BHEEMA VIJAYA KARKAN25113/13/7/2015-TC HASSAN

ಗುಡಿ, ಚರ್ಚ್, ಮಸೀದಿ ಬಿಟ್ಟು ಹೊರ ಬನ್ನಿ ಬುದ್ಧ ಧರ್ಮ, ಅಂಬೇಡ್ಕರ್ ಮಾರ್ಗದಲ್ಲಿ ಹೋಗಲು ಬಂತೇಜಿ ಕರೆ


ಹಾಸನ: ಗುಡಿ, ಚರ್ಚ್ ಹಾಗೂ ಮಸೀದಿ ಬಿಟ್ಟು ಹೊರ ಬಂದು ಬುದ್ಧ ಧರ್ಮ, ಅಂಬೇಡ್ಕರ್ ಮಾರ್ಗದಲ್ಲಿ ಹೋಗುವಂತೆ ಕೊಳ್ಳೇಗಾಲದ ಭೋದಿರತ್ನ ಬಂತೇಜಿ ಕರೆ ನೀಡಿದ್ದಾರೆ.
     
ತಾಲ್ಲೂಕಿನ ದೊಡ್ಡಭಾಗನಹಳ್ಳಿ ಗ್ರಾಮದಲ್ಲಿ ಡಾ:ಬಿ.ಆರ್. ಅಂಬೇಡ್ಕರ್ ಯುವಕ ಸಂಘದವತಿಯಿಂದ ಶನಿವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೂರ್ಯ ಕತ್ತಲ ಹೋಗಲಾಡಿಸಿದಂತೆ ಅಂಬೇಡ್ಕರ್, ಬಸವಣ್ಣ, ಕನಕದಾಸರು ಜನ್ಮ ತಾಳಿ ಕತ್ತಲ ಮನುಷ್ಯನಲ್ಲಿರುವ ಕತ್ತಲ ಹೋಗಲಾಡಿಸಿದ್ದಾರೆ. ರಾಮ ರಾಮ ಎಂದು ಜಪಿಸಿದರೇ ವಾಸಿಸುವ ಮನೆಗೆ ಬಾಡಿಗೆದಾರ ಬಾಡಿಗೆ ಕೇಳಲು ಬಿಡುವುದಿಲ್ಲ. ಬುದ್ಧನ ಪ್ರಜಾರಾಜ್ಯದಲ್ಲಿ ಸರ್ವರಿಗೂ ಸಮಬಾಳು ನೀಡಿದೆ ಎಂದರು.

ಮಾರಮ್ಮನ ಹಬ್ಬ ಮಾಡಿ ಕುರಿ, ಕೋಳಿ ಕಡಿದರೇ ಸಾವಿರಾರು ರೂಗಳು ನಷ್ಟವಾಗುತ್ತದೆ ಅಷ್ಟೆ ಮತ್ಯಾವ ಪ್ರಯೋಜನವಿಲ್ಲ. ಅಂಬೇಡ್ಕರ್ ಹೇಳಿದ ಹಿಂದಿನ ಹಿಂದು ಧರ್ಮ ಆಗಿನ ಬುದ್ಧ ಧರ್ಮವಾಗಿತ್ತು. ಇರುವ ಎಲ್ಲಾರು ಮೂಲತಃ ಬೌದ್ಧ ಧರ್ಮದವರೆ ಆಗಿದ್ದಾರೆ. ಇದ್ದುದನ್ನು ಧಾನ ಮಾಡು ಆದರೇ ಕಳ್ಳತನ ಮಾಡಬೇಡಿ, ಶುದ್ಧ ಜೀವನ ನಡೆಸಿ, ಸುಳ್ಳು ಹೇಳುವುದು, ಚಾಡಿ ಮಾತು ಕೇಳದೆ ನಮ್ಮ ಕೆಲಸಕ್ಕೆ ಮಾತ್ರ ಹೆಚ್ಚು ಹೊತ್ತು ನೀಡಿದರೇ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.
     
 ಯಾವ ದೇವಸ್ಥಾನಕ್ಕೆ ಹೋಗಬೇಡಿ. ಯಾವ ದೇವ ದಿಣ್ಣರು ಇಲ್ಲ ಎಲ್ಲಾ ನೀವೆ ದೇವರು ಎಂದು ಅಂದೆ ಬುದ್ಧ ಭಗವಾನ್ ಹೇಳಿದ್ದಾರೆ. ಬುದ್ಧ ಧರ್ಮ ಒಂದು ಧರ್ಮವಲ್ಲ. ಅದು ಬದುಕುವ ಕಲೆ. ಜೊತೆಗೆ ಅಂಬೇಡ್ಕರ್ ಮಾರ್ಗದಲ್ಲಿ ಎಲ್ಲಾರು ಹೋಗಬೇಕು ಎಂದು ಕರೆ ನೀಡಿದರು.

