BHEEMA VIJAYA KARKAN25113/13/7/2015-TC HASSAN

ಸಿಗರನಹಳ್ಳಿ ಪ್ರಕರಣಕ್ಕೆ ನ್ಯಾಯನೀಡದ ಶಾಸಕ ಎಚ್ ಕೆ ಕುಮಾರಸ್ವಾಮಿ ವಿರುದ್ದ ಆಕ್ರೋಶ : ಶಾಸಕ ನೇತೃತ್ವದ ಅಂಬೇಡ್ಕರ್ ಜಯಂತಿ ಬಹಿಷ್ಕರಿಸಲು ದ ಸಂ ಸ ಮನವಿ




ಸಕಲೇಶಪುರ: ದಲಿತರ ಮತ್ತು ಒಕ್ಕಲಿಗರ ನಡೆವೆ ಬಿರುಕಿಗೆ ಕಾರಣವಾಗಿರುವ  ಹಾಗೂ ಸಿಗರನಹಳ್ಳಿ ಪ್ರಕರಣಕ್ಕೆ ನ್ಯಾಯನೀಡದ ಶಾಸಕ ಎಚ್ ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಸಕಲೇಶಪುರದಲ್ಲಿ 29 ರಂದು ನಡೆಯಲಿರುವ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ತಾಲ್ಲೂಕಿನ ಜನತೆ ಬಹಿಷ್ಕರಿಸಲು ಎಂದು ದ ಸಂ ಸ ಮುಖಂಡ ಎಸ್ ಎನ್ ತಾಲ್ಲೂಕಿನ ಜನರಲ್ಲಿ ಮನವಿಮಾಡಿದ್ದಾರೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ದಲಿತ ಸಂಘಟನೆಗಳು ಮಾಡುವ ಕಾರ್ಯಕ್ರಮಗಳನ್ನು ನಾವು ವಿರೋದಿಸುವುದಿಲ್ಲ  ಆದರೆ ದಲಿತವಿರೋದಿ ಶಾಸಕ ಎಚ್ ಕೆ ಕುಮಾರ ಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ನಮ್ಮ ವಿರೋದವಿದೆ ಎಂದರು

