ಹಾಸನ, ಮೇ 7- ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಇತರೆ ಇಲಾಖೆಯ ಸಿಬ್ಬಂದಿ ವರ್ಗದವರನ್ನು ಕರ್ತವ್ಯಲೋಪ ಮತ್ತು ದುರ್ನಡತೆಗಾಗಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತ್ತು ಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ಹಾಸನ ತಾಲ್ಲೂಕು ಸಾಲಗಾಮೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೆ.ಎಂ.ನಟರಾಜ್, ಹೊಳೆನರಸೀಪುರ ತಾಲ್ಲೂಕು ಆನೆ ಕನ್ನಂಬಾಡಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಎಸ್. ರಂಜಿನಿ, ಅರಸೀಕೆರೆ ತಾಲ್ಲೂಕು ಕಾಚಿಘಟ್ಟದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯರಾಮ್, ಚನ್ನರಾಯಪಟ್ಟಣ ಸಮಾಜ ಕಲ್ಯಾಣ ಇಲಾಖೆಯ ಗ್ರೂಪ್ ಡಿ. ನೌಕರ ಹೆಚ್.ಆರ್. ಹೇಮಣ್ಣ, ಹೊಳೆನರಸೀಪುರ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯ ಅಧೀಕ್ಷಕರಾದ ರಾಜೇಂದ್ರ ಸಾಮ್ಯುಯಲ್, ಪ್ರಥಮ ದರ್ಜೆ ಸಹಾಯಕರುಗಳಾದ ಕೆ.ವಿ.ತೀರ್ಥೇಶ್ ಮತ್ತು ಪಿ.ವಿ.ಲಕ್ಷ್ಮೀನಾರಾಯಣ, ಹಾಗೂ ದ್ವಿತೀಯ ದರ್ಜೆ ಸಹಾಯಕರಾದ ಹೆಚ್.ಎಲ್.ಹೇಮಂತಕುಮಾರ್ ಅವರುಗಳನ್ನು ಅಮಾನತ್ತು ಮಾಡಲಾಗಿದೆ.
No comments:
Post a Comment