ಸಕಲೇಶಪುರ: ಇಲ್ಲಿಯ ಕಂದಾಯ ಇಲಾಖೆಯ ಸಮಾನ್ಯ ಅಧಿಕಾರಿಯೋಬ್ಬ ತನ್ನ ದಿಟ್ಟತನದಿಂದ ವ್ಯಕ್ತಿಯೊಬ್ಬ ಆಕ್ರಮಿಸಿ ಕೊಂಡಿದ್ದ 4 ಎಕ್ಕರೆ ಸರಕಾರಿ ಭೂಮಿ(ದಲಿತರ ಸ್ಮಶಾಣ ಸೇರಿದಂತೆ) ತೆರವು ಗೊಳಿಸಿ ಜನ ಮೆಚ್ಚುಗೇಗೆ ಪಾತ್ರವಾಗಿದ್ದಾರೆ.
ತಾಲ್ಲೂಕಿನ ಹಾನುಬಾಳು ಹೋಬಳಿ ಸಂಕಲಾಪುರ (ನಡು ಬೆಟ್ಟ) ಗ್ರಾಮದ ಸ್ಮಶಾಣದ ಭೂಮಿಯನ್ನು ಮಲ್ಲೇಶ್ ಎಂಬ ವ್ಯಕ್ತಿಯೊಬ್ಬ ಇತ್ತೀಜಿಗೆ ಆಕ್ರಮಿಸಿಕೊಂಡು ಶುಂಟಿ ಕೃಷಿ ಮಾಡಲು ಮುಂದಾಗಿದ್ದನ್ನು ಕಂಡು ಕಂದಾಯ ಇಲಾಖೆಯ ಪ್ರದೇಶಿಕ ನಿರಿಕ್ಷಕ ಈಶ್ವರ್, ತಹಸೀಲ್ದಾರ್ ನಾಗೇಶ್ ರವರ ಮೌಖಿಕ ಆದೇಶದ ಅನ್ವಯ ದಿಟ್ಟತನದಿಂದ ತೆರವು ಗೋಳಿಸಿ ತಮ್ಮ ಅಧಿಕಾರದ ಶಕ್ತಿಯನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಪ್ರಕರಣದ ಹಿನ್ನಲೆ:ದಲಿತ ಸಮೂದಾಯದವರಾದ ಮೊಗೇರ ಹಾಗೂ ಆದಿ ಕರ್ನಾಟಕ ಜನಾಂಗದವರು ಅನಾಧಿ ಕಾಲದಿಂದಲೂ ಈ ಸರ್ಕಾರಿ ಭೂಮಿಯನ್ನು ಶವ ಸಂಸ್ಕಾರ ಮಾಡುಲು ಹಾಗೂ ಶವ ಸುಡಲ ಉಪಯೋಗಿಸುತ್ತಿದ್ದರು.
ಮಲ್ಲೇಶ್ ಎಂಬುವವನು ಈ ಸ್ಮಶಾಣ ಜಾಗವನ್ನು ಆಕ್ರಮಿಸಿ ಜೆ.ಸಿ.ಬಿ ಯಂತ್ರ ತಂದು ಸಮಾಧಿಗಳನ್ನೆಲ್ಲ ದ್ವಂಸ ಮಾಡಿ. ಕುಡಿಯುವ ನೀರಿನ ಪೈಪ್ ಜಖಂ ಗೊಳಿಸಿ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿದ್ದ ಮರ ಗಿಡಗಳನ್ನು ಕಡಿದು ನಾಶ ಮಾಡಿದ್ದ.
ಗ್ರಾಮದ ದಲಿತ ಇಂದ್ರೇಶ್ರವರ ಮಗು ಮೃತಪಟ್ಟಿದ್ದಾಗ ಈ ಮಗುವಿನ ಶವ ಸಂಸ್ಕಾರ ಮಾಡಲು ಮಲ್ಲೇಶ್ ಬಿಟ್ಟಿರಲಿಲ್ಲ.
