಣಿಸುವುದಿಲ್ಲ ತಾಲ್ಲೂಕಿನ ಹಿಂದುಳಿದ ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಅಧ್ಯಾನ ಮಾಡುತ್ತಿಲ್ಲ, ಸಮಗ್ರ ಮಾಹಿತಿಯನ್ನು ಕಲೆಹಾಕುತ್ತಿಲ್ಲ ಯಾವುದೆ ಸಮಗ್ರ ಅಂಕಿ-ಅಂಶಗಳು ಅಧಿಕಾರಿಗಲ್ಲಿ ಲಭ್ಯವಿರುವುದಿಲ್ಲ ಕುಡಿಯುವ ನೀರಿನ ಸಮಸ್ಯೆ ಮಿತಿಮೀರಿದೆ, ಹನಿ ನೀರಿಗಾಗಿ ದೂರ-ದೂರಕ್ಕೆ ತಿರುಗ ಬೇಕಾಗಿದೆ .
ಸರಕಾರದ ವಿವಿಧ ವಿಷೇಶ ಘಟಕ ಯೋಜನೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲಾ. ಆರ್ಥಿಕ ಯೋಜನೆಗಳು ಅರ್ಹಪಲಾನುಭವಿಗಳಿಗೆ ದೋರಕುತ್ತಿಲ್ಲಾ. ಸ್ಮಶಾಣದ ಸಮಸ್ಯೆ ತಾಲ್ಲೂಕಿನ ದಲಿತರನ್ನು ಕಾಡುತ್ತಿದೆ. ಸರಕಾರ ಮಂಜೂರು ಮಾಡಿರುವ ಸ್ಮಾಶಣದ ಭೂಮಿ ಒತ್ತುವರಿಯಾಗಿದೆ. ವಸತಿ ಹೀನರಿಗೆ ಮನೆನಿರ್ಮಿಸಿಕೊಡುತ್ತಿಲ್ಲ.
ಸರಕಾರ ದಲಿತರಿಗೆ ವಿವಿಧಯೋಜನೆಯಡಿಯಲ್ಲಿ ಭೂಮಿ ಮಂಜೂರು ಮಾಡಿದೆ ಸಾಗುವಳಿ ಚೀಟಿಯನ್ನು ನೀಡಿದೆ ಆದರೆ ಇಲ್ಲಿಯವರೆಗೂ ಭೂಮಿ ಸಿಕ್ಕಿಲ್ಲ. ಅಗತ್ಯ ದಾಖಲೆಗಳನ್ನು ಅಧಿಕಾರಿಗಳು ದುರುದ್ದೇಶದಿಂದ ನಾಶಮಾಡಿದ್ದಾರೆ. ಭೂಮಿ ವಿಚಾರವನ್ನು ಗಂಬೀರವಾಗಿ ಪರಿಗಳಿಸುತ್ತಿಲ್ಲ.
ಅಂಬೇಡ್ಕ್‍ರ್ ಭವನ ಕಾಮಾಗಾರಿ ಅರ್ದಕ್ಕೆ ನಿಂತು ಹೋಗಿದೆ. ಕಾಮಾಗಾರಿ ಮುಂದುವರೆಯುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ಹೋಬಳಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅಂಬೇಡ್ಕರ್ ಭವನಕ್ಕೆ ಭೂಮಿ ಮಂಜೂರಾಗಿದ್ದರು ಕಟ್ಟಡ ಕಾಮಾಗಾರಿಗೆ ಅಗತ್ಯ ಆರ್ಥಿಕ ನೆರವು ಸಿಗುತ್ತಿಲ್ಲ. ಎಸ್.ಸಿ , ಎಸ್ ಟಿ, ವಿಧ್ಯಾರ್ಥಿಗಳ ವಸತಿ ನಿಲಯಗಳಲ್ಲೂ ಮೂಲಭೂತ ಸಮಸ್ಯೆಗಳಿವೆ. ತಾಲ್ಲೂಕಿನಲ್ಲಿ ದಲಿತರಿಗೆ ಪೋಲಿಸ್ ಇಲಾಖೆಯಿಂದ ರಕ್ಷಣೆಯಿಲ್ಲ ಇಂತಹ ಅನೇಕ ಸಮಸ್ಯೆಗಳು ಇಲ್ಲಿಯ ದಲಿರನ್ನು ಕಾಡುತ್ತಿವೆ. ಪೋಲಿಸರು ದಲಿತರ ಸಮಸ್ಯೆಗಳ ನಾಗರೀಕ ಸಮಸ್ಯೆಗಳನ್ನು ಸಭೆಯ ನಡವಳಿಕೆಗೆ ಹೋಟಲ್ ಗಳಲ್ಲಿ ಹಾಗೂ ಬೀದಿಯಲ್ಲಿ ದಲಿತರ ಸಹಿ ಹಾಕಿಸಿಕೊಳ್ಳುತ್ತಾರೆ. ಒಟ್ಟಾರೆ ತಾಲ್ಲೂಕು ಆಡಳಿತ ದಲಿತರ ಪಾಲಿಗೆ ಸತ್ತು ಹೋಗಿದೆ. ನಮ್ಮ ಸಮಸ್ಯಗಳಿಗೆ ತಾಲ್ಲೂಕು ಆಡಳಿತ ಪರಹಾರ ನೀಡದಿದ್ದರೆ ನಾವುಗಳು ಚಳವಳಿಯ ಹಾದಿ ಹಿಡಿಯ ಬೇಕಾಗುತ್ತದೆ.
ಹೋಳೆನರಸಿಪುರ ತಾಲ್ಲೂಕು ಸಿಗರನಹಳ್ಳಿಯಲ್ಲಿ ದಲಿತರಿಗೆ ಸರಕಾರಿ ಸಮೂದಾಯ ಭವನÀಕ್ಕೆ ಪ್ರವೇಶ ನೀಡದಿರುವುದನ್ನು ನಾವು ಖಂಡಿಸುತ್ತೇವೆ. ಪಟ್ಟಣದಲ್ಲಿ ಏ.29 ರಂದು ನಡೆಸಲು ಉದ್ದೇಶಿಸಿರುವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ದಲಿತ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಲಾಗಿದೆ ಎಂದು ಹೇಳಲಾಗಿತ್ತಿದೆ. ಆದರೆ ಬೆರಳೆಣಿಕೆಯ ಮುಖಂಡರನ್ನು ಹೊರತುಪಡಿಸಿ ಹಿಂದಿನಿಂದ ದಲಿತ ಚಳವಳಿಗಳಲ್ಲಿ ತೊಡಗಿಸಿಕೊಂಡ ಎಷ್ಟೊ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಪೂರ್ವಭಾವಿ ಸಭೆಗಳಿಗೂ ಕರೆದಿಲ್ಲ. ಈ ಕಾರ್ಯಕ್ರಮವು ಶಾಸಕರ ಮುಂದಾಳತ್ವದಲ್ಲಿಯೆ ನಡೆಯುತ್ತಿದ್ದು ದಲಿತರಲ್ಲಿಯೆ ಒಡಕು ಸೃಷ್ಟಿಸುವ ನೀತಿ ಅನುಸರಿಸುತ್ತಿರುವುದೇಕೆ ಎಂಬುದೆ ಅರ್ಥವಾಗುತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.
No comments:
Post a Comment