ಹೆಚ್.ಎಸ್. ಪ್ರಕಾಶ್:
      ಕ್ಷೇತ್ರದ ಶಾಸಕ ಹೆಚ್.ಎಸ್. ಪ್ರಕಾಶ್ ಮಾತನಾಡಿ, ಅಂಬೇಡ್ಕರ್ ತತ್ವ ಸಿದ್ಧಾಂತಕ್ಕೆ ನಾವು ಬೆಲೆ ಕೊಡದಿದ್ದರೇ ಇಂತಹ ಕಾರ್ಯಕ್ರಮಗಳನ್ನು ನಡೆಸಿ ಯಾವ ಪ್ರಯೋಜನವಿಲ್ಲ. ಬುದ್ಧನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಅಂಬೇಡ್ಕರ್ ಅನೇಕ ಮಾಸ್ಟರ್ ಪದವಿ ಪಡೆದಿದ್ದಾರೆ. ಅವರು ಒಬ್ಬ ಮೇಧಾವಿ. ಸಂವಿಧಾನವನ್ನು ರಚನೆ ಮಾಡದಿದ್ದರೇ ನಾನು ಕೂಡ ಇಂದು ಇಂತಹ ವೇದಿಕೆಯಲ್ಲಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
     
ಯಾವುದೇ ಒಂದು ಸಾಧನೆಗೆ ಮನೆಯಲ್ಲಿನ ತಂದೆ-ತಾಯಿ ಹಾಗೂ ಹೆಂಡತಿ ಕಾರಣಕರ್ತರು ಆಗಿರುತ್ತಾರೆ ಎಂದು ಕಿವಿಮಾತು ಹೇಳಿದರು. ಗ್ರಾಪಂ ಮತ್ತು ಜಿಪಂನಲ್ಲಿ ಮೀಸಲಾತಿ ಇದ್ದರೂದೋಷಗಳು ನಡೆಯುತ್ತಿದೆ ಎಂದರು.

ಹೆಚ್.ಕೆ. ಕುಮಾರಸ್ವಾಮಿ :
      ಸಕಲೇಶಪುರ-ಆಲೂರು ಕ್ಷೇತ್ರದ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ ಮಾತನಾಡಿ, ಆಚರಣೆಗಳು ಹೆಚ್ಚಾಗಿದೆ ಅನುಕರಣೆಗಳು ಕಡಿಮೆಯಾಗಿದೆ. ಆದರೇ ಅಂಬೇಡ್ಕರ್ ಅವರ ಆಚರಣೆಗಿಂತ ಮುಖ್ಯವಾಗಿ ಅವರ ತತ್ವ ಸಿದ್ಧಾಂತವನ್ನು ಅರಿತುಕೊಂಡರೇ ಮಾತ್ರ ಅದಕ್ಕೆ ಅರ್ಥ ಬರುತ್ತದೆ ಎಂದು ಕಿವಿಮಾತು ಹೇಳಿದರು. ಇವರ ಜನ್ಮದಿನವನ್ನು ಇಡೀ ವಿಶ್ವದಾಧ್ಯಂತ ಆಚರಸಲಾಗುತ್ತಿದೆ. ಸಮಯ, ಶಿಸ್ತುಗಳಿಗೆ ಹೆಚ್ಚಿನ ಪ್ರಾದನ್ಯತೆಗೆ ಅಂಬೇಡ್ಕರ್ ಒತ್ತು ನೀಡಿದ್ದರು. ಅವರು ಎಂದು ಪುಸ್ತಕ ಬರೆಯುವುದು, ಭಾಷನ ಮಾಡುವುದನ್ನು ಎಂದು ಬಿಡಲಿಲಲ್ಲ. ದೇಶಕ್ಕೆ ಕೊಟ್ಟ ಸಂವಿಧಾನ ಇಂದು ಕೂಡ ಉಪಯೋಗವಾಗಿದೆ ಎಂದು ಹೇಳಿದರು. ಹಳ್ಳಿಗಳಲ್ಲಿ ನಡೆಯುವ ಮಾರಮ್ಮನ ಜಾತ್ರೆ ಇತರೆಗೆ ಹಣ ನೀಡುವಂತೆ ಶಾಸಕರ ನಿಧಿ ಕೇಳಿದರೇ, ದೊಡ್ಡಭಾಗನಹಳ್ಳಿ ಗ್ರಾಮದವರು ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ಹಣ ನೀಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕಾಗಿ ನಮ್ಮ ನಿಧಿ ಮತ್ತು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಕೂಡ ಸಹಾಯ ಮಾಡಲು ಹೇಳುವುದಾಗಿ ಭರವಸೆ ನುಡಿದರು.
     
ನಮಗೆ ಯುಗಾದಿ ಹಬ್ಬ ಮತ್ತು ಗೌರಿ ಹಬ್ಬ ಮುಖ್ಯವಲ್ಲ. ಏಪ್ರಿಲ್ 14ರಂದು ಜನ್ಮತಾಳಿದ ಅಂಬೇಡ್ಕರ್ ಜಯಂತಿ ನಮಗೆ ಯುಗಾದಿ. ಅವರು ಅಗಲಿದ ಡಿಸೆಂಬರ್ 6ರಂದು ದುಃಖದ ದಿನ ಗೌರಿ ಹಬ್ಬವಾಗಿದೆ. ಈ ಎರಡು ಹಬ್ಬಗಳು ನಮಗೆ ಮುಖ್ಯ ಎಂದು ಬಣ್ಣಿಸಿದರು. ಮೂಡ ನಂಬಿಕೆ ಬಿಟ್ಟು ಹೊರ ಬನ್ನಿ ಎಂದು ಇದೆ ವೇಳೆ ಕರೆ ನೀಡಿದರು.
   
 ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಹನುಮಂತಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಹೆಚ್.ಆರ್. ನವೀನ್ ಕುಮಾರ್, ಮಾಜಿ ತಾಪಂ ಅಧ್ಯಕ್ಷ ರಂಗಶೆಟ್ಟಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿನಾಕಲಗೂಡು, ಜಿಪಂ ಮಾಜಿ ಉಪಾಧ್ಯಕ್ಷ ಎಸ್. ದ್ಯಾವೇಗೌಡ, ರಾಮಚಂದ್ರ, ಜಗದೀಶ್, ಮೊಗಣ್ಣಗೌಡ ಇತರರು ಪಾಲ್ಗೊಂಡಿದ್ದರು.
     
       


No comments:

Post a Comment