BHEEMA VIJAYA KARKAN25113/13/7/2015-TC HASSAN

ಸಮಾಜವಾದೀ ಸಮಾಜ ಸ್ಥಾಪನೆಗೆ ಕಾರ್ಮಿಕರು ಒಂದಾಗ ಬೇಕು: ಮಲ್ನಾಡ್ ಮೆಹಬೂಬ್


ಸಕಲೇಶಪುರ: "ವಿಶ್ವದಾದ್ಯಂತ ಸಮಾಜವಾದೀ ಸಮಾಜದ ಸ್ಥಾಪನೆಗೆ ಕಾರ್ಮಿಕರು ಒಂದಾಗ ಬೇಕಾಗಿದೆ ಎಂದು ಪ್ರಗತಿ ಪರ ಸಂಘಟನೆಗಳ ಓಕ್ಕೂಟದ ಅಧ್ಯಕ್ಷ ಮಲ್ನಾಡ್ ಮೆಹಬೂಬ್ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಸಿಐಟಿಯು ಅಯೋಜಿಸಿದ್ದ ವಿಶ್ವ ಕಾರ್ಮೀಕ ದಿನಾಚಾರಣೆ ಕಾರ್ಯಕ್ರಮದಲಿ ್ಲ`ಬಂಡವಾಳಶಾಹಿ ಶೋಷಣೆಯಿಂದ ಆಜಾದಿ’ ಪುಸ್ತಕ ಬಿಡುಗಡೆ ಗೊಳಿಸಿ ಮಾತನಾಡಿದ ಅವರು, ಶೋಷಿತ ಕಾರ್ಮಿಕರು ಹಾಗೂ ಇತರ ಎಲ್ಲ ಶೋಷಿತ ವರ್ಗಗಳು ಒಂದಾಗಿ, ಈ ಶೋಷಕವರ್ಗದ ಅಮಾನುಷ ಆಡಳಿತಕ್ಕೆ ಅಂತ್ಯಹಾಡದಿದ್ದರೆ, ಸಂವಿಧಾನದಲ್ಲಿ ಘೋಷಿಸಲ್ಪಟ್ಟಿರುವ ಸಮಾಜವಾದವು ಕೇವಲ À ಆಶ್ವಾಸನೆಯಾಗುತ್ತದೆ.
ಮೇ ದಿನಾಚರಣೆಯ ಸಂದೇಶ, ಶೋಷಿತ ಕಾರ್ಮಿಕರು ಒಗ್ಗೂಡಿ, ವರ್ಗಹೋರಾಟಕ್ಕೆ ಮುಂದಾಗಿ, ಸಮಾಜವಾದಿ ಸಮಾಜ ಸ್ಥಾಪನೆಗೆ ಕಂಕಣಬದ್ಧರಾಗಬೇಕು ಎಂಬುದಾಗಿದೆ. ಬಂಡವಾಳಶಾಹಿ - ಸಾಮ್ರಾಜ್ಯಶಾಹಿ ಶೋಷಣಾಮಯ ವ್ಯವಸ್ಥೆಯನ್ನು, ಅಸಮಾನತೆ-ಅನ್ಯಾಯ-ಶೋಷಣೆಗಳನ್ನು ಶಾಶ್ವತಗೊಳಿಸುತ್ತಿರುವ ಭಾರತೀಯ ಆಳುವವರ್ಗಗಳ ಆಳ್ವಿಕೆಯನ್ನು ಕೊನೆಗೊಳಿಸಲು ಕಾರ್ಮಿಕರಿಂದ ಮಾತ್ರ ಸಾದ್ಯ ಎಂದರು.
1886 ಮೇ 1, ಕಾರ್ಮಿಕ ಹೋರಾಟಗಳ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ. ಆ ದಿನ ಅಮೆರಿಕೆಯಲ್ಲಿ ಸುಮಾರು ಐದು ಲಕ್ಷ ಜನ, ಎಂಟು ಗಂಟೆಯ ಕೆಲಸದ ದಿನಕ್ಕಾಗಿ ಪ್ರದರ್ಶನವನ್ನು ಹೂಡಿದ್ದರು. ಇವರಲ್ಲಿ ಸುಮಾರು ಎರಡು ಲಕ್ಷ ಜನ ಮುಷ್ಕರವನ್ನು ಹೂಡಿದ್ದರು. ಅಂದು ಚಿಕಾಗೋ ನಗರದಲ್ಲೇ 80 ಸಾವಿರ ಕಾರ್ಮಿಕರು ಮುಷ್ಕರವನ್ನು ಹೂಡಿದ್ದರು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೇಯ ರೋಗಿಗಳಿಗೆ ಹಣ್ಣು-ಹಂಪಲನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಿ ಐ ಟಿ ಯು ಜಿಲ್ಲಾ ಮುಖಂಡ ಹರೀಶ್, ತೋಟಕಾಮೀಕರ ಸಂಘದ  ಅಧ್ಯಕ್ಷೆ ಸುಶೀಲಾ. ಗ್ರಾ ಪಂ ನೌಕರರ ಸಂಘದ ಅಧ್ಯಕ್ಷ ಪರಮೇಶ್, ಸಿ ಐ ಟಿ ಯು ಮಹಿಳಾ ನಾಯಕಿ ಸೌಮ್ಯ, ನಂಜ ಮುಂತಾದವರಿದ್ದರು.


No comments:

Post a Comment