ಜಿಲ್ಲೆಯ ದಲಿತ ಜನಪ್ರತಿನಿಧಿಯಾಗಿ ಶಾಸನ ಸಭೆಯಲ್ಲಿ ದಲಿತರ ದೌರ್ಜನ್ಯದ ವಿರುದ್ದ ದನಿ ಎತ್ತಬೇಕಾಗಿದ್ದ ಶಾಸಕ ಎಚ್ ಕೆ ಕುಮಾರ ಸ್ವಾಮಿ ` ತನ್ನ ಕರ್ತವ್ಯವನ್ನು ಸಂವಿಧಾನ ಬದ್ಧವಾಗಿ ನಿರ್ವಹಿಸದಕಾರಣ ಎಂದು ಹೊಳೆನರಸಿಪುರ  ಸಿಗರನಹಳ್ಳಿ ಪ್ರಕರಣ ದೇಶದಲ್ಲೆ ಚರ್ಚೆಗೆ ಗ್ರಾಸವಾಗಿದೆ ಎಂದರು.
ಸಿಗರನಹಳ್ಳಿಯ ಸಮಸ್ಯೆಯನ್ನು ಮಾನವಿಯತೆ ಮತ್ತು ಸಂವಿಧಾನದ ಅಡಿಯಲ್ಲಿ ಬಗೆಹಿಸಬೇಕಾಗಿದ್ದ ಜವಾಬ್ದಾರಿ ಶಾಸಕ ಎಚ್ ಕೆ  ಕುಮಾರಸ್ವಾಮಿಯವರದಾಗಿತ್ತು ಆದರೆ ತನ್ನ ಕರ್ತವ್ಯವನ್ನು ಮರೆತು ಓಟು ರಾಜಕಾರಣದ ಹಿತಕ್ಕೆ ಜೋತು ಬಿದ್ದು  ಪತ್ರಕರ್ತರ ಮೇಲೆ ಹಾಗೂ ಪೋಲಿಸರ ಮೇಲೆ ದೌರ್ಜನ್ಯ ನಡೆಸಿದ ದಲಿತ ವಿರೋಧಿ ಕಿಡಿಗೇಡಿಗಳ  ಪರ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದು ಅಮಾನವೀಯ ಇದು ನಾಗರೀಕ ಸಮಾಜ ಕ್ಷಮಿಸಲಾಗದಂತಹ ಅನಾಗರಿಕತೆಯಾಗಿದೆ ಎಂದರು.
ಸಿಗರನಹಳ್ಳಿಯ ಪ್ರಕರಣಕ್ಕೆ ಸಂಬಂದಿಸಿದಂತೆ ಜೆಡಿಎಸ್  ರಾಜಕೀಯ ಲಾಭ ಪಡೆಯಲು ಮುಂದಾಗಿದೆ. ದಲಿತರು ಸಿಗರನಹಳ್ಳಿಯಲ್ಲಿ ಒಕ್ಕಲಿಗರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂಬಂತೆ ಜೆಡಿಎಸ್  ಸುಳ್ಳು ಸುದ್ದಿ ಹರಡಿಸಿದೆ. ರಾಜ್ಯದ ಜನ ಜೆಡಿಎಸ್ ಪಕ್ಷವನ್ನು ಮೂಲೆಗುಂಪು ಮಾಡಿದ್ದಾರೆ. ಇದರಿಂದ ಹತಾಶರಾಗಿರುವ ದೇವೇಗೌಡ ಮತ್ತು ಮಕ್ಕಳು ರಾಜಕೀಯ ಕುತಂತ್ರ ನಡೆಸಲು ಮುಂದಾಗಿದ್ದಾರೆ ಎಂದರು
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಯೊಂದಿಗೆ ಸೇರಿ ರಾಜ್ಯದ ಅಧಿಕಾರ ಹಿಡಿಯಲು ಮುಂದಾಗಿರುವ ಜೆಡಿಎಸ್ ಒಕ್ಕಲಿಗರ ಮತಬ್ಯಾಂಕ್ ರಾಜಕಾರಣಕ್ಕೆ ಮುಂದಾಗಿ ಈ ರೀತಿಯಾಗಿ ವರ್ತಸುತ್ತಿದೆ. ದಲಿತರು , ಒಕ್ಕಲಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಕಾಂಗ್ರೇಸ್ ಇದಕ್ಕೆ ಬೆಂಬಲ ನೀಡುತ್ತಿದೆ ಎಂದು ಸುಳ್ಳು ಪ್ರÀಚಾರ ನಡೆಸಿ ದೇವೇಗೌಡ ಮತ್ತು ಮಕ್ಕಳು ಮುಂದಾಗಿದ್ದಾರೆ ಇದಕ್ಕೆ ಇಲ್ಲಿ ಶಾಸಕ ಎಚ್ ಕೆ ಕುಮಾರ ಸ್ವಾಮಿ ಸಾತ್ ನೀಡುತ್ತಿದ್ದಾರೆ ಎಂದರು
ಸಿಗರನಹಳ್ಳಿಯಲ್ಲಿ ದೇವಸ್ಥಾನ ಪ್ರವೇಶ ಮತ್ತು ಸಮೂದಾಯ ಭವನ ಪ್ರವೇಶ ವಿಚಾರ ದಲಿತ ಸಮೂದಾಯದ ಸ್ವಾಭೀಮಾನದ ಪ್ರಶ್ನೆಯಾಗಿದೆ, ದಲಿತರ ಸ್ವಾಭಿಮಾನ ಎತ್ತಿ ಹಿಡಿಯದ ಶಾಸಕರ  ನೇತೃತ್ವದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸರಿಯಲ್ಲ. ದಲಿತರು ಸ್ವಾಭಿಮಾನಿಗಳು  ಇತಿಹಾಸದ ಉದ್ದಕ್ಕೂ ಸ್ವಾಭಿಮಾನಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಅಂಬೇಡ್ಕರ್ ದಲಿತರ ಸ್ವಾಭಿಮಾನಕ್ಕಾಗಿ ಹೋರಾಡಿದರು.  ಅವರ ಹೆಸರಿನಲ್ಲಿ ಈ ರೀತಿಯ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದರು
ಸಿಗರನಹಳ್ಳಿ ಅಸ್ಪøಷ್ಯತೆ ಆಚರಣೆ ಪ್ರಕರಣದಲ್ಲಿ ದೇವೇಗೌಡರು ಹಸಿ ಸುಳ್ಳುಗಳನ್ನು ಹೇಳಿ ದಲಿತರ ವಿರುದ್ದ ಕತ್ತಿ ಮಸೆಯುತ್ತಿದ್ದು, ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಶೋಷಿತರ ಪರವಾಗಿ ಈ ವರೆಗೆ ಚಕಾರ ಎತ್ತದೆ ಚೌಕಾಸಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು ಎಂದರು
