BHEEMA VIJAYA KARKAN25113/13/7/2015-TC HASSAN

ಹಾಲಂಬಿ ಉದ್ಯಮದ ಅನುಭವ ಪರಿಷತ್ತಿನಲ್ಲಿ ಸಾದಿಸಿದರು: ಜೈ ಮಾರುತಿ ದೇವರಾಜ್


ಸಕಲೇಶಪುರ: ನೌಕರರ ಹೋರಾಟ, ಹೋಟೆಲ್ ಉದ್ಯಮಕ್ಕೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಎತ್ತಣಿಂದೆತ್ತಣ ಸಂಬಂಧ ಎಂಬ ಪ್ರಶ್ನೆಗೆ ಉತ್ತರವಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗುವ ಮೂಲಕ ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಪ್ರೀತಿ, ವಿಶ್ವಾಸವಿಟ್ಟುಕೊಂಡರೆ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು ಪುಂಡಲೀಕ ಹಾಲಂಬಿ ಎಂದು ಕ ಸಾ ಪ ಅಧ್ಯಕ್ಷ ಜೈ ಮಾರುತಿ ದೇವರಾಜ್ ತಿಳಿಸಿದರು.

ಪಟ್ಟಣದ ರೋಟರಿ ಸಬಾಂಗಣದಲ್ಲಿ ನಡೆದ ಕ ಸಾ ಪ ನಿಕಟಪೂರ್ವ ಅಧ್ಯಕ್ಷ  ಪುಂಡಲೀಕ ಹಾಲಂಬಿ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದ್ಯಮಿಯಾಗಿ ಪಡೆದ ಅನುಭªನ್ನು ದಿವಂಗತ ಪುಂಡಲೀಕ ಹಾಲಂಬಿ.  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾದಿಸಿ ತೋರಿಸಿದರು ಎಂದರು.
ಅಧ್ಯಕ್ಷರಾಗಿ ಆಯ್ಕೆಯಾದಾಗ ಪರಿಷತ್ತಿನಲ್ಲಿದ್ದ ನಿಧಿಗಳ ಒಟ್ಟು ಮೊತ್ತ 8.1 ಕೋಟಿ ರೂ. ಆಗಿದ್ದರೆ ಅವರು ಅಧ್ಯಕ್ಷ ಸ್ಥಾನದಿಂದ ಇಳಿಯುವ ಹೊತ್ತಿಗೆ ಅದು 13.07 ಕೋಟಿ ರೂ.ಗೆ ಬೆಳೆದುನಿಂತಿತ್ತು ಎಂದು ವಿವರಿಸಿದರು.
ಪರಿಷತ್ತಿನಲ್ಲಿ ಅತಿಥಿ ಸತ್ಕಾರಕ್ಕಾಗಿ ಪ್ರತಿ ತಿಂಗಳು ವೆಚ್ಚವಾಗುತ್ತಿದ್ದ 20 ಸಾವಿರ ರೂ. ಉಳಿಸಿದರು ಅಧ್ಯಕ್ಷರಾಗಿದ್ದ ಹೋಟೆಲ್ ಉದ್ದಿಮೆದಾರರ ಸಹಕಾರಿ ಬ್ಯಾಂಕ್‍ನಿಂದ ಪರಿಷತ್ತಿಗೆ ಪ್ರತಿ ವರ್ಷ 5 ಲಕ್ಷ ರೂ. ದೇಣಿಗೆ ಬರುವಂತೆ ಮಾಡಿದರು ಎಂದು ತಿಳಿಸಿದರು.
ಸಾಹಿತ್ಯ ಪರಿಷತ್ತಿನಿಂದ ಯಾವುದೇ ಗೌರವ ಸಂಭಾವನೆಯನ್ನಾಗಲೀ, ಸಭಾ ಭತ್ಯೆಯನ್ನಾಗಲೀ ಅಥವಾ ದೂರವಾಣಿ ವೆಚ್ಚವನ್ನಾಗಲೀ ಪಡೆಯಲಿಲ್ಲ ಇದರ ಪರಿಣಾಮ ಅವರು ಅಧ್ಯಕ್ಷರಾಗಿದ್ದ ನಾಲ್ಕು ವರ್ಷದಲ್ಲಿ ಪರಿಷತ್ತಿಗೆ 14 ಲಕ್ಷ ರೂ. ಉಳಿತಾಯವಾಗಿತ್ತು ಎಂದರು.
ಪರಿಷತ್ತಿನಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗುತ್ತಿಲ್ಲ ಎಂಬ ಆರೋಪಕ್ಕೆ ಉತ್ತರವಾಗಿ ಇದುವರೆಗೆ ಅವಕಾಶ ಸಿಕ್ಕದ ಸಮುದಾಯದವರನ್ನು ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿ ಮೂರು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದರು ಶ್ರವಾಣ ಬೆಳಗೋಳದಲ್ಲಿ ಡಾ|| ಸಿದ್ದಲಿಂಗಯ್ಯ ಅಧ್ಯಕ್ಷತೆಯಲ್ಲಿ ಸಮ್ಮೆಳನ ನಡೆಯಿತು ಎಂದು ತಿಳಿಸಿದರು.

ಕಾರ್ಯ ಕ್ರಮದಲ್ಲಿ ಚನ್ನ ವೇಣಿ ಎಂ ಶೆಟ್ಟಿ, ನಂದಿ ಕೃಪರಾಜು,  ಪತ್ರಕರ್ತರ ಸಂಘದ ಅಧ್ಯಕ್ಷ  ರವಿ ಕುಮಾರ್, ಮೆಡಿಕಲ್ ಶಿವು, ಮಲ್ನಾಡ್ ಮೆಹಬೂಬ್, ಪ್ರಸನ್ ಕುಮಾರ್ ಸಿ ಪಿ ಇಬ್ರಾಹಿಂ ಯಾದ್‍ಗಾರ್, ಬ್ರಾಬ್ಮಣರ ಸಂಘದ ಮೈಲಾರ್, ಸತೀಶ್. ಸುಂದರಮ್ಮ, ಕೌಸಲ್ಯ, ಆನಂದ್ ಸುವರ್ಣ, ಸಂಜೀತ್ ಶೆಟ್ಟಿ,  ಮುಂತಾದವರಿದ್ದರು.

No comments:

Post a Comment