ಸಂಜೆಯಾಗುತ್ತಿದ್ದಂತೆ ಶವ ಕೊಳೆತು ನಾರುವ ಸಂದರ್ಭ ಬಂದಾಗ ಪೋಲಿಸರು ಮತ್ತು ತಹಸೀಲ್ದಾರ್ ಕೋರಿಕೆ ಮೇರೆಗೆ ಇನ್ನೆರೆಡು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸಿ ಕೊಡುತ್ತೇವೆಂದು ಭರವಸೆ ನೀಡಿದ್ದರಿಂದ ಅನಿವಾರ್ಯವಾಗಿ ಇಂದ್ರೇಶನ ಮನೆಯ ಹಿಂಬಾಗದಲ್ಲಿ ಸಂಸ್ಕಾರ ಮಾಡಲಾಗಿತ್ತು.
ಈ ಭೂಮಿ ಸರಕಾರಿ ಎಂದು ಸರ್ವೆರ್ ಸ್ಕೆಚ್ ಸಮೇಕ ವರದಿ ನೀಡಿದ್ದರು. ಅರಣ್ಯ ಇಲಾಖೆಯವರು ಸೀಜ್ ಮಡಿದ್ದ ಸೌದೆಗಳನ್ನು ಮಲ್ಲೇಶ್ ಅಕ್ರಮವಾಗಿ ಸಾಗಿಸಿದ್ದ ಅಲ್ಲದೆ ಸ್ಮಶಾಣ ಜಾಗದ ಮೇಲೆ ಶುಂಠಿ ಹಾಕುವ ಉದ್ದೇಶದಿಂದ ದನದ ಗೊಬ್ಬರವನ್ನು ತಂದು ಹಾಕಿದ್ದ.
ಪ್ರಕರಣಕ್ಕೆ ಸಂಬಂದಿಸಿದಂತೆ ದಲಿತ ಮುಖಂಡ ಎಸ್ ಎನ್ ಮಲ್ಲಪ್ಪ ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೂ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ದೂರು ನೀಡಿದ್ದರು ಈ ದೂರಿನ ಅನ್ವಯ ಪ್ರಭಾವಿಗಳ ಒತ್ತಡದ ನಡುವೆ ಈಶ್ವರ್ ಭೂಮಿ ಖಲ್ಲಾ ಮಾಡಿಸಿದರು.
ಪ್ರಶಂಸೆ: ಕಂದಾಯ ಇಲಾಖೆಯ ಪ್ರದೇಶಿಕ ನಿರಿಕ್ಷಕ ಈಶ್ವರ್ ದಿಟ್ಟತನದ ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಸರಕಾರಕ್ಕೆ 4 ಎಕ್ಕರೆ ಭೂಮಿ ಉಳಿಸಿ ಕೊಟ್ಟಿದ್ದಾರೆ. ದಲಿತರಿಗೆ ಸ್ಮಶಾಣ ದೊರತಂತಾಗಿದೆ ಎಂದು ದಲಿತ ಮುಖಂಡ ಎಸ್ ಎನ್ ಮಲ್ಲಪ್ಪ ಮತ್ತು ಗ್ರಾಮದ ದಲಿತರು ಶ್ಲಾಘಿಸಿದರು.
ಬೆದರಿಕೆ: ದಲಿತರ ಪರವಾಗಿ ನಿಂತು ಭೂಮಿ ತೆರವು ಗೊಳಿಸಿದ ಕಂದಾಯ ಇಲಾಖೆಯ ಪ್ರದೇಶಿಕ ನಿರಿಕ್ಷಕ ಈಶ್ವರ್ ರವರಿಗೆ ಭೂಮಾಲಿಕ ಮಲ್ಲೇಶ್ ಮತ್ತು ಕೆಲವು ಸಂಘಟನೆಯ ಪ್ರಮುಖರು ಶನಿವಾರ ತಾಲ್ಲೂಕು ಕಚೇರಿಗೆ ಬಂದು ಬೆದರಿಕೆ ಹಾಕಿರುವದನ್ನು ದ ಸಂ ಸ ಖಂಡಿಸಿದ್ದು ನಿಷ್ಟಾವಂತ ಅಧಿಕಾರಿಗಳಿಗೆ ಕಿರುಕುಳು ನೀಡುವರ ವಿರುದ್ದ ಕಾನೂನು ಕ್ರಮ ಕೈಗೂಳ್ಳುವಂತೆ ಒತ್ತಾಯಿಸಿದ್ದಾರೆ.
No comments:
Post a Comment