ಸಮುದಾಯ ಭವನ ಮತ್ತು ದೇವಸ್ಥಾನ ಪ್ರವೇಶ ವಿಚಾರದಲ್ಲಿ ಸಿಗರನಹಳ್ಳಿಯಲ್ಲಿ ಗಲಭೆ ನಡೆದು ಎಂಟು ತಿಂಗಳಾಗಿವೆ. ಆದರೆ ಶಾಸಕ ಕುಮಾರಸ್ವಾಮಿ ಅವರು ತಮಗೆ ಜನ್ಮ ನೀಡಿದ ತಾಲೂಕಿನಲ್ಲಿ ದಲಿತರ ಮೇಲೆ ಶೋಷಣೆ, ಅಸ್ಪøಷ್ಯತೆ ಆಚರಣೆ ನಡೆಯುತ್ತಿದ್ದರೂ ಅವರ ಪರವಾಗಿ ನಿಲ್ಲದೆ ತಮ್ಮ ತನವನ್ನು ಮರೆತಂತೆ ವರ್ತಿಸುತ್ತಿದ್ದಾರೆ. ಕೇವಲ ಜೆಡಿಎಸ್ ಹಾಗೂ ಓಟ್‍ಬ್ಯಾಂಕ್ ಗಳಿಗೋಸ್ಕರ ಶೊಷಿಸುವವರ ಪರವಾಗಿ ಹೇಳಿಕೆಗಳನ್ನು ನೀಡುವ ಅವರಿಗೆ ಶಾಸಕ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ ಎಂದರು.
ಇದೆ ತಿಂಗಳು 29 ರಂದು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪಟ್ಟಣದಲ್ಲಿ ನಡೆಸಲು ಉದ್ದೇಶಿಸಿರುವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಶಾಸಕರೆ ಮುಂದೆ ನಿಂತು ಎಲ್ಲಾ ಜವಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ದಲಿತರ ಪರವಾಗಿ ನಿಲ್ಲದೆ ಅಂಬೇಡ್ಕರ್ ವಾದಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿರುವ ಅವರಿಗೆ ಅಂತಹ ಮಹಾತ್ಮನ ಜನ್ಮ ದಿನಾಚರಣೆ ನಡೆಸುವ ಹಕ್ಕಿಲ್ಲ. ದಲಿತ ಸಮುದಾಯದವರೆ ಆ ಕಾರ್ಯಕ್ರಮವನ್ನು ನಡೆಸಿದರೆ ಅಡ್ಡಿ ಇಲ್ಲ. ಆದರೆ ಶಾಸಕರ ನೇತೃತ್ವದಲ್ಲಿ ನಡೆದರೆ ದಲಿತರು ಪಾಲ್ಗೊಳ್ಳಬಾರದು. ತಮ್ಮ ಹೆಸರನ್ನೂ ಸಹ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಅನುಮತಿ ಪಡೆಯದೆ ಮುದ್ರಿಸಿದ್ದು, ಈ ವರೆಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಪೂರ್ವಭಾವಿ ಸಭೆಗಳಿಗೂ ಕರೆದಿಲ್ಲ. ಕೇವಲ ಮತಗಳನ್ನು ಸಎಳೆಯುವ ಹುನ್ನಾರ ಎಂಬಂತೆ ನಡೆಸಲಾಗುತ್ತಿರುವ ಈ ಕಾರ್ಯಕ್ರಮಕ್ಕೆ ತಮ್ಮ ವಿರೋಧವಿದೆ ಎಂದರು.
ದೇವೇಗೌಡ ಸುಳ್ಳುಗಾರ:
ಮಾಜಿ ಪ್ರಧಾನಿ ದೇವೇಗೌಡರು ಸಿಗರನಹಳ್ಳಿ ವಿಚಾರದಲ್ಲಿ ಮತ್ತೆ ಸುಳ್ಳು ಹೇಳಿ ದಲಿತರನ್ನು ಮತ್ತಷ್ಟು ಅಸ್ಪøಷ್ಯತೆಯ ಕೂಪಕ್ಕೆ ತಳ್ಳಲು ಪ್ರಯತ್ನಿಸುತ್ತಿದ್ದಾರೆ. ದಲಿತರು ಗರ್ಭಗುಡಿ ಪ್ರವೇಶಿಸಲು ಯತ್ನಿಸಿದ್ದರಿಂದ ಗಲಭೆ ಆರಂಭವಾಯಿತು ಎಂದು ಹೇಳಿಕೆ ನೀಡಿರುವ ಅವರು ಸರ್ವರ್ಣಿಯರ ಪರವಾಗಿ ನಿಂತು ದಲಿತರ ವಿರುದ್ದ ಕತ್ತಿ ಮಸೆಯುತ್ತಿದ್ದಾರೆ. ಇನ್ನು ಶಾಸಕ ಕುಮಾರಸ್ವಾಮಿ ಅವರು ಚೌಕಾಸಿ ರಾಜಕಾರಣ ಮಾಡುತ್ತಿದ್ದು, ರೇವಣ್ಣ ಹೇಳಿದಂತೆ ಕುಣಿಯುತ್ತಿದ್ದಾರೆ. ದಲಿತರು ದೇವಸ್ಥಾನ ಪ್ರವೇಶ ಮಾಡಲಿ. ಸಮುದಾಯ ಭವನ ಪ್ರವೇಶ ಕೈ ಬಿಡಲಿ ಎಂದು ಹೇಳುವ ಮೂಲಕ ಅಸ್ಪøಷ್ಯತೆ ಆಚರಣೆಗೆ ಮತ್ತೊಂದು ಮುನ್ನುಡಿ ಬರೆಯತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ದಸಂಸ ಜಿಲ್ಲಾ ಮುಖಂಡ ಟಿ.ಕೆ.ದೇವರಾಜು, ಮೀಸೆ ಮಂಜಯ್ಯ ಇದ್ದರು.







No comments:

Post